ಲಕ್ಷ್ಮೀಶ ಕವಿ

ಎಲೆ ಕರ್ಣಾಟದೀಂದ್ರ ಚೂತವನ ಚೈತ್ರ! ಪ್ರೌಢ ಲಕ್ಷ್ಮೀಶ| ಗಾ |
ವಿಲನಾದೆನ್ನ ಬಳಲ್ದ ಬಂಜೆ ನುಡಿಯಂ ನೀನಾಲಿಸೈ ಲಾಲಿಸೈ! |
ಲಲಿತ ಸ್ಮಾರಕ ಕಂಭದೊಲ್ ಕೃತಿಯೆ ನಿನ್ನಾ ನಾಮಮಂ ಕೀರ್ತಿಸಲ್, |
ಹುಲುಮಾತಿಂ ಪೊಗಳಿರ್ಪ ಮೂಢ ಕವಿಯುಂ ಪಕ್ಕಾಗನೇ ನಿಂದೆಗಂ? || ೧ ||

ಮುಗಿಲು ಮುಟ್ಟಿದ ಶೃ೦ಗಮಂ ಗಗನದೊಳ್ ಪ್ರಚ್ಛನ್ನ ಗೈದುಂ ವಲಂ, |
ಜಗಕಂ ಕನ್ನಡಿಯಂತೆ ತೋರಿ ಬೆಳೆದುಂ, ಪ್ರೌನ್ನತ್ಯದಿಂ ನಿಂದು, ನು |
ಣ್ಬೊಗರಿಂ ಶೋಭಿಪ ಸತ್ಯವೀಂದ್ರ ಗಿರಿ! ನಿನ್ನಂ ನೋಡಲೇನೆಂದಿಪೆಂ? |
ಮಿಗೆಯುತ್ಸಾಹದಿ ನೀರವಂ ನಿರಧಿಕಂ ನಿಷ್ಪಂದಮಾನಂದಿಪೆಂ ||೨||

ಅಳಿವರ್ ಕಬ್ಬಿಗರೆಂದು ಪೇಳ್ವ ನುಡಿಯುಂ ಚೆನ್ನಪ್ಪುದೇ ಲೋಕದೊಳ್ |
ಅಳಿವಿಲ್ಲಂ ಕೃತಿಗಳ್ಗೆ, ನಿನ್ನಜಸಮುಂ ಕರ್ಣಾಟದೊಳ್‌ ಶಾಶ್ವತಂ |
ತಿಳಿಯಲ್‌ ನಿನ್ನಯ ಷಟ್ಪದಂಗಳೊಲವಿಂ ಸಾಹಿತ್ಯ ವಿದ್ವಾಂಸಮಂ |
ಡಳಕಾಸರದೊಳೀಗಳುಂ ಮೊರೆವುವೈ-ನಿನ್ನಿಚ್ಛೆಯಂ ಪಾಲಿಸಲ್ ||೩||

ಬೆಳದೆಂ ಬಾಲಕನಾಗಿ ನಿನ್ನವಿಲಸತ್ಷಟ್ಪಾದ ಝೇಂಕಾರದೊಳ್‌, |
ಕಳೆದೆಂ ಜವ್ವನಮಂ ವಿಲಾಸ ಕವಿತಾ ಸಂಭೂತ ಶೃಂಗಾರದೊಳ್‌, |
ತಳೆದುಂ ಮಾನಸತೃಪ್ತಿಯಂ ಕೃತಿಯ ಸದ್ಧರ್ಮೋಪದೇಶಂಗಳಿಂ, |
ಕಳೆವೆಂ ಸಂಸ್ಕೃತಿ ದುಃಖದಿಂ ನುರಿದ ಮುಪ್ಪಂ ನಿನ್ನ ವಾರ್ಧಕ್ಯದೊಳ್ || ೪ ||

(ಸುವಾಸಿನಿ ೧೯೦೩)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶವಪರೀಕ್ಷೆ
Next post ಮುಂಜಾವದಲ್ಲಿ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…