ಕ್ಷಮಿಸು ನೀನು

ಕ್ಷಮಿಸು ನೀನು
ಇನ್ನೆಂದೂ ನಾನು
ಕುಡಿಯುವುದಿಲ್ಲ|
ಕ್ಷಮಿಸು ನೀನು
ಮದುವೆಗೆ ಮುನ್ನ
ಯಾವ ಚಟವಿಲ್ಲವೆಂದು
ಸುಳ್ಳುಹೇಳಿ ಮದುವೆಯಾದೆ ನಿನ್ನ||

ನಿನ್ನ ಪ್ರೀತಿ ಮಮತೆಗಿಂತ
ಹಿರಿದಲ್ಲ ಈ ಚಟ
ನಿನ್ನ ಸನಿಹವಿರುವುದಕಿಂತ
ಸುಖವೇನಿಲ್ಲ ಈ ಚಟ|
ನಿನ್ನ ಪೇಮದಮಲಿಗಿಂತ
ಮಜವೇನಿಲ್ಲ|
ಸಹವಾಸ ದೋಷ
ಆ ಒಂಟಿತನ ಜೊತೆಗೂಡಿ
ಸೆಳೆಯಿತೆನ್ನ ಸೆರೆಗೆ ಆಗ||

ನಮಗೆ ಹುಟ್ಟಲಿರುವ
ಮಗುವ ಮೇಲಾಣೆ
ನಾನ್ನಿನ್ನೆಂದೂ ಕುಡಿಯುವುದಿಲ್ಲ|
ದಿನಾ ಸಂಜೆ ನಾ ಬರುವಾಗ
ನಿನಗೆ ತರುವೆ ಮಲ್ಲಿಗೆ|
ಪ್ರೀತಿ ಮಮತೆಯಿಂದಲಿ
ನಿನ್ನಾರೈಕೆ ಮಾಡಿ|
ತಿಂಗಳು ತುಂಬಿದ ಬಳಿಕ
ಚೊಚ್ಚಲ ಹೆರಿಗೆಗೆ
ನಾನೇ ಗಾಡಿ ಹೂಡಿ
ತೌರಿಗೆ ಕಳುಹಿಸಲು ಬರುವೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇದು ನ್ಯಾಯವೇ?
Next post ನಿನೇಕೆ ಸ್ವಾರ್ಥಿ

ಸಣ್ಣ ಕತೆ

 • ಇಬ್ಬರು ಹುಚ್ಚರು

  ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

 • ಅಜ್ಜಿಯ ಪ್ರೇಮ

  ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

 • ಬಿರುಕು

  ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

 • ದಾರಿ ಯಾವುದಯ್ಯಾ?

  ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…