ಸುಂದರ ಸ್ವಪ್ನ ಸುಧೆಯಲ್ಲಿ
ನಿನ್ನ ನೆನಪಿನಾ ಅಲೆ ತುಂಬಿ
ತೇಲಿ ಬರುತಿದೆ ಪ್ರತಿಬಿಂಬ
ನಿನ್ನ ಪ್ರತಿಬಿಂಬ ||

ಕಾಣದಾ ನಿನಾದ ಸೆರೆಯಲ್ಲಿ
ಸ್ವಚ್ಛಬಾಂದಳ ಮೋಡದಲಿ
ತೂಗುತಲಿದೆ ಎನ್ನ ಮನಸು
ನನ್ನ ಮನಸು ||

ಚದುರಿ ಚಿತ್ತ ಚದುರಂಗ
ಬಾಳ ಪುಟದಾ ಅಂತರಂಗ
ಕದಡಿ ಕಾಡುತ್ತಿದೆ ನಿನ್ನ ನೆನಪು
ನಿನ್ನ ನೆನಪು ||

ತುಡಿವ ಭಾವ ಕಾಮನಾ
ಲಹರಿ ವೀಣಾ ತಂತಿಯಾ
ವಿನೋದದಲಿ ಅಡಗಿದೆ ಜೀವನ
ನಮ್ಮ ಜೀವನ ಕನಸು ||
*****