ಎಲೆ ಕರ್ಣಾಟದೀಂದ್ರ ಚೂತವನ ಚೈತ್ರ! ಪ್ರೌಢ ಲಕ್ಷ್ಮೀಶ| ಗಾ | ವಿಲನಾದೆನ್ನ ಬಳಲ್ದ ಬಂಜೆ ನುಡಿಯಂ ನೀನಾಲಿಸೈ ಲಾಲಿಸೈ! | ಲಲಿತ ಸ್ಮಾರಕ ಕಂಭದೊಲ್ ಕೃತಿಯೆ ನಿನ್ನಾ ನಾಮಮಂ ಕೀರ್ತಿಸಲ್, | ಹುಲುಮಾತಿಂ ಪೊಗಳಿರ್ಪ ಮೂಢ ಕವಿಯುಂ ಪಕ್ಕಾಗನೇ ನಿಂದೆಗಂ? ...

ನೀರು ಕಾಯುತ ನೋಡಲು ಬಚ್ಚಲಿಗೆ ಹೋದೆ ಉರಿ ಕೊನೆತನಕ ಬಂದು ಕಟ್ಟಿಗೆ ಕೈಹಿಡಿಯಷ್ಟು ಉಳಿದು ಒಲೆಯಿಂದ ಹೊರಗೆ ಬಿದ್ದಿದೆ; ಥಟ್ಟನೆ ವಯಸ್ಸಾಯಿತೆನ್ನಿಸಿತು ಸರಿದ ಬದುಕ ತಲೆಗೆ ಕರೆದು ದುರ್ಬೀನಡಿಗೆ ದಬ್ಬಿ ಹುಡುಕಿದೆ. ಒಂದು ಮಲ್ಲಿಗೆ ಒಂದು ಗುಲಾಬಿ ಇ...

ಅವ್ವನ ಹಸಿರ ರೇಶಿಮೆ ಸೀರೆ ನೆರಿಗೆಯ ನಕ್ಷತ್ರಗಳು ನಾವು || ಮೇಘವರ್‍ಣಗಳ ನಡುವೆ ಹೂವು ಗೊಂಚಲುಗಳಾಗೆ ಅವಳ ಸೆರಗ ಬಳ್ಳಿಗಳು ನಾವು || ಅವಳ ತನುಮನದ ಹೊಲಗದ್ದೆ ಗಳ ಉಳುಮೆ ಗರಿಯಲಿ ಗರಿಗೆದರಿದ ನವಿಲುಗಳು ನಾವು || ಸಾವಿರದ ಸಹಸ್ರ ಕಣ್ಣುಗಳ ಸಹಸ್ರ ...

‘ಸುಳಿದೊಂದು ಮೀನ್ನುಂಗಿತಾ ಮೀನನಾಗಲೆ ನುಂಗಿತೊಂದು ಮೀನಾ ಮೀನ ನಂಗಿದುದು ಬಳಿಕೊಂದು ಮೀನದಂ ಮತ್ತೊಂದು ಮೀನ್ನುಂಗಿತಾ ಮೀನ ನಂಗಿತೊಂದು… ’ ಎಂಬ ಷಟ್ಪದಿಯೊಂದು ಲಕ್ಷೀಶನ ಜೈಮಿನಿ ಭಾರತದ ಆರನೆ ಸಂಧಿಯಲ್ಲಿ ಬರುತ್ತದೆ. ಭೀಮಸೇನನು ದ್ವಾರಕೆಗೆ...

ಕಲಾಕಾರನೊಬ್ಬ ತನ್ನ ಮನೆಯ ಗೋಡೆಯ ಮೇಲೆ ಜೇಡರ ಬಲೆಯ ಚಿತ್ರ ಬರೆದಿದ್ದು, ಇದನ್ನು ನಿಜವಾದ ಜೇಡರ ಬಲೆ ಎಂದು ತಿಳಿದು ಕೆಲಸದಾಕೆ ದಿನವಿಡೀ ಗುಡಿಸಿದಳು. ಇದನ್ನು ಹೆಮ್ಮೆಯಿಂದ ಕಲಾಕಾರನ ಹೆಂಡತಿ ಪಕ್ಕದ ಮನೆ ಯಾಕೆಗೆ ಹೇಳಿದಾಗ ಆಕೆ ಹೇಳಿದಳು. &#8220...

ಕೋಣೆಯಲ್ಲಿ ಹರಡಿದ ಬೊಂಬೆಗಳನ್ನು ಮಗು ಮಲಗಿಸಿ ಅಜ್ಜಿಯ ತೊಡೆಯಲ್ಲಿ ಕುಳಿತಿತು ಮಗು. “ಪುಟ್ಟಿ! ಬೊಂಬೆ ಜೊತೆ ಆಡಿಕೋ” ಎಂದಳು ಅಜ್ಜಿ. “ಬೊಂಬೆ ಆಗಲೆ ತಾಚಿ ಮಾಡಿದೆ, ಜೋಜೋ ಹಾಡಿದೆ. ಅಜ್ಜಿ ಈಗ ನೀನು ತಾಚಿಮಾಡು” ಎಂದಿ...

ಅಷ್ಟೆಲ್ಲಾ ತಾರೆಗಳ ಬಿಗಿ ಪಹರೆಯ ನಡುವೆಯೂ ತಿಂಗಳಿಗೊಮ್ಮೆ ಕಣ್ಮರೆಯಾಗುವ ತುಂಟ ಚಂದಿರನಂತೆ, ಮೈ ಎಲ್ಲಾ ಕಣ್ಣಾಗಿ ಕಾದಿರುವ ಹಸಿವಿನ ಪರಿಧಿ ದಾಟಿ ಮರೆಯಾಗಿ ನಿಡುಸುಯ್ಯುತ್ತದೆ ರೊಟ್ಟಿ. *****...

ಅಮ್ಮ ನಿನ್ನ ಮಡಿಲಲ್ಲೊಮ್ಮೆ ಮಗುವಾಗಿ ತಲೆಯನಿಟ್ಟು ತೂಗುವಾಸೆ| ಆ ನಿನ್ನ ಲಾಲಿಹಾಡ ನೆನೆದು ಮಗುವಾಗಿ ಮರಳುವಾಸೆ|| ಅಮ್ಮ ನಿನ್ನ ಮಡಿಲಲ್ಲೊಮ್ಮೆ ನಾನೂ ಅಮ್ಮನಾಗಭರವಸೆಯಲಿ ಹುಟ್ಟುವ ಮಗುವಿಗಾಗಿ ಕುಲಾಯಿ ಹೆಣೆಯುತಿರುವಾಗ ನನ್ನಲೇಕಿಂತ ಮುಗ್ದ ಆಸೆ|...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...