ಆ ಚಾಲಕ ವೇಗವಾಗಿ ವಾಹನವನ್ನು ಓಡಿಸಿ ಆಯ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ. ಅವನ ಅಜಾಗ್ರತೆ ಅವನಿಗೆ ಅರಿವಾಗಲೇ ಇಲ್ಲ. ಅವನಿಗೆ ಮರದ ಮೇಲೆ ಅತೀವ ಕೋಪ ಬಂತು. ಮರವನ್ನು ಕಡೆದು ಹಾಕಿದ. ಮಗುವಿನಂತೆ “ನಾನೇನು ಮಾಡಿದೆ? ನಿಂತ ಕಡೆ ನಿಂತಿದ್ದೆ. ನೀನೆ ನನ್ನನ್ನು ಬಂದು ಗುದ್ದಿ ನನ್ನ ಪ್ರಾಣ ತೆಗೆದಿರುವೆ. ಇದು ನ್ಯಾಯವೇ?” ಎಂದಿತು ಮರ, ಕೆಳಗೆ ಕೆಡವಿದ ಮರವನ್ನು ಕಾಲಿಂದ ತುಳಿದು ಕೋಪದಲ್ಲಿ ಕೂಗಾಡುತಿದ್ದ ಮನುಷ್ಯ ಮರಕ್ಕೆ ರಾಕ್ಷಸನಂತೆ ಕಂಡಿತು.
*****