ಮುಂದೆ ಸಾಗು

ಪ್ರಪಂಚವೆಲ್ಲ ಒಂದು ಕನ್ಸು
ಪರಮಾತ್ಮ ಸೃಷ್ಟಿಸಿದ ಮಾಯೆ
ಜೇಡರ ತಂತುವಿನಂತೆ ಇದರ ರೂಪ
ಇದನ್ನು ಆಡಿಸುವಾತ ಮಾತ್ರ ಪರೋಕ್ಷ

ನಿಯಮ ಚೌಕಟ್ಟುಗಳೇಕೆ ನಿನಗೆ
ನಾಳೆಯ ಚಿಂತೆಗಳೇಕೆ ನಿನಗೆ
ಸೃಷ್ಟಿಕರ್ತ ಇದೆಲ್ಲ ಸೃಷ್ಟಿಸಿದಾತ
ಅವನಿಗೆ ಶರಣಾದರಾಯ್ತು ಅವನಿಗೆ ಚಿಂತೆ

ಹುಟ್ಟು ಸಾವು ಜನುಮಗಳೆಲ್ಲವೂ
ಆನಂದ ಆರೋಗ್ಯ ಅಯಸ್ಸಗಳೆಲ್ಲವೊ
ಭಗವಾನ ಆಧೀನದಲ್ಲಿರುವ ಸೂತ್ರ
ನೀನು ಮಾತ್ರ ಬರೀ ಸೂತ್ರದ ಗೊಂಬೆ

ಕ್ಷಣಿಕ ಯೋಜನೆಗಳಿಗೆ ಬದ್ಧನಾಗದರು
ಆಮೂಲ್ಯ ಬಾಳು ಹಾಳುಗೆಡುವದಿರು
ಈಗ ದೊರೆತ ನರದೇಹವನ್ನು ನೀನು
ದೇವ ಸಾಕ್ಷಾತ್ಕಾರಕ್ಕೆ ತಿರುಗಿಸು ನೀನು

ಕಾಮಕಾಂಚನಗಳ ಹೊಸಕಿ ಹಾಕು
ಈ ಕ್ಷಣದಲೇ ದೇವರಿಗೆ ಮುಡಿಪಾಗು
ಯಾರು ನಿನ್ನ ಮೇಲೆತ್ತಲಾರರು ನಿಜ
ಮಾಣಿಕ್ಯ ವಿಠಲನ ದಾರಿಯಲ್ಲಿ ಸಾಗು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪೧
Next post ನಮ್ಮ ದೇಶ ಭಾರತ

ಸಣ್ಣ ಕತೆ

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…