Day: January 3, 2020

#ಕವಿತೆ

ನಿಕರಾಗುವಾ: ಪಾಪಬೋಧೆ

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ತಿರುವನಂತಪುರ ೬೬. ಸಾಂಡಿನಿಸ್ಟಾ ಚಳುವಳಿಯ ಬಗ್ಗೆ ಮಾತಾಡುತ್ತ ನಡೆದಿದ್ದವು. ಅವಳು ಸೀರೆಯನ್ನು ಮೊಣಕಾಲತನಕ ಎತ್ತಿಹಿಡಿದಿದ್ದಳು. ಅಕ್ಕಪಕ್ಕದ ಆಂಗಡಿಬೆಳಕಲ್ಲಿ ಇಬ್ಬರೂ ಧಾರಾಳ ತೊಯ್ದಿದ್ದೆವು. ಇಷ್ಟು ವರ್ಷಗಳ ನಂತರ ನನಗೀಗ ಏಕೆ ಈ ನೆನಪು ಇಷ್ಟು ದೂರದ ಹೈದರಾಬಾದಿನಲ್ಲಿ ಕುಳಿತು? ಏಕೆಂದರೆ ನಿಕಾರಾಗುವಾ ಈಗ ಸ್ವತಂತ್ರ- ಆ ಸಂಜೆ ಮಾತ್ರ ನನ್ನ ಗಮನ ಬೇರೆ ಕಡೆ ಇತ್ತು. ಅವಳು […]

#ಹಾಸ್ಯ

ಅಂತೂ ಸಾಹಿತಿಯಾಗಿಬಿಟ್ರಲ್ಲಾ……!

0

ಇದೊಂದು ರೀತಿಯ ನೆನಪಿನ ಬುತ್ತಿಯನ್ನು ಉಣಬಡಿಸುವ ಪ್ರಯತ್ನ ನನ್ನದು. ಇದರಲ್ಲಿ ಖುಷಿ, ಮಜಾ ಮತ್ತು ತಿಳಿದುಕೊಳ್ಳುವಂತದ್ದು ಏನಾದರೂ ಇದ್ದರೆ, ಓದ್ರಿ, ನಾನು ೫ ನೇ ಕ್ಲಾಸ್‌ನಲ್ಲಿದ್ದಾಗ ನಮ್ಮಮ್ಮನ ತವರ್‍ಮನೆ ಕೆ.ಬೂದಿಹಾಳದಲ್ಲಿ ಓದುತ್ತಿದ್ದೆ. ಶಾಲೆಯಲ್ಲಿ ನಾನೇ ದೊಡ್ಡ ವಿದ್ಯಾರ್ಥಿಯಾದ್ದರಿಂದ ವಾರ್ಷಿಕ ದಿನಾಚರಣೆ ಮತ್ತು ವಿಶೇಷ ದಿನಗಳಲ್ಲಿ ಏಕಾಂಕ ನಾಟಕಗಳನ್ನು ಅಲ್ಲಿಯ ಮಾಸ್ತರು ನನ್ನಿಂದ ಮಾಡಸ್ತಿದ್ರು. ಎಲ್ರಗಿಂತ ನಾನೇ […]

#ಕವಿತೆ

ಯಾರದು?

0
ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)

ಯಾರದು! ಯಾರದು!! ಯಾರದು ಸೇನೆ? ಯಾರಿಗೆ ಬಂದಿದೆ ಉಳಿಯದ ಬೇನೆ? || ಹಿಮಗಿರಿಗಳ ನಡು ಪರ್ವತಸಾನು ತೆಪ್ಪಗೆ ಕುಳಿತಿಹನಲ್ಲಿಯೆ ಶಿವನು || ಬೆಂಕಿಯ ಕಣ್ಣನು ಅಡಗಿಸಿಕೊಂಡು ಉಲುಹಿನ ಸುಳುಹನು ಮಡಗಿಸಿಕೊಂಡು || ಧ್ಯಾನದ ಮೌನದ ಆಳದ ತಳದಲಿ ಸುಳಿವವರಾರೀ ರುದ್ರನ ಬಳಿಯಲಿ? || ಹುಚ್ಚಿನ ಬೆಚ್ಚಿನ ಹುಳುಗಳ ತಂಡೇ ಇಲ್ಲಿಯು ನಡೆಸುತ್ತಿರುವುದು ಬಂಡೇ? || ಅಲ್ಲಿದೆ […]