ವಾಗ್ದೇವಿ – ೪೬

ವಾಗ್ದೇವಿ – ೪೬

“ಆಹಾ! ಇಂತಾ ಅನ್ಯಾಯ ಈ ಊರಲ್ಲಿ ನಡೆಯುವದಾದರೆ ನಾನು ಮತ್ಯಾವ ಊರಿಗೆ ಹೋಗಲಿ! ಜೀವಧರಿಸಿ ನನ್ನ ಗಂಡನನ್ನು ಮಠದಲ್ಲಿ ಕೊಂದ ಮಾರೆಗಾರರ ಪಕ್ಷವನ್ನೇ ಸರ್ಕಾರದ ಜನರು ಹಿಡಿದ ಮೇಲೆ ಬಡ ವೆಯಾದ ನನ್ನ ಸಂಕಷ್ಟ ಯಾರಿಗೆ ಹೇಳಲಿ? ಭಗವಂತನೇ! ಹೇ ಜಿನೇಶ್ವರಾ! ಹೇ ಗೋಮಠೇಶ್ವರ ಸ್ವಾಮೀ!? ಎಂದು ನೇಮರಾಜನ ಪತ್ನಿಯು ನಡು ಬೀದಿಯಲ್ಲಿ ನಿಂತು ಬಾಯಿಬಡಕೊಂಡು ರೋದನ ಮಾಡಿದಳು. ಇಂಥಾ ಘೋರವಾದ ಗೋಳಾಟವನ್ನು ಕೇಳಿದ ಸಾಕ್ಷಿಕ ಜನರ ಹೃದಯ ಖೇದನ ವಾಯಿತು. “ಭಗವಂತನೇ! ಸತ್ಯಶಾಲಿಯೂ ಪರಾಕ್ರಮಿಯೂ ಕರುಣಾಳುವೂ ಆದ ಷಟ್ವುರಧರಾಧಿಸನ ರಾಜ್ಯದಲ್ಲಿ ಹೀಗೊಂದು ಅನಾಹುತ ಆಯಿತೇ? ಆಯಿತೆನ್ನುವಾ. ಅದರ ವಿಚಾರವನ್ನು ನ್ಯಾಯವಾಗಿ ಮಾಡತಕ್ಕವರು ಕಪಟ ನಾಟಕವನ್ನು ಮಾಡತೊಡಗಿ ಭೂಪತಿಯ ನಿಷ್ಕಳಂಕವಾದ ಕೀರ್ತಿಗೆ ಲಾಂಛನ ತರುವ ಹಾಗಿನ ದುರ್ಬುದ್ಧಿಯ ವಶವಾದರೇ?” ಎಂದು ನಿಜವಾಗಿ ವ್ಯಸನಪಟ್ಟರು. ಇದು ಅಧಿಕಾರಿಗಳಿಬ್ಬರಿಗೂ ಆಗಲೇ ವಿದಿತವಾಗಿ ಮನಸ್ಸಿಗೆ ವ್ಯಾಕುಲಹುಟ್ಟಿತು. ಆದಕೇನು ಮಾಡೋಣ. ವಾಗ್ದೇವಿಯೂ ಶೃಂಗಾರಿಯೂ ಚಂಚಲನೇತ್ರರ ಮೇಲಿನ ಕನಿಕರವೂ ಅವರಿಬ್ಬರನ್ನೂ ಕೈ ಸೆರೆ ಹಿಡಿದಾಗಿ ಹೋಗಿತ್ತು. ಮಾಯಾಪಾಶ ಬದ್ಧತೆಯಿಂದ ಸನ್ಮಾರ್ಗವನ್ನು ತ್ಯಜಿಸಿ ಕುಮಾರ್ಗವನ್ನು ಸೇರಿಹೋಯಿತು. ಇನ್ನೇನು ನಿವೃತ್ತಿಯಿದೆ? ಅನ್ಯಾಯ ದಿಂದ ಉಂಟಾಗುವ ಕೇಡು ಅನುಭವಿಸುವ ಬಡಬಗ್ಗರಿಗೆ ದೇವರೇ ಗತಿ. ಶಾಬಯ್ಯನು ಜನಾಪವಾದಕ್ಕೂ ಲೋಕನಿಂದೆಗೂ ಕಡೆಯಲ್ಲಿ ರಾಜ ಕೋಪಕ್ಕೂ ದೈವಕ್ಷೋಭಕ್ಕೂ ಗುರಿಯಾಗುವ ಸಂಭವ ಒದಗಿತಲ್ಲಾ ಎಂಬ ಪಶ್ಚಾತ್ತಾಪಕ್ಕೆ ಎಡೆಕೊಡುವೆನೆಂಬ ಹಾಗಿನ ಭಾವವು ಅವನ ಮುಖದ ಮುದ್ರೆಯಿಂದ ಕಂಡುಬಂದುದರಿಂದ ಭೀಮಾಜಿಯು ಅವನ ಸಮೀಪಕ್ಕೆ ಹೋದನು.

“ಸ್ವಾಮೀ! ಎದೆ ಕಲ್ಲಿನಂತೆ ಘಟ್ಟಿ ಮಾಡಿಕೊಳ್ಳದಿದ್ದರೆ ಇಂಧಾ ಕೆಲ ಸದಲ್ಲಿ ಕೈಹಾಕಿದವನು ಪರಿಣಾಮ ಆಗುವ ಕಾಲವುಂಟೇ? ದಿನತ್ರಯದಲ್ಲಿ ಭಸ್ಮೀಭೂತನಾಗಿ ಹೋಗಬೇಕಾಗುವುದು. ಸತ್ಯಾಸತ್ಯಾ ನಿಚಾರಮಾಡುವ ಸಂದರ್ಭವು ದುರ್ಮಾರ್ಗಪ್ರವರ್ತನೆಯ ಮಧ್ಯಭಾಗದಲ್ಲಿ ಸಿಕ್ಕುವದೇನು? ಆದಿಯಲ್ಲಿಯೇ ನೋಡಿಕೋಬೇಕಿತ್ತು. ಮುಖ್ಯ ಮಾಯಾ ಚಕ್ರವನ್ನು ಗರ ಗರನೆ ತಿರುಗಿಸುವ ಜಗತ್ಪತಿಯು ಪ್ರೇರಿಸಿದ ಬುದ್ಧಿಯಂತೆ ಮನುಷ್ಯನು ನಡಕೊಳ್ಳತಕ್ಕ ಪ್ರಾಣಿಯಾಗಿರುತ್ತಾ, ತಾನು ಮಾಡಿದೆ. ತಾನು ಮಟ್ಟಿದೆ, ಹಾಗೆ ಮಾಡಬಾರದಿತ್ತು. ಹೀಗೆ ಮಾಡಬೇಕಿತ್ತು, ಎಂಬ ಅಜ್ಞಾನವನ್ನು ಕಟ್ಟಿಕೊಂಡರೆ ಬುದ್ಧಿಯು ಕೆಟ್ಟುಹೋಗಿ ನಾನಾ ಬಾಧಕವೂ ಅಪಕೀರ್ತಿಯೂ ಉಂಟಾಗಿ ಎರಡೂ ಕೈಗಳಿಂದ ಉಣ್ಣ ಬೇಕಾಗುವದು. ಪರಾಕೆ! ಅಜ್ಞಾ,ನಾಂಧ ಕಾರವನ್ನು ಮನಸ್ಸಿನಿಂದ ಓಡಿಸಿಬಿಟ್ಟು ಮೊದಲೇ ಹಾಕಿಹೋದ ಪಾಯಕ್ಕೆ ಸರಿಯಾದ ಕಟ್ಟೋಣವನ್ನು ತೊಡಗುವದೇ ಜಾಣತನ; ವಿಕಲ್ಪವನ್ನು ದೂರಮಾಡಿರಿ. ಶತ್ರುಗಳನ್ನು ನಿಪಾತ ಮಾಡುವ ವೈನ ಶೀಘ್ರಮಾಡುವೆನು?” ಎಂದು ಧ್ರೈರ್ಯಹೇಳಿ ಕಾರ್ಭಾರಿಯ ಮನಸ್ಸಿನ ಚಾಂಚಲ್ಯವನ್ನು ಕೊತ್ವಾ ಲನು ದೂರ ಅಟ್ಟಿ ಬಿಟ್ಟನು.

ಭೀಮಾಜಿಯ ಅಭಿನವಜ್ಞಾನೋಪದೇಶವನ್ನು ಹೊಂದಿರುವ ಸಂಧಿ ಯಲ್ಲಿಯೇ ಅವರಿಬ್ಬರ ಸವಾರಿಯು ಮಠದ ಬಾಗಲಿಗೆ ಮುಟ್ಟಿತು. ಇದೇನು! ಬಡವರ ಮನೆಗೆ ನವನಿಧಿ ಅನಾಯಾಸನಾಗಿ ಬಂದ ಹಾಗಾಯಿತೆಂಬ ತನು ಪುಲಕದಿಂದ ವಾಗ್ದೇವಿಯು ತರುಣಿಮಣಿಯಾದ ಶೃಂಗಾರಿಯನ್ನು ಅಭ್ಯಾಗ ತರ ಮನಸ್ಸಿಗೂ ನಯನಗಳಿಗೂ ರಂಜನೆಯಾಗುವದಕ್ಕೋಸ್ಟರ ಮುಂಭಾ ಗದಲ್ಲಿ ನಿಲ್ಲಿಸಿ, ವಿಧವೆಯಾದ ತಾನು ಹಿಂಭಾಗದಲ್ಲಿ ನಿಂತುಕೊಂಡು, ಆಚೀಚೆ ನೋಡುವಷ್ಟರಲ್ಲಿ ಚಂಚಲನೇತ್ರರಿಗೆ ಈ ವರದಿ ಸಿಕ್ಕಿ, ಅವರು ತಾನೆ ಮಠದ ಬಾಗಲಿಗೆ ಬಂದು ಅಧಿಕಾರಸ್ಥರಿಬ್ಬರನ್ನು ಯಥೋಚಿತವಾಗಿ ಸನ್ಮಾನಿಸಿ ಅವರ ಸವಾರಿಯು ಅಂದು ಮಠಕ್ಕೆ ಚಿತ್ತೈಸುವದಕ್ಕೆ ವಿಶೇಷವಾದ ಕಾರಣ ವೇನಾದರೂ ಇದೆಯೋ ಎಂಬ ಆಲೋಚನೆಯಲ್ಲಿರುವಾಗ ಯತಿಯ ಇಂಗಿತ ವನ್ನು ತಿಳಿದು ಕೊತ್ವಾಲನು ಹೆದರುವ ಅವತ್ಯವಿಲ್ಲನೆಂದು ಅಭಯಸೂಚಕ ಸಂಸ್ಥೆಯನ್ನು ಕಣ್ಣಿನಿಂದ ತೋರಿಸಿ, ಸನ್ಯಾಸಿಯನ್ನು ಸ್ವಸ್ತಚಿತ್ತನಾಗಿ ಮಾಡಿ, ಅಪ್ರಾಸಂಗಿಕ ಮಾತುಗಳಿಂದ ತಕ್ಕಷ್ಟು ಸಮಯವನ್ನು ಬೇಕೆಂದು ಕಳೆದನು. ಹೀಗೆ ಅವಕಾಶ ಸಿಕ್ಕಿದೆ ವಾಗ್ದೇವಿಯು ನಿಮಿಷಮಾತ್ರದಲ್ಲಿ ದಿವ್ಯ ಫಲಹಾರ ಸಾಮಗ್ರಿಗಳನ್ನು ಹವಣಿಸಿ, ಕಾಫಿನೀರು, ಚಾನೀರು ವಿವಿದ ರುಚಿ ಕರವಾದ ಪಾನಕಾದಿಗಳನ್ನು ಪ್ರಾಣಸಖರ ಎದುರಿನಲ್ಲಿಟ್ಟು ಅವಸರ ಮಾಡದೆ ಅದನ್ನೆಲ್ಲಾ ಭುಂಜಿಸಿಬಿಟ್ಟು, ತನ್ನ ಕೃತಾರ್ಥತೆಯನ್ನು ಹೊಂದಬೇಕೆಂದು ಸವಿನಯವಾಗಿ ಬೇಡಿಕೊಂಡಳು. ಹಸಿದು ಬಂದ ಪುರುಷರೀರ್ವರೂ ಸಮ್ಮು ಖದಲ್ಲಿರಿಸಲ್ಪಟ್ಟ ತಿಂಡಿಯ ರಾಶಿಯನ್ನು ಮೋಹನಾಂಗಿಯರ ಮಧುರ ಸಂಭಾ ಷಣೆಯ ಮಹತ್ವದಿಂದ ಹೊಟ್ಟತುಂಬಾ ಉಂಡು, ತೇಗಿ, ತನುಮನ ಪರಿ ತೋಷಿತರಾಗಿ, ಮಠದೆ ಒಳಗೆಲ್ಲಾ ತಿರುಗಾಡಿ, ಗುಡಿಗಾರರು ಚಿತ್ರಗಳನ್ನು ಭಿತ್ತಿಗಳಲ್ಲಿ ಬರೆಯುವ ಚಮತ್ಕಾರವನ್ನು ನೋಡುತ್ತಾ ಅತ್ತಿತ್ತ ಚಲಿಸಿ, ಉದರ ಲಘುತ್ವವನ್ನು ಪಡೆದು ಪೂರ್ವಾಹ್ನ ಊಟದ ಸಮಯ ಸಮಿಪಿಸು ವದೆಂಬ ನೆವನದಿಂದ ಪುಣ್ಯವಂತರಿಬ್ಬರೂ ಬೀದಿಗಿಳಿದರು.

ಭೀಮಾಜಿಯ ವಕ್ರ ಜ್ಞಾನೋಪದೇಶದಿಂದ ಪಾಪಭಯವನ್ನು ನಿಶ್ಶೇ ಷವಾಗಿ ಹೋಗಲಾಡಿಸಿಕೊಂಡ ಶಾಬಯ್ಯನು ತನ್ನ ಮನೆಗೆ ಮರಳಿ ಹೊಗುತ್ತಾ, “ಅಯ್ಯಾ ಭೀಮಾಜೀ, ಆ ತಿಗಣೆ ಮರಿಯಂತಹ ವಕೀಲನ ಉಪಟಳವಿನ್ನೆಷ್ಟಿರುವುದೋ? ಇಷ್ಟು ಹೊತ್ತು ಅವನ್ಯಾವ ಠಾನಿಗೆ ಸೇರಿ ಏನೇನು ಕೇಡು ಮಾಡಿಬಿಟ್ಟನೋ ಅರಿಯದು. ಕೊಂಚ ವಿಚಾರಿಸಿ ಸಮಾ ಚಾರವನ್ನು ಪಡೆಯುವ ಜಾಗ್ರತೆ ಇಡುವಿಯಾ?” ಎಂದು ಕೇಳಿದನು. ಅಸ್ಪ ಣೆಯಂತೆ ನಡಕೊಳ್ಳುವೆನೆಂದು ಭೀಮಾಜಿಯು ಕಾರಭಾರಿಯ ಅನುಮತಿ ಯಿಂದ ಸ್ವಗ್ಭಹಾಭಿಮುಖವಾದನು. ಜೀರ್ಣಶಕ್ತಿಗೆ ಉತ್ತೇಜನ ಕೊಡುವ ದಕ್ಕಾಗಿ ಭೋಜನದ ತರುವಾಯ ಶಾಬಯ್ಯನು ತಕ್ಕೊಂಡ ಸಿದ್ಧಪತ್ರೆಪಾನಕ ರವಷ್ಟು ಹದ ಮೀರಿದ ದೆಸೆಯಿಂದ ನಿದ್ರಾವಸ್ಥೆಯನ್ನು ಧರಿಸಿ, ಸಾಯಂಕಾಲ ಪರಿಯಂತರ ಶಯ್ಯಾಗೃಹವನ್ನು ಬಿಟ್ಟು ಹೊರಡಲಿಕ್ಕಾಗದೆ ಹೋಯಿತು. ಭೀಮಾಜಿಯು ವಿಳಂಬ ಮಾಡದೆ ಊಟಪಾಟವನ್ನು ತೀರಿಸಿ, ತನ್ನ ಕಾಲಿನ ಬೆರಳಗಳ ಸಂದಿನಲ್ಲಿ ಲೇಖಣಿಯನ್ನು ಸೇರಿಸಿ, ಒಂದು ತಳ್ಳಿಯನ್ನು ಬರೆಯ ಲಿಕ್ಕೆ ಉದ್ಯುಕ್ತನಾದನು.

“ಷಟ್ಟುರಾಧಿವತಿಗಳ ಸಂಸ್ಥಾನಕ್ಕೆ.”

“ಕುಮುದಪುರದ ಅನಾಧನಾಥೆಯರು ಮಾಡುವ ವಿನಯ ಪೂರ್ವಕ ನಿನಂತಿ. ಸ್ವಾಮೀ, ಕುಮುದಪುರದಲ್ಲಿ ಕಾರ್ಭಾರಿಯೂ ” ಕೊತ್ವಾಲನೂ ನಡೆಸುವ ಅನ್ಯಾಯಗಳ ಸಂಖೈಯನ್ನು ಬರೆದು ಪೂರೈಸದು. ಇವರಿಬ್ಬರೂ ತಿನ್ನುವ ಲಂಚವು ಮಿತಿಮಾರಿ ಬಡವರ ಮನೆಗಳನಕ ಹಾಳಾದವಷ್ಟೇ. ದೊಡ್ಡವರ ಮನೆಗಳೂ ಸೂರೆ ಹೋದವು. ಎಂಧಾ ಸಣ್ಣ ಪ್ರಕರಣವಾದರೂ ಸರಿ, ಹಣ ಮುಂದಾಗಿ ಕೊಡದೆ ಹೋದರೆ ಅದನ್ನು ನೋಡುವವರೇ ಇಲ್ಲ. ಸರ್ವಸಾಧಾರಣವಾದ ಅವರ ದುರ್ನಡತೆ ಹಾಗಿರಲಿ. ಪ್ರಕೃತ ಚಂಚಲನೇತ್ರ ಸನ್ಯಾಸಿಯು ಇಟ್ಟುಕೊಂಡ ವಾಗ್ದೇವಿ ಎಂಬ ನೋಹಿನಿಯು ನಡೆಸುವ ಕಾರ್ಭಾರು ಹೇಳುವುದಕ್ಕೆ ತುದಿಯಿಲ್ಲ. ಅವಳ ದೇಹವೂ ಮಠದ ಹಣವೂ ಅವರಿಬ್ಬರಿಗೆ ದಾರಾದತ್ತ ಮಾಡಿ ಕೊಟ್ಟಿದೆ. ಅವರು ಮನಸ್ಸು ಬಂದ ಹಾಗೆ ಉಪಯೋಗಿಸಿಕೊಳ್ಳುತ್ತಾರೆ. ಅವರು ಭಯತ್ರರೂ ಏಕರಥಾರೂಢರಾಗಿ ನಡೆ ಸುವ ಘೋರವಾದ ಅನ್ಯಾಯದ ಚರಿತ್ರೆಯು ವಿಮರ್ಶಾಧಿಪತಿಗೆ ಸಂಪೂರ್ಣ ವಾಗಿ ವಿದಿತವಿರುವುದಾದರೂ ಆ ಉದ್ಯೋಗಸ್ಥನು ಸದಾ ವಾಗ್ದೇವಿಯ ತಂಗಿ ಶೃಂಗಾರಿಯನ್ನು ಮೋಹಿಸಿ ಕಾರ್ಭಾರಿಯ ಸಹಾಯದಿಂದ ಅವಳನ್ನು ಬೇಕಾದಹಾಗೆ ಉಪಯೋಗಿಸಿಕೊಳ್ಳುತ್ತಾನೆ. ಇಷ್ಟು ಮಾತ್ರವಲ್ಲ. ಒಂದು ದುರಾಚಾರಕ್ಕೆ ತಾಗಿ ಮತ್ತೊಂದು ಅನಾಚಾರವು ಬರುವುದು ಏನೂ ಆಶ್ಟ ರ್ಯವಲ್ಲ. ಮಠದಲ್ಲಿ ನಡೆಯುವ ಅನ್ಯಾಯದ ವ್ಯವಹಾರಗಳನ್ನೆಲ್ಲಾ ಮಠಾ ಧಿಷತಿಯ ಗುಣಕ್ಕೆ ತೀರ್ಪುಮಾಡುವ ವಾಗ್ದತ್ತವನ್ನು ಮುಂಚಿತವಾಗಿಯೇ ಪಡಕೊಂಡು ದೇವರೂ ಭೂಮಿಯೂ ಹೊರಲಾರದ ದುಷ್ಟತನವನ್ನು ಮಾಡುತ್ತಾರೆ. ಅವರೇ ಹೀಗೆ ನಡಕೊಳ್ಳುವಾಗ್ಗೆ ಅವರ ದಾಸನಾಗಿ ಆಜ್ಞಾ ಧಾರಕನಾಗಿರತಕ್ಕ ಕೊತ್ವಾಲನು ಮತ್ತೇನು ಮಾಡಬಹುದು? ಅವರಿಗೆ ವಿರೋಧವಾಗಿ ನಿಷ್ಕ್ರಾಪಟ್ಯದಿಂದ ನಡಕೊಂಡರೆ ಕ್ಷಣಮಾತ್ರದಲ್ಲಿ ಅವರು ಅವನ ಮೇಲೆ ಮುನಿದು, ಬಡವನಾದ ಅವನನ್ನು ಸದೆಬಡಿಯುವರು. ‘ಇಂಥಾ ಭಯದಿಂದ ಅನನು ಕೈಗೆ ಹತ್ತುವ ಕಾಸು ಮತ್ತು ವಾಗ್ದೇವಿಯ ಕಡೆಗಣ್ಣು ನೋಟ ಯಾಕೆ ಬಿಡಬೇಕು? ಹೀಗಾಗಿ ಈ ಪುರುಷತ್ರಯರು ಒಟ್ಟುಗೂಡಿ ಊರನ್ನೇ ಸುಡುತ್ತಾರೆ. ದೃಷ್ಟಾಂತವಾಗಿ ಕೆಲವು ದಿವಸಗಳ ಮೊದಲು ಈ ಪಟ್ಟಣದಲ್ಲಿರುತಿದ್ದ ದೊಡ್ಡ ಸಾಹು ಕಾರ ನೇಮರಾಜ ಸೆಟ್ಟಿಯು ದುರ್ನಡತೆಯಲ್ಲಿ ಖ್ಯಾತಿಹೊಂದಿ ರುವ ಅವನ ಹೆಂಡತಿಯ ಗುಪ್ತಸ್ನೇಹಿತರಿಂದ ಖೂನಿಮಾಡಲ್ಪಟ್ಟು ಅವನ ಹೆಣ ಸಿಕ್ಕದೆ ಹೋಗಿದೆ. ಇದರ ತನಖಿಯು ತಕೃಕಾಲದಲ್ಲಿಸರಿ ಹೆಣವು. ಸಿಕ್ಕದೆ ಹೋಗಿದೆ ದರ ತನಖಿಯು ತಕ್ಕಕಾಲದದಲ್ಲಿ ಸರಿ ಯಾಗಿ ನಡೆಯುತಿದ್ದರೆ ಪತ್ತೆ ದೊರೆಯುತ್ತಿತ್ತು ಹಾಗೆ ಮಾಡುವುದನು ಬಿಟ್ಟು ಅವಳಿಂದ ಎಷ್ಫೋ ಹಣವನ್ನು ಲಂಚವಾಗಿ ಕುಸುಕೊಂಡು ಅವಳನ್ನು ರಕ್ಷಿಸಿಬಿಟ್ಟಿ ದ್ದಲ್ಲದೆ ಮೃತನು ವಾಗ್ದೇವಿಯ ವ್ಯಾಮೋಹದಿಂದ ಮಠಕ್ಕೆ ಹೋದಲ್ಲಿ ಅವನನ್ನು ಅಲ್ಲಿ ಯಾರೋ ಕೊಂದುಹಾಕಿದರೆಂಬ ಕಲ್ಪನೆಯ ದ್ವಾರ ಮಠದಿಂದಲೂ ಮತ್ತಷ್ಟು ದ್ರವ್ಯ ಎಳೆಯುವ ಇಚ್ಛೆಯಿಂದ ಕೊತ್ವಾ ಲನನ್ನು ಸಹಾ ತನಕಿ ಮಾಡಲಿಕ್ಗೆ ಬಿಡದೆ ವಿಮಾರ್ಶಾಧಿಕಾರಿಯ ನಿರೂಪಕ್ಕೆ ಸುಗುಣವಾಗಿ ಕಾರಭಾರಿಯು ತಾನೇ ತುಬ್ಬು ಮಾಡುವುದಕ್ಕೆ ಉದ್ದುಕ್ತನಾಗಿ ಮಠಕ್ಕೆ ಹೋಗಿ ಹಣದ ರಾಶಿಯನ್ನು ಹಾಕಿಕೊಂಡಿರುತ್ತಾನೆ. ಇದೆಲ್ಲೂ ಸನ್ನಿಧಾನಕ್ಕೆ ತಳ್ಳಿ ರೂಪವಾಗಿ ಬರೆದು ಇರುವದಾಗಿ ಅವಿಶ್ಶಾಸದಿಂದ ತಿರಸ್ಕ ರಿಸಿದರೆ ದರಬಾರಿನ ತೇಜವೇ ಕಂದಿಹೋದೀತು. ಹೆಸರು ಕಾಣಿಸಿ ಮನವಿ ಮಾಡಿಕೊಂಡರೆ ಬರಕೊಂದವನ ಜೀನಕ್ಕೆ ದುರುಳರು ಮುನಿದು ಬಿಟ್ಟಾರು ಚೆನ್ನಾಗಿ ಶೋಧನೆಮಾದಿ ನೋಡಿದರೆ ಸಕಲ ಗುಟ್ಟುಗೊತ್ತಾಗಿ ರಾಜಾಧಿ ಕಾರ ಸರಿಯಾಗಿ ನಡೆದೀತು. ಇಲ್ಲವಾದರೆ ಈ ಪಾವವೆಲ್ಲಾ ರಾಜನ ತಲೆಯ ಮೇಲೆ ಉರಿಯುವುದು.”

ಈ ತಳ್ಳಿಯು ಅಂಚೆಯ ಮೂಲಕ ಕಳುಹಿಸೋಣ, ಅದು ವಿಳಂಬ ವಿಲ್ಲದೆ ಅರಮನೆಯ ಬಕ್ಷಿಯ ಕೈಗೆ ಬಂತು. ಯಾಕೆಂದರೆ ರಾಜನ ಹೆಸರಿನಲಿ ಅದರ ಮೇಲೆ ವಿಳಾಸವಿರುತಿತ್ತು. ಇಂಥಾ ಮನವಿಗಳು ಸರ್ಕಾರಿಯಾಗಿರುವ ಪ್ರಯುಕ ಬಕ್ಷಿಯು ಅದನು, ಕಿರಿದಿವಾನರ ಬಳಿಗೆ ಕಳುಹಿಸಿಕೊಟ್ಟನು. ಕಿರಿ ದಿವಾನನಿಗೆ ಮುನಷಿಯು ಅದನ್ನು ಓದಿ ತಿಳಿಸಿದನು. ಅವನು ಅದನ್ನು ಚೆನ್ನಾಗಿ ತಿಳಿದುಕೊಂಡು ಬೆರಗಾಗಿ ಹೇಳಿದ್ದೇನೆಂದರೆ:: “ಇದೇನು ಅಬ ದ್ದವೋ ಸುಬದ್ಧವೋ ತಿಳಿಯದು! ಯಾವ ಮಹಾರಾಯ ಅದನ್ನು ಬರೆದು ಯಾರ್ಯಾರ ಮೇಲೆ ಅಧಿಕಾರಸ್ಥರಿಗೆ ಸಂಶಯಕ್ಕೆ ಆಸ್ಪದ ಕೊಟ್ಟು ಬಿಟ್ಟಿನೋ ವಿಮರ್ಶಾಧಿಕಾರಿಯು ಪೂರ್ಣವಾದ ಸತ್ಯವಂತ; ಪರದ್ರವ್ಯ ವಮನವತ್‌ ಪರಸ್ತ್ರೀಮಾತೆಯಂತೆ ಎಣಿಸುವಂತಾ ದೇವ ಮಾನುಷ; ಅವನನ್ನು ದೂರು ವವನ ಬಾಯಿಗೆ ಹುಳಬೀಳುವದು. ಕಾರ್ಭಾರಿಯ ಪಂಚಾತ್ಮ ಹೇಗಿದೆಯೋ ಹೇಳಲಾರೆ. ಆದರೆ ಅವನು ಕೆಟ್ಟ ಮನುಷ್ಯನಾಗಿರುತ್ತಿದ್ದರೆ ವಿಮರ್ಶಾಧಿಕಾ ರಿಯು ಅವನನ್ನು ಸುಮ್ಮಗೆ ಬಿಡುವವನಲ್ಲ. ಅವನು ಸಂಭಾವಿತನೆಂದೇ ನನ್ನ ಅಭಿಪ್ರಾಯ, ಕುಹಕ ಜನರು ತಮ್ಮ ದುರುಳತನವನ್ನು ಮೆರಸಿ ಸಂಭಾ ನಿತರನ್ನು ಕೆಡಿಸುವದಕ್ಕೆ ಇಂಧಾ ಮನವಿಗಳನ್ನು ಬರೆಯುವ ರೂಢಿ ಇದೆ. ಹ್ಯಾಗೂ ಸರಿ; ದುಸ್ಟಪ್ನ ಬಿತ್ತೆಂದರೆ ಎದ್ದು ಕೂತು ಶಿವನಾಮ ಸ್ಮರಣೆ ಮಾಡ ಬೇಕೆಂಬ ನ್ಯಾಯಕ್ಕನುಸಾರವಾಗಿ ನಡೆಯುವದು ಕರ್ತವ್ಯ. ಈ ಬಿನ್ನಹ ಪತ್ರಿಕೆಯಲ್ಲಿ ವಿವರಿಸಿರುವ ಕೃತ್ಯಗಳು ನಡೆದಿವೆಯೋ ನಿಜನಾಗಿ ಕುಮುದ ಪುರದೊಳಗೆ ವಿಸ್ತರಿಸಕೂಡದ ಅನ್ಯಾಯಗಳು ನಡೆಯುತ್ತಿನೆಯೋ ಎಂಬ ವಿಷಯದಲ್ಲಿ ಜಾಗ್ರತೆಯಿಂದಲೂ ಸಮಾಧಾನ ಚಿತ್ತದಿಂದಲೂ ವಿಮರ್ಶೆ ಮಾಡಿ ಅಗತ್ಯಕಂಡರೆ ಹಕೀಕತ್‌ಗಳನ್ನೆಲ್ಲಾ ನಮ್ಮ ತಿಳುವಳಿಕೆಗೆ ತರುವ ದಕ ಒಂದು ಅಪ್ಪಣೆಮಾಡಿಬಿಡಪ್ಪಾ.’

ಮುನಷಿಯು ಹಾಗೆ ವರ್ತಿಸಿ ಈ ರಹಸ್ಯವನ್ನು ಒಳಗಿಂದೊಳಗೆ ತನ್ನ ಸ್ನೇಹವನ್ನು ಬೆಳಸಿದ ಕಾರ್ಭಾರಿಗೆ ತಿಳಿಯಪಡಿಸಿದನು. ಅವನು ನಕ್ಕು- “ಇದು ಆ ಕಳ್ಳ ಕೊತ್ತಾಲನ ವೈನ! ಒಳ್ಳೆದಾಯಿತು. ವಿಮರ್ಶಾಧಿಕಾರಿಯು ತಳ್ಳಿಯನ್ನು ನೋಡಿದ ಕೂಡಲೇ ರೋಷದಿಂದ ಆ ನಾಯಿ ಮಕ್ಕಳನ್ನು ನಿರ್ಮೂಲಮಾಡದಿರನು. ಮುಂದಿನ ಕಾರ್ಯಸಾಧನೆಗೆ ಈ ಕೃತ್ಯವು ಬಹು ಉಪಯುಕ್ತವಾದದ್ದೇ. ವಾಗ್ದೇವಿಯನ್ನು ಬಿಟ್ಟು ಹಾಕಿದರೆ ದೇವರ ಮುನಿಸು ಬಂದೀತು. ನಾನೇನಾದರೂ ಹಣವನ್ನು ತಿಂದುಹಾಕಲಿಲ್ಲ. ಬಂದದ್ದು ಬರಲಿ, ನೋಡಿಕೊಳ್ಳುವ. ಚತುರ್ಮತಾಧಿಪರು ಹೊಸವಕೀಲನ ಸವಿಯಾದ ಮಾತು ಗಳಿಗೆ ಕಿವಿಕೊಟ್ಟು ಹಾರಾಡುತ್ತಾರೆ. ಅವರು ಭಿಕ್ಷಾಪಾತ್ರ ತೆಕ್ಕೊಂಡು ಊರು ಊರು ತಿರುಗಿಕೊಂಡಿರುವ ಹಾಗೆ ಯುಕ್ತಿ ನಡೆಸಿ ಸೂರ್ಯನಾರಾ ಯಣನ ಆಶ್ರಮವನ್ನು ಊರ್ಜಿತ ಇಡುವಂತೆ ಮಾಡಲಿಕ್ಕೆ ನನ್ನಿಂದ ಸಾಧ್ಯ ವಾಗಲಾರದಾದರೆ ನಾನು ಬದುಕಿ ಏನು ಪುರುಷಾರ್ಥ?” ಹೀಗೆಂದು ತನ್ನ ಷ್ಟಕ್ಕೆ ವೌರುಷಪಡುತ್ತಾ ಕುಳಿತಿರುವ ವೇಳೆಗೆ ಭೀಮಾಜಿಯು ಬಂದು ಸಲಾಂ ಮಾಡಿದನು: “ಮಿತ್ರನೇ! ನಿನ್ನ ಬಾಣವು ತೀಕ್ಷ್ಣವಾದ್ದಯ್ಯಾ? ಎಂದು ಗಪ್ಪನೆ ಕಾರ್ಭಾರಿಯು ಹೇಳಿಬಿಟ್ಟನು. “ಅದೇನು ಸ್ಟಾಮೀ?” ಎಂದು ಬೆರಗಾಗಿ ಏನೂ ತಿಳಿಯದವನಂತೆ ಚಕಿತನಾದವನ ಸ್ಥಿತಿಯನ್ನನುಕರಿಸಿ ಅವನು ಮುಖವನ್ನೇ ನೋಡಿದನು. ಕಿರಿದಿವಾನರ ಮುನಸಿಯು ತಿಳಿಸಿರುವ ವರ್ತ ಮಾನವನ್ನು ಮೆಲಗೆ ಕೊತ್ವಾಲನ ಕಿವಿಯಲ್ಲಿ ಶಾಬಯ್ಯನು ಹಾಕಿದನು. ಭೀಮಾಜಿಯು ಅರೆ ನೆಗೆಯ ಮುಖದಿಂದ ಮಾತಾಡದೆ ಕೂತನು.

ಈ ದಿವಾನರ ನಿರೂಪಸಹಿತ ತಳ್ಳಿಯು ವಿಮರ್ಶಾಧಿಕಾರಿಗೆ ತಲ್ಪಿತು. ಅದನ್ನು ಓದಿ ನೋಡುತ್ತಲೇ ಸತ್ಯಶೀಲನಾದ ಆ ಪ್ರಾಣಿಗೆ ಏರಿದ ಕೋಪವು ಹೇಳಿ ತುದಿಯಿಲ್ಲ. ಸಿಟ್ಟಿನ ದಳ್ಳುರಿಯಿಂದ ಅವನ ಒಡಲೇ ಸುಡುತ್ತದೆಂದು ಕಂಡಿತು. ಈ ದೆಸೆಯಿಂದ ಆದ ಮುಖವಿಕಾರವನ್ನು ಕಾಣುತ್ತಿದ್ದ ಅವನ ಪತ್ನಿಯು ಏನೋ ವೈಷಮ್ಯ ಸಂಭವಿಸಿರುವದೆಂಬ ಅನುಮಾನದಿಂದ ಸಮಯ ವರಿತು ಪತಿಯ ಕೂಡೆ ಊರಿನಲ್ಲಿ ಜನರು ಕೊತ್ವಾಲ ಮತ್ತು ಕಾರಭಾರಿ ಯನ್ನು ಕುರಿತು ಇತ್ತಲಾಗೆ ತುಸ ಅಸಹ್ಯಕರವಾದ ಮಾತುಗಳನ್ನಾಡುವ ರೆಂದು ತಿಳಿಸಿದಳು. “ಜನರು ಹಲವು ಉದ್ದೇಶಗಳಿಂದ ಬೇಕಾದ ಹಾಗೆ ಆಡುವರು. ನೀತಿವಂತನ ಮೇಲೆ ದುಷ್ಟರು ನಿರ್ನಿಮಿತ್ತವಾಗಿ ಅಪವಾದಗ ಲನ್ನು ಹಾಕುವ ರೂಢಿ ಇದೆ. ಹಾಗಲ್ಲವಾದರೆ ತನ್ನ ಮೇಲೆ ತಳ್ಳಿಯಲ್ಲಿ ಹೊರಿಸಿರುವ ದೋಷಾರೋಪಣೆಗೆ ಕೊಂಚವಾದರೂ ಆಧಾರವಿರುವದೇ?” ಎಂದು ಪ್ರತಿಉತ್ತರ ಕೊಟ್ಟು ಪತಿಯ ಕೂಡೆ ಅವಳು ಏಕೀಭವಿಸಿದಳು. ಜನರು ಮನಸ್ಸು ಬಂದ ಹಾಗೆ ಯುಕ್ತಾಯುಕ್ತವಾದ ಮಾತುಗಳನ್ನಾಡು ವರು. ಅವುಗಳನ್ನು ಚನ್ನಾಗಿ ಶೋಧಿಸಿ ನೋಡದೆ ಒಪ್ಪಿಕೊಂಡರೆ ಅನಾಹು ತಕ್ಕೆ ಕಾರಣವಾಗುವದೇ ಸರಿ ಎಂದು ಪತಿ ಪತ್ರಗಳು ನಿರ್ಧಾರಮಾಡಿದರು. ಇದ್ಯಾವ ದೊಡ್ಡ ಕಾರ್ಯ! ಅದನ್ನು ರವಷ್ಟು ಸಮಯದಲ್ಲಿ ಪರಿಶೋಧಿಸಿ ಸತ್ಯವನ್ನು ಹುಡುಕಿ ಅನ್ಯಾಯಗಾರರನ್ನು ತಕ್ಕವಾದ ಶಿಕ್ಷೆಗೆ ಗುರಿಪಡಿಸುವೆ ನೆಂದು ಶಪತಹಾಕಿಕೊಂಡು, ವಿಮರ್ಶಾಧಿಕಾರಿಯು ಮರುದಿನ ಮುಂಜಾನೆ ತನನ್ನನ್ನು ಕಂಡು ಹೋಗಬೇಕಾಗಿ ಕಾರಭಾರಿಗೆ ಹೇಳಿಕಳುಹಿಸಿದನು. ಆ ಸಮಯಕ್ಕೆ ಶಾಬಯ್ಯನು ವಿಮರ್ಶಾಧಿಕಾರಿಯ ಮನೆಯ ಬಾಗಿಲಲ್ಲಿ ಕಾದು ನಿಂತನು ಕೊಂಚ ಹೊತ್ತಿನಲ್ಲಿ ಇಬ್ಬರು ಅಧಿಕಾರಸ್ಥರು ಒಟ್ಟುಗೂಡಿ ಸಂಭಾ ಷಣೆ ಮಾಡಿದರು.

ವಿಮರ್ಶಾಧಿಕಾರಿ-“ಅಯ್ಯಾ ಶಾಬಯ್ಯಾ! ಇದೇನಪ್ಪಾ, ಅಲ್ಲೋಲ ಕಲ್ಲೋಲ! ನಿನ್ನ ನನ್ನ ಮೇಲೆ: ಒಟ್ಟು ತಳ್ಳಿ ಅರ್ಜಿ ಬಿದ್ದಿರುವ ಸುದ್ದಿ ಕೇಳಿಬಲ್ಲಿಯಾ? ನಮ್ಮಿಬ್ಬರನ್ನೂ ಏಕಪ್ರಕಾರ ದೂರುವವರಿಗೆ ಕೊತ್ವಾಲನ ಅಂಕೆ ಉಂಟೇನು? ಅವನ ಮೇಲೆಯೂ ಅದರೊಳಗೆ ದೂರು ಬರದುಇದೆ.?

ಕಾರ್ಭಾರಿ-“ಪರಾಕೆ! ಸಾಂಪ್ರತ ಪ್ರಾಮುಖ್ಯವಾಗಿ ಸತ್ಯಸಂಧರಿಗೆ ಆಭಾಸಕರವಾದ ಮಾತುಗಳಿಂದ ತುಚ್ಛೀಕರಿಸುವದು, ಅವರನ್ನು ಘೋರ ವಾದ ಗಂಡಾಂತರದಲ್ಲಿ ಬೀಳಿಸಲಕ್ಕೆ ಭಗೀರಥ ಯತ್ನಗಳನ್ನು ಹೂಡುವದು, ಇವೇ ಮುಂತಾದ ದುಸ್ಸಾಧನೆಗಳ ದ್ವಾರ ಸಜ್ಜನರನ್ನು ಮರ್ದನ ಮಾಡುವ ದುರಭ್ಯಾಸಕ್ಕೆ ಬಹು ಪೋಕರಿ ಸ್ವಭಾವದ ಅನಾಮಿಕರು ಇರುವೆಗಳ ಸಾಲು ಗಳಂತೆ ಮೆರೆಯುತ್ತಾರೆ. ಸಾಧು ಸಜ್ಜನರ ಸಂತಾಪಕ್ಕೆ ಖದಿರಾಂಗಾರವನ್ನು ಹೋಲಿಸುವದಾಯಿತು. ಈಗಿನ ಕಾಲಸ್ಥಿತಿ ಆಲೋಚಿಸುವಾಗ ಖದ್ಯೋತವು ತ್ರಿಲೋಕಪ್ರಕಾಶಕನಾದ ದಿವಾಕರನ ಪ್ರಭೆಯನ್ನು ತಗ್ಗಿಸುವ ಪ್ರಯತ್ನ ಮಾಡುವಂತೆ ಆಗಿದೆ.”

ವಿಮರ್ಶಾಧಿಕಾರಿ-“ಸದ್ದೋ ಸದ್ದು! ಅಯ್ಯಾ, ಶಾಬಯ್ಯಾ ನಿನ್ನ ಪ್ರರಾ ಣವನ್ನು ತುಸಾ ಕಟ್ಟಿಟು ಬಿಡು. ಅಪ್ರಾಸಂಗಿಕ ಮಾತುಗಳಿಂದ ವೃರ್ಥವಾಗಿ ಸಮಯವನ್ನು ಕಳೆಯುವದರಲ್ಲಿ ಸಂತೋಷಪಡುವ ನಿನ್ನ ಚಾಲು ನನಗೇನೂ ಪರಿಷ್ಠಾರವಾಗಿ ತೋರುವದಿಲ್ಲ. ಈಗನಕ ವಿಚಾರಕ್ಕೆ ಉಪಯುಕ್ತವಾದ ಮಾತುಗಳೇ ನನಗೆ ಬೇಕಾದ್ದು. ಹಾಳು ಹರಟೆ ಹಾಗಿರಲಿ”

ಕಾರ್ಭಾರಿ–“ಅಪ್ಪಣೆಯಾದ ವಿಷಯಗಳಲ್ಲಿ ಅಂಕೆ ಮಾಡುವದಕ್ಕೆ ಪಾದಸೇವಕನಾದ ನಾನು ಅವಕಾಶವನ್ನು ಕಾಯುತ್ತೇನೆ”

ವಿಮರ್ಶಾಧಿಕಾರಿ–“ನೇಮರಾಜನ ಮರಣವನ್ನು ಕುರಿತು ನೀನು ನಡೆಸುವ ನಿಚಾರಣೆಯ ಫಲವೇನು? ಬೇಗ ಹೇಳಿಬಿಡು. ಅದನ್ನು ಕುರಿತು ನಮಗೆ ಇದುವರೆಗೂ ಒಂದಾದರೂ ಬಿನ್ನವತ್ತಳೆಯನ್ನು ನೀನು ಬರಕೊಂಡ ದ್ದಿಲ್ಲ. ಯಾಕೋ ತಿಳಿಯದು”

ಕಾರ್ಭಾರಿ–“ಸ್ವಾಮೀ! ವಿಜಾರಣೆಯು ಮುಗಿಯುವದಕ್ಕೆ ಮೊದಲೇ ಬಿನ್ನವತ್ತಳೆಯನ್ನು ಬರಕೊಳ್ಳುವದು ಈಗಿನ ನಡವಳಿಕೆಗೆ ವ್ಯಾಪಿಸುವ ಚಟ್ಟ ಗಳ ನಿಬಂಧನೆಗಳಿಗೆ ವೃತಿರಿಕ್ತವಾಗಿರುವದಷ್ಟೆ.

ವಿಮರ್ಶಾಧಿಕಾರಿ–“ಇದುವರೆಗೆ ವಿಚಾರಣೆಯು ಮುಗಿಯಲಿಲ್ಲವೇ, ಅಥವಾ ಪ್ರಾರಂಭವಾಗಬೇಕಷ್ಟೆಯೋ?

ಕಾರ್ಭಾರಿ–“ನನ್ನ ಬಿನ್ನಪ ಲಾಲಿಸಬೇಕೆಂಬ ಪ್ರಾರ್ಥನೆ ಚಿತ್ತಕ್ಕೆ ಹೋಗಲಿ. ನೇಮರಾಜನ ಮರಣದ ಅನುಮಾನದ ಕೌಲಿಕ ಸಿಕ್ಕಿದೊಡನೆ ಭೀಮಾಜಿಯು ವಿಚಾರಣೆ ಮಾಡತೊಡಗಿದನು. ಅವನ ಮೇಲೆ ಅಪ್ರಾಮಾಣಿ ಕತೆಯ ದೋಷಾರೋಪಣೆಯು ಮೃತನ ಹೆಂಡತಿಯ ಕಡೆಯಿಂದ ಮಾಡೋ ಣಾಯಿತು. ತತ್‌ಕ್ಷಣ ನಾನು ಸ್ವತಃ ಸ್ಥಳಕ್ಕೆ ಹೋಗಿ ಕೂಲಂಕಷವಾಗಿ ಪರಿಶೋಧನ ಮಾಡಲಾರಂಭಿಸಿದೆನು. ಫಟಿಂಗರಲ್ಲಿ ಪ್ರದಮ ಸ್ಪಳದವನಾದ ರಾಮದಾಸನು ಮೃತನ ಹೆಂಡತಿಯ ಕಡೆಯಿಂದ ವಕೀಲನಾಗಿ ಒಂದು ಸತ್ಯತ್ವವು ಪೂರ್ಣವಾಗಿ ಅಡಗುವಂತೆ ಮೃತನ ಮರಣಕ್ಕೆ ಅಸಂಭಾವ್ಯವಾದ ಹೇತುವನ್ನು ತೋರಿಸಿ ಮೊದಲೇ ಅನುಮಾನಕ್ಕೆ ಒಳಪಟ್ಟ ಮೃತನ ಹೆಂಡ ತಿಯನ್ನು ಬಚವು ಮಾಡಲಿಕ್ಕೆ ನೋಡುವ ಸಮಯದಲ್ಲಿ ಇಂಧಾ ದೊಡ್ಡ ವಿಷಯದಲ್ಲಿ ಅವನ ದುರುಳತನವನ್ನು ಮೆರಸಿ ಇಡೀ ರಾಜ್ಯದಲ್ಲಿ ಅಸಖ್ಯಾತಿ ಬರುವ ಹಾಗೆ ನಾಲಿಗೆ ಸಡಿಲ ಇಡಬಾರದಾಗಿ ನಾನು ಅವನಿಗೆ ಬುದ್ಧಿ ಹೇಳಿದೆ. ಪರಂತು ಅವನು ನನ್ನ ಮಾತು ಶುಂಠತನದಿಂದ ಧಿಕ್ಕರಿಸಿ ನಾನೊಬ್ಬ ಕುರುಬನೆಂಬ ಹಾಗೆ ಬಾಯಿಗೆಬಂದ ರೀತಿಯಲ್ಲಿ ಒದರುತ್ತಾ ನಡೆದುಬಿಟ್ಟನು. ಆದರೂ ಅವನು ಅಪವಾದ ಹಾಕಿದ ಚಂಚಲನೇತ್ರರ ಮಠಕ್ಕೆ ನಾನು ಅನ್ನ ನೀರು ಬಿಟ್ಟು ಮಧ್ಯಾಹ್ನ ಬಿಸಿಲೆಂತ ನೋಡದೆ ಫಕ್ಕನೆ ಹೋಗಿ ಭೀಮಾಜಿಯ ಸಮೇತ ಮಠವನ್ನು ಇಡೀ ಸಂಚರಿಸಿ ನೋಡಿದಲ್ಲಿ ಸಂಶಯಾಸ್ಪದವಾದ ಒಂದು ವಿದ್ಯಮಾನವಾದರೂ ಪ್ರತ್ಯಕ್ಷವಾಗದೆ ಹೋಯಿತು. ಆ ರಾಮದಾ ಸನು ಮೃತನ ಹೆಂಡತಿಯ ಗುಣಕರವಾದ ವ್ಯವಹರಣೆ ನಡೆಸುವ ಉದ್ದಿಶ್ಯ ಬಂದವನಲ್ಲ. ಚತುರ್ಮಠದವರಿಗೆ ಕುಮುದಪುರ ಮಠದ ಮೇಲೆ ಹುಟ್ಟಿದ ದ್ವೇಷಸಾಧನೆಗೆ ಪವಿತ್ರಕರ್ತನಾದ ನೃಸಿಂಹಪುರ ಸ್ವಾಮಿಯ ಬೋಧನೆ ಗನುಗುಣವಾಗಿ ಮರುಳರಂತೆ ಕುಣಿಯುವ ಬೇರೆ ಮೂವರು ಸನ್ಯಾಸಿಗಳು ಕೂಡಿ, ಒಂದು ಕೂಚು ಫಟ್ಟಿಯಾಗಿ ತುಂಟಾಟಕೆ ಮಾಡಲಿಕ್ಕೆ ಉದ್ಯುಕ್ತ ರಾಗಿರುತ್ತಾರೆ. ಅವರ ಒಟ್ಟಿನಲ್ಲಿ ಚಂಚಲನೇತ್ರರ ದೀರ್ಥದ್ವೇಷಿಯಾದ ವೇದವ್ಯಾಸನು ಒದ್ದಾಡುತ್ತಾನೆ. ರಾಮದಾಸನು ಅವರ ಕದೆಯಿಂದ ನಾನಾ ವಿಧದಿಂದ ಕುಮುದಪುರ ಮಠದ ಮೇಲೆ ಗಂಡಾಂತರ ತರಬೇಕೆಂದು ನೋಡುತ್ತಾನೆ. ನೇಮರಾಜನ ಮರಣದ ಗುಲ್ಲು ಕೇಳಿ ಈ ಸಂದರ್ಭದಿಂದ ಲಾದರೂ ಒಂದು ಗಡಿಬಿಡಿ ಮಾಡಲಿಕ್ಕೆ ಹೊರಟಿರುವನು. ತನ್ನ ದುಸ್ಸಾಧನೆಯು ನಡೆಯುವದು ಅಸಾಧ್ಯವೆಂದು ಅವನಿಗೆ ಖಚಿತವಿರುವದರಿಂದಲೆೇ ಬೇಕೆಂತ ಒಂದು ಕುತರ್ಕ ಮಾಡಿ ವಕಾಲತ್ತು ಬಿಟ್ಟು ಹೋಗಿಬಿಟ್ಟು ಈ ತಳ್ಳಿಯನ್ನು ಮಾಡಿಸಿದ್ದಾನೆ. ವಾಗ್ದೇವಿಯ ಮೇಲೆ ದೂರು ಹಾಕಿದರೆ ಆ ಅರ್ಜಿ ಚತುರ್ಮಠದವರ ಕಡೆಯಿಂದ ತಾನೆ ಮಾಡಿಸಿದ್ದಾಗಿ ಸಂಶಯ ಉಂಟಾದೀತೆಂಬ ಯೋಚನೆಯಿಂದ. ನೇಮರಾಜನ ಹೆಂಡತಿಯ ಮೇಲೆ ಅನುಮಾನನಸಿರುವ ಸಂಗತಿಯಲ್ಲಿ ಹಣ ಸುಲಿಯುವದಕ್ಕೋಸ್ಕರ ಕುಮುದ ಪುರ ಮಠದ ಮೇಲೆ ಜರದು ಬಿದ್ದಿರುತ್ತೀವೆಂಬ ಹಾಗೆ ನನ್ನ ಮೇಲೂ ಕೊತ್ವಾಲನ ಮೇಲೂ ದೂರು ಕಾಣಿಸಿ ತಮ್ಮ ಪ್ರತಿಷ್ಠೆಗೂ ಅಭಾಸಕರವಾದ ವಾಚಕಗಳರುವ ಒಂದು ತಳ್ಳಿಯನ್ನು ಮಾಡಿಹಾಕಿದ್ದಾನೆ. ಅವನಿಗೆ ಇನ್ನೊಂದು ಉದ್ದೇಶವಿದೆ. ವಾಗ್ದೇವಿಯ ಹಿತಕಾರಿಗಳು ಈ ತಳ್ಳಿಯನ್ನು ಮಾಡಿಸಿರಬಹುದೆಂಬ ಸಂದೇಹಕ್ಕೆ ಆಸ್ಫದವಾದರೆ ನನಗೂ ಕೂತ್ವಾಲನಿಗೂ ತಮಗೂ ಕುಮದವುರ ಮಠದ ಮೇಲೆಯೂ ಅದರಪ್ಲಿ ವಾಸವಾಗಿರುವ ಕ್ರಿಮಿಕೀಟಾದಿಗಳ ಮೇಲೆಯೂ ದ್ವೇಷ ಹುಟ್ಟಿ ಚತುರ್ಮಠದವರ ಹಟ ಸಾಧನೆಯು ನೆರವೇರಲಿಕ್ಕೆ ಅನುಕೂಲವಾಗುವದು. ಒಂದಲ್ಲಾ ಒಂದು ಬಾಣವಾದರೂ ತಾಗಿ ಅಧಿಕ ಪಕ್ಷದವರಾಗಿ ಒದ್ದಾಡುವ ನಾಲ್ಕು ಮರದ ವರು ಐದನೇ ಮರ ಮರ್ದನ ಮಾಡಲಿಕ್ಕೆ ಸಾನುಕೂಲ ಸಾಧನಗಳನ್ನು ರಾಮದಾನಸನು ಹುಡುಕುತ್ತಾ ಇದ್ದಾನೆ. ಇನ್ನೇನು ಹೆಚ್ಚು ಅರಿಕೆ ಮಾಡಲಿ? ತಾವು ನಮ್ಮನ್ನು ನಡಸಿಕೊಂಡು ಹೋಗುವ ಯಜಮಾನರು. ನಮ್ಮ ಮನಃ ಪೂರ್ವಕವಾದ ಉದಾಸ ಅಧವಾ ಅಪರಾಧಗಳು ಇದ್ದರೆ ಕನಿಕರವಿಡದ ನಮ್ಮನ್ನು ಶಿಕ್ಷಿಸುವದು ತಮ್ಮ ಧರ್ಮವಾಗಿದೆ. ಬಹು ಭಾಷಣವನ್ಯಾಕ ಮಾಡಲಿ? ತಾವು ಸ್ವತಹಾ ಈ ಕೊಲೆಪಾತಕದ ವಿಚಾರಣೆ ಮಾಡಿದರ ಸರ್ವವೂ ವಿದಿತವಾಗುವದು. ಹಾಗೆಯೇ ತಮ್ಮ ಕೈ ಕೆಳಗೆ ನೌಕರಿ ಮಾಡಿ ಕೊಂಡಿರುವ ನನ್ನ ಮುಂತಾದವರ ಸ್ವರೂಪವು ತಿಳಿದು ಬರುವದು.

ವಿಮರ್ಶಾಧಿಕಾರಿ–“ತಳ್ಳಿಯ ವಿಷಯ ಹಾಗಿರಲಿ, ಸತ್ಯತ್ವ ಶೋಧನೆ ಮಾಡಲಿಕ್ಕೆ ಅಡ್ಡಲು ಯಾವುದೂ ಇಲ್ಲ. ರಾಮದಾಸನು ತಳ್ಳಿ ಯನ್ನು ಮಾಡಿಸಿದವನೆಂದು ನಾನು ತಿಳಕೊಳ್ಳಲಾರೆ. ವಾಗ್ದೇವಿಯ ಹಿತಕಾರಿಗಳೇ ಅದನ್ನು ಮಾಡಿಸಿರಬೇಕೆಂದು ಯಾಕೆ ಊಹಿಸಬಾರದು.”

ಕಾರ್ಭಾರಿ__”ಹಾಗ೧ದರೆ ನಾನೂ ಕೊತ್ವಾಲನೂ ತಾವೂ ಸಹಿತ ವಾಗ್ದೇವಿಯ ಪಕ್ಷದವರೆಂಬ ಅನ್ವಯ ಹುಟ್ಟುವದಾಯಿತಲ್ಲ ಅದು ನಿಜ ವಾಗಿರುವದಾದರೆ ಅಂಥವರ ಮೇಲೆ ದೂರು ಹಾಕಿ ಅವರ ಮುನಿಸಿಗೆ ವಾಗ್ದೇವಿ ಒಳಪಡುವ ಹೇಸಾಟ ಅವನ ಕಡೆಯವರು ಮಾಡತಕ್ಕೆವರೇ ಬುದ್ಧೀ! ಮಠದ ತುದಿಯಲ್ಲಿ ಕೂತು ಬುಡವನ್ನು ಕೂಡಲಿಯಿಂದ ಕಡಿಯುವ ಹಾಗಿನ ಅಪ್ರಬುದ್ಧರ ನಡೆಯುವದಾಗಿ ಊಹಿಸಬಹುವೇ! ನಾನೂ ಕೊತ್ವಾ ಲನೂ ಲುಚ್ಚರಲ್ಲಿ ಪ್ರಮುಖರೆನ್ನುವ ತಮ್ಮ ಮೇಲೆ ಕುಮುದಪುರದ ಮಠ ದವರಾಗಲೀ ವಾಗ್ದೇವಿಯಾಗಲೀ ಇನ್ನಾರಾಗಲೀ ದೇವರೂ ಭೂಮಿಯೂ ಹೊರಲಾರದೆ ಅಪವಾದವನ್ನು ಹಾಕುವ ಹಾಗಿನ ಕೃತ್ಯ ತಮ್ಮಿಂದ ಸ್ಪಪ್ನ ದಲ್ಲಿಯಾದರೂ ಯೋಚಿಸಲ್ಪಟ್ಟಿರುವದೇ ಸ್ವಾಮೀ? ಇದರಲ್ಲಿ ಬುಡ ಶೋಧನೆ ಮಾಡುವ ಅಗತ್ಯವಿದೆ. ತಳ್ಳಿಯು ಚಮತ್ಕಾರಿಕ ರಚನೆ ನಾವು ಮೂವರೂ ಅವಳ ಕೇಡು ಹಾರೈಸುವವರೆಂದು ಅವು ತಿಳಕೊಳ್ಳುವದಕ್ಕೆ ಅಧಾರವಾ ಗುವ ಹಾಗಿನ ಕೃತ್ಯ ಇದುವರಿಗೂ ನಡೆಯಲ್ಲ ಹೀಗಿರೋಣ ನಮ್ಮನ್ನು ಅವಳು ದೂರಲಿಕ್ಕೆ ಕಾರಣವಿರುವದೇನು? ಸತ್ಯಾಸತ್ಯಾ ವಿಚಾರಮಾಡಿ ಈ ಪರಿಯಂತರ ಕೊತ್ವಾಲನ ಆದಿಯಾಗಿ, ತಮ್ಮ ಸನ್ನಿಧಾನ ತನಕ ಆದ ತೀರ್ಮಾನಗಳು ವಾಗ್ದೇವಿಯ ಗುಣಕರವಾದವುಗಳು ಅಂಥಾ ಅಧಿಕಾರಿ ಗಳನ್ನು ದೂರಿ ಅವರ ಹಗೆಯನ್ನು ಕಟ್ಟಿಕೊಂಡು ಮುಂದೆ ಗಂಡಾಂತರದಲ್ಲಿ ಬೀಳಬೇಕಂಬ ಹಟ ಅವಳಿಗೆ ಇರುವದಾಗಿ ನಿರೀಕ್ಷಸಬಹುದೇ? ನನ್ನ ಸಣ್ಣ ಬುದ್ಧಿಗೆ ತೋಚಿದ ಮಾತುಗಳನ್ನು ಅಡಿದೆ. ಬಡ ಶಂಕರನ ಮೇಲೆ ವೈಮ ನಸ್ಸು ತಾಳಬಾರದಾಗಿ ನನ್ನ ವಿನಂತಿ”

ವಿಮರ್ಶಾಧಿಕಾರಿ-“ಶಾಬಯಾ! ಒಳ್ಳೇದು, ಈಗ ಮನೆಗೆ ಹೋಗ ಬಹುದು. ನಾಳೆ ಬೆಳಗಾಗುತ ನಾವು ಸ್ಥಳಕ್ಕೆ ಬರುವೆವು. ಅಲ್ಲಿ ನೀನು ಕೊತ್ವಾಲನ ಸಮೇತ ಕಾದಿರು. ಈಗ ನಮಗೆ ಕೊಂಚ ಬೇರೆ ಕೆಲಸವಿದೆ, ನಾಳೆ ಎಲ್ಲಾ ವಿಚಾರಣೆ ತೀರಿಸಿಬಿಡೋಣ. ಪರವಾಯಿಲ್ಲ. ಲುಚ್ಚರು ಏನು ಹೇಳಿಕೊಂಡರೆ ನಮಗೇನು? ನಾಯಿಬೊಗಳದರೆ ದೇವಲೋಕ ಹಾಳಾಗುವುದೆ?”
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುನರ್ನವ
Next post ಜೀವ ಶಿವ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…