ತಿರುವನಂತಪುರ ೬೬. ಸಾಂಡಿನಿಸ್ಟಾ ಚಳುವಳಿಯ
ಬಗ್ಗೆ ಮಾತಾಡುತ್ತ ನಡೆದಿದ್ದವು.
ಅವಳು ಸೀರೆಯನ್ನು

ಮೊಣಕಾಲತನಕ ಎತ್ತಿಹಿಡಿದಿದ್ದಳು.
ಅಕ್ಕಪಕ್ಕದ ಆಂಗಡಿಬೆಳಕಲ್ಲಿ ಇಬ್ಬರೂ
ಧಾರಾಳ ತೊಯ್ದಿದ್ದೆವು.

ಇಷ್ಟು ವರ್ಷಗಳ ನಂತರ ನನಗೀಗ
ಏಕೆ ಈ ನೆನಪು ಇಷ್ಟು ದೂರದ
ಹೈದರಾಬಾದಿನಲ್ಲಿ ಕುಳಿತು?

ಏಕೆಂದರೆ ನಿಕಾರಾಗುವಾ ಈಗ ಸ್ವತಂತ್ರ-
ಆ ಸಂಜೆ ಮಾತ್ರ ನನ್ನ ಗಮನ
ಬೇರೆ ಕಡೆ ಇತ್ತು.

ಅವಳು ಬೇಕೆಂತಲೆ ಸೀರೆಯನ್ನು
ಹಾಗೆ ಹಿಡಿದಿದ್ದಾಳೆ ಅಂದುಕೊಂಡಿದ್ದೆ
ತಪ್ಪಾಗಿ.

ರಸ್ತೆಯಲ್ಲಿ ಅಲ್ಲಲ್ಲಿ ಕಟ್ಟಿನಿಂತಿದ್ದ
ಮಳೆನೀರ ತಗ್ಗುಗಳನ್ನು
ನಾನೇಕೆ ಮರೆತೆ?
*****