Home / ಲೇಖನ / ಇತರೆ / ಸಾಧನೆಯ ಹಾದಿಯಲಿ

ಸಾಧನೆಯ ಹಾದಿಯಲಿ

Mettiluಪ್ರಿಯ ಸಖಿ,

ಗುರುಗಳ ಬಳಿ ಶಿಷ್ಯನೊಬ್ಬ ಬಂದು ತನ್ನ ನೋವನ್ನು ತೋಡಿಕೊಳ್ಳುತ್ತಾ ತನ್ನ ಹೊಸ ಕೆಲಸವನ್ನು ನೋಡಿ ಜನರೆಲ್ಲರೂ ಆಡಿಕೊಂಡು ನಗ್ತಾ ಇದ್ದಾರೆ. ಇದರಿಂದ ತನಗೆ ತುಂಬಾ ಬೇಸರವಾಗಿದೆ. ಹಾಗಾಗಿ ಇನ್ನು ಮುಂದೆ ಈ ಕೆಲಸ ಮುಂದುವರೆಸುವುದಿಲ್ಲ ಎಂದು ಹೇಳಿದ.

ಇದನ್ನು ಕೇಳಿದ ಗುರುಗಳು ನೋಡು ಮಗು, ಯಾವುದೇ ಹೊಸ ಕೆಲಸದಲ್ಲಿ ಗುರಿಯನ್ನು ಸೇರಬೇಕಾದರೆ ಆ ಸಾಧನೆಯ ಹಾದಿಯಲ್ಲಿ ನಾಲ್ಕು ಹಂತಗಳನ್ನು ದಾಟಿ ಬರಬೇಕಾಗುತ್ತದೆ. ಮೊದಲನೆ ಹಂತದಲ್ಲಿ ಜನ ನಿನ್ನ ಹೊಸ ಕೆಲಸವನ್ನು ನೋಡಿ ನಗುತ್ತಾರೆ. ಮುಂದುವರೆದರೆ, ಎರಡನೆಯ ಹಂತದಲ್ಲಿ ವ್ಯಂಗ್ಯ, ಕೊಂಕು ಮಾತುಗಳಿಂದ ನಿನ್ನ ಚುಚ್ಚುತ್ತಾರೆ. ಇದಕ್ಕೂ ನೀನು ಹೆದರದೇ ಮುಂದುವರೆದರೆ ಮೂರನೆಯ ಹಂತದಲ್ಲಿ ಜನ ಇವನೇನೋ ಮಾಡ್ತಾ ಇದ್ದಾನಲ್ಲ ತಾಳು ನೋಡೋಣ ಅಂತ ಮೌನವಾಗಿ ನಿಂತು ನೋಡ್ತಾರೆ. ಕೊನೆಯ ನಿನ್ನ ಗೆಲುವಿನ ಹಂತ. ಇಲ್ಲಿ ಜನ ನೀನು ಮಾಡಿರೋ ಕೆಲಸ ಸತ್ವಪೂರ್ಣವಾದುದೋ ಅಲ್ಲವೋ ಪರೀಕ್ಷಿಸಿ, ಇದು ನಿನ್ನ ನಿಜವಾದ ಸಾಧನೆ ಅಂತ ನಿನ್ನನ್ನು ಮೆಚ್ಚಿಕೊಳ್ಳುತ್ತಾರೆ. ಈ ನಾಲ್ಕೂ ಹಂತಗಳು ಒಬ್ಬ ಸಾಧಕನಿಗೆ ಸತ್ವ ಪರೀಕ್ಷೆ ಇದ್ದ ಹಾಗೆ. ಕೆಲವರು ಮೊದಲ ಹಂತದಲ್ಲೇ ಜನರ ನಗುವನ್ನು ತಿರಸ್ಕಾರವನ್ನು ಕಂಡು ಹೆದರಿ ಕೆಲಸವನ್ನು ಅರ್ಧದಲ್ಲೇ ಬಿಟ್ಟು ಓಡಿ ಹೋಗ್ತಾರೆ.  ಉಳಿದ ಕೆಲವರು ಮೂರನೇ ಹಂತಕ್ಕೆ ಬಂದು ಜನರ ಮೌನವನ್ನು ಅರ್ಥ ಮಾಡಿಕೊಳ್ಳಲಾಗದೇ ಗೊಂದಲಕ್ಕೊಳಗಾಗಿ ಹೆದರಿ ಕೆಲಸವನ್ನು ಅರ್ಧದಲ್ಲಿ ನಿಲ್ಲಿಸ್ತಾರೆ. ಇನ್ನುಳಿದ ಕೆಲವೇ ಕೆಲವರು ಮಾತ್ರ ಈ ಮೂರೂ ಹಂತಗಳನ್ನು ಧೈರ್ಯದಿಂದ ದಾಟಿ ನಾಲ್ಕನೆಯ ಹಂತವನ್ನು ತಲುಪಿ ತಮ್ಮ ಕೆಲಸವನ್ನು ಸಮಾಜದ ಪರಿಕ್ಷೆಗೆ ಒಳಪಡಿಸುತ್ತಾರೆ ಮತ್ತು ಅದೇ ಜನರಿಂದಲೇ ಭೇಷ್‌ ಎನಿಸಿಕೊಳ್ತಾರೆ.

ಆದ್ದರಿಂದಲೇ ನಿಜವಾದ ಸಾಧಕನಿಗೆ ತಾಳ್ಮೆ ಅತಿ ಮುಖ್ಯ. ತಾನು ಯಾವ ಹಂತದಲ್ಲೂ ಅಧೈರ್ಯದಿಂದ ಓಡಿ ಹೋಗದಂತಾ ಮನಸ್ಥೈರ್ಯ, ಸ೦ಯಮವನ್ನು ಸಾಧಕ ಮೊದಲು ರೂಢಿಸಿಕೊಳ್ಳಬೇಕು. ಜನರ ಮಾತುಗಳಿಗೆ ಕಿವಿಯನ್ನು ಕಿವುಡಾಗಿಸಿಕೊಳ್ಳಬೇಕು. ಅರ್ಜುನನ ಕಣ್ಣಿಗೆ ಪಕ್ಷಿಯ ಕಣ್ಣು ಮಾತ್ರ ಕ೦ಡಂತೆ, ಸಾಧಕನಿಗೆ ತನ್ನ ಗುರಿ ಮಾತ್ರ ಮುಖ್ಯವಾದುದು. ಹಾಗೇ ಆ ಗುರಿಯನ್ನು ತಲುಪಲು ಇಲ್ಲಿ ಯಾವುದೂ ಸುಲಭ ಮಾರ್ಗಗಳಿಲ್ಲ. ಅದನ್ನು ಕಠಿಣ ಪರಿಶ್ರಮದಿಂದಷ್ಟೇ ಸಾಧಿಸಬೇಕು, ಎ೦ಬುದನ್ನು ಸಾಧಕ ಎ೦ದೂ ಮರೆಯಬಾರದು ಎಂದರು.

ಇವನ್ನು ಕೇಳಿದ ಶಿಷ್ಯನಿಗೆ ಜ್ಞಾನೋದಯವಾಯ್ತು. ಇನ್ನು ತನ್ನ ಸಾಧನೆಯ ಹಾದಿಯಲ್ಲಿ ಯಾವುದೇ ಅಡ್ಡಿ, ಆತಂಕಗಳು ಬಂದರೂ ತಾನು ಹೆದರುವುದಿಲ್ಲವೆ೦ದು ಆತ ಪ್ರತಿಜ್ಞೆ ಮಾಡಿದ. ಮತ್ತು ತನ್ನ ಸಾಧನೆಯಲ್ಲಿ ಗೆದ್ದ.

ಸಖಿ, ಕಥೆ ಇಷ್ಪವಾಯ್ತೋ ಇಲ್ಲವೋ ತಿಳಿಸುತ್ತೀಯಲ್ಲವೇ ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...