ಪುನರ್ನವ

ಹೃದಯವು ದಣಿವಿಲಿ ನವೆದಿತ್ತು, | ಸ್ಪಂದಕೆ ಮರೆವೋ ಕವಿದಿತ್ತು
ಎಲ್ಲವು ಇತ್ತೆಂದಾಗಿತ್ತು, | ಮುಂದಕೆ ಇನ್ನಿಲ್ಲೆನಿಸಿತ್ತು
ಬಿಲ್ಲೇ ಕಳಚಿದೆ ಕೈಯಿಂದ, | ಹೆದೆ ಹರಿದಿದೆ ಒಳಹುರಿಯಿಂದ
ಕೈಗಳ ಹಿಡಿತವೆ ಸಡಿಲಾಗಿ, | ಎನಿಸಿದೆ ಆಗದು ಒಂದಾಗಿ
ಪ್ರಾಣಲಿಂಗವೇ ಹೊರಟಿರಲು, | ಹೊಸ ಮೈ ಹೊಸ ಜನ್ಮವೆ ಬರಲು
ಮುನ್ನೋಡದ ಹೊಸ ಹೊಸ ದೇಶ, | ಹೊಸ ಮುಖಗಳ
ಹೊಸ ಹೊಸ ವೇಷ

ಬಿಲ್ಲೆರುವದೇ ಗುರಿ ನೋಡಿ, | ಹೆದೆ ಹೊಂದಿಸಿ ಬಾಣವ ಹೂಡಿ
ವ್ಯರ್ಥ ಕರ್ಮಹತ ವಿಧಿ ವಕ್ರ, | ಮುಗಿವುದೆ ಪ್ರಾರಬ್ಧದ ಚಕ್ರ ?
ಕಲವು ಜೀವಗಳಗಲಿಸಿರೇ, | ಮತ್ತೆ ಅವರು ಒಂದಾಗುವರೇ ?
ಪ್ರೇಮವು ಹತವಾಗಿರೆ ವಿಕಲ | ಮರುಮೈ ಮಾಡುವದೇ ಸಫಲ ?
ಇಂದ್ರಿಯಗಳು ಅದ ಬಂಧಿಸವು, | ಎದೆಯ ತಂತಿಗಳು ಸಂಧಿಸವು
ಮರೆತಿದೆ ಪೂರಾ ಮುಮ್ಮನವು | ಆದರು ಆತ್ಮಕೆ ಘನ ನೆನೆವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರಹುಣ್ಣಿವೆ
Next post ವಾಗ್ದೇವಿ – ೪೬

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…