ಜೀವ ಶಿವ

ಜೀವನವೆಂಬುದು ಒಂದು ಆಶಾಗೋಪುರ
ನಿತ್ಯ ಒಡ್ಡುವುದು ಕನ್ಸುಗಳ ಮಹಾಪುರ
ಆಸೆಗಳಿಗೆ ಪೂರೈಸುತ್ತ ನಡೆದರಾಯ್ತು
ನಿನ್ನ ದಾರಿ ತಪ್ಪಿರುವುದು ನಿಜವಾಯ್ತು

ನಿನಗರಿವಿಲ್ಲದೆ ನಡೆದಿದೆ ಇಂದ್ರಿಯ ಕುತಂತ್ರ
ನಿನ್ನನ್ನು ಮಾಡಲಿವೆ ನಿತ್ಯ ಪಾರತಂತ್ರ
ಆತ್ಮದ ಭಾವದಲ್ಲಿ ನೀನು ಅವಿತುಕೊಳ್ಳು
ಉಳಿದ ವಿಚಾರಗಳಿವೆ ಬರೀಗೊಳ್ಳು

ಚಳಿಗಾಲದ ಬೆಳಗಿನಲಿ ಮೂಡುವ ಮಂಜು
ಹುಲ್ಲಿನ ಮೇಲೆ ಕಾಣುವುದು ಹೊಳೆಯುವ ಮುತ್ತು
ಕ್ಷಣಹೊತ್ತಿನ ಕಿರಣದಲಿ ಕರಗಿರುವ ಹಾಗೆ
ನಮ್ಮ ಬಾಳು ಬರೀ ಕಲ್ಪನೆಯ ಗಮ್ಮತ್ತು

ಜನ್ಮ ಜನ್ಮಗಳ ಫೇರಿ ತಪ್ಪಿಸುವದಾದರೆ
ಬಿಡು ನೀನು ನಿನ್ನ ದೇಹದ ಭಾವ
ಹಗಲಿರುಳು ಜಪಿಸು ಶಿವನಾಮ ಜಪ
ಆ ಮಾಣಿಕ್ಯ ವಿಠಲನೆ ಆ ಶಿವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪೬
Next post ನಮ್ಮ ಭಾರತವೆನ್ನಿರಿ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…