`ಅಹಂಕಾರರಹಿತ ನಾನು ಮುಕ್ತ ಆತ್ಮನಂದನು-
ಸುಡಲಿ ಊಟ ಬರದು ಏಕೆ ಕೂಡಲೆ ತಾನೆ’೦ದನು.
ಅವನಿಗೆಂದೆ `ಏಕೊ ರೋಷ?’ `ಎಂಥ ರೋಷ ಎದರದು?
ಉದರದೇವ ಹಸಿದುಕೊಂಡ ಆ ಗರ್ಜನೆ ಆದರದು!’
`ಹೀಗೊ’ ಎಂದೆ- ‘ಹೌದು’ ಎಂದ `ಎಲ್ಲ ಆಟ ಅವನದು
ಹಸಿಯೆ ನುಸಿಯೆ ನನ್ನ ಬದುಕು ಶುದ್ಧ ಸ್ವಯಂಭವನದು
ಏನು ಆದರೇನು ನನಗೆ ಇಂದು ನಾಡಿದು’
`ನಿಜವೊ’ ಎಂದೆ ಅನ್ನರಾಗ ಎಳೆದು ಮತ್ತೆ ಹಾಡಿದು ?
`ಅಚ್ಚಾ’ ಎಂದಾ ‘ನಿನ್ನ ಶಂಕೆ ನನ್ನ ತಲೆಗು ಸೋ೦ಕಿತು
ಒಮ್ಮೆ ಮುಕ್ತ ಸದಾಮುಕ್ತ ಉಳಿದುದೇನು ಕೊಂಕಿತು ?
ಒದ್ದಾಡಿದೆ ಗುದ್ದಾಡಿದೆ ಕಾದ್ದಾಡಿದೆ ಆಗಲಿ
ಹಸಿವು ಹುಸಿವು ಕಸುವು ಕುಸಿವು ಹೇಗೊ ಹಾಗೆ ಸಾಗಲಿ
ಆತ್ಮಜ್ಞಾನ ಮುಕ್ತಗಾಸ; ಉಳಿದ ತಾನ ಮಾನವು
ತಾಳ ಬಿಡಲಿ, ಮೇಳ ಕೆಡಲಿ ಅದರದೇಕೆ ಭಾನವು ?’
*****