ಅವ್ವನ ಹಸಿರ ರೇಶಿಮೆ
ಸೀರೆ ನೆರಿಗೆಯ ನಕ್ಷತ್ರಗಳು ನಾವು ||

ಮೇಘವರ್‍ಣಗಳ ನಡುವೆ
ಹೂವು ಗೊಂಚಲುಗಳಾಗೆ
ಅವಳ ಸೆರಗ ಬಳ್ಳಿಗಳು ನಾವು ||

ಅವಳ ತನುಮನದ ಹೊಲಗದ್ದೆ
ಗಳ ಉಳುಮೆ ಗರಿಯಲಿ
ಗರಿಗೆದರಿದ ನವಿಲುಗಳು ನಾವು ||

ಸಾವಿರದ ಸಹಸ್ರ ಕಣ್ಣುಗಳ
ಸಹಸ್ರ ಬಾಹುಬಲ ಧೀರ
ವೀರ ಬೆಂಗಾವಲಿಗರು ನಾವು ||

ಅವಳ ಒಡಲಲಿ ಹುಟ್ಟಿ
ಅವಳ ತೋಳ್ ಅಪ್ಪುಗೆಯಲಿ
ಬೆಚ್ಚನೆ ಉಸಿರಾಡುವ ಕಂದಮ್ಮಗಳು
ನಾವೇ ಧನ್ಯರು ನಾವೇ ಮಾನ್ಯರು ||
*****