ನಮ್ಮ ಭಾರತವೆನ್ನಿರಿ

ನಮ್ಮ ಭಾರತವೆನ್ನಿರಿ |
ವಿಶ್ವ ಚೇತನವೆನ್ನಿರಿ ||
ವಿಶ್ವ ಮಾತೆಗೆ ಉತ್ಸವವಿದು |
ಜಯ ಜಯ ಘೋಷಣೆಯ ಮೊಳಗಿರಿ ||ನಮ್ಮ||

ವಿಶ್ವೇಶ್ವರರ ನಿರ್ಮಾಣ |
ಬೃಂದಾವನ ಅಮರಗಾನ |
ಜವಾಹರ ಗಾಂಧೀಜಿ ತ್ಯಾಗ ಬಲಿದಾನ |
ಇತಿಹಾಸ ಉತ್ತುಂಗದ ಮಾನ ಸನ್ಮಾನ ||ನಮ್ಮ||

ಜೈ ಜವಾನ್ ಜೈ ಕಿಸಾನ್ ||
ಎಂದರು ಲಾಲ್ ಬಹದ್ದೂರರು
ರೈತರಿಗದುವೇ ಅಮರಗಾನ |
ರಾಷ್ಟ್ರ ಕೀರ್ತಿ ಬೆಳಗಿದರು |
ಭವ್ಯ ಭಾರತ ಕಟ್ಟಿದರು ||ನಮ್ಮ||

ಸೈನ್ಯ ಕಟ್ಟಿ ಸೈನ್ಯ ಬೆಳಸಿ |
ದೇಶ ಪ್ರೇಮದ ಬೀಜ ಬಿತ್ತಿ ||
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ |
ಹಬ್ಬಿದ ಭಾರತ ಮಾತೆಯ ಕಿರಣವಾದರು ||
ಕೀರ್ತಿ ಧ್ವಜವ ಹಾರಿಸಿದರು ||ನಮ್ಮ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವ ಶಿವ
Next post ಮಳೆ ನಕ್ಷತ್ರ

ಸಣ್ಣ ಕತೆ

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ಶಾಕಿಂಗ್ ಪ್ರೇಮ ಪ್ರಕರಣ

  ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…