ಚಿನ್ನವೆಂಬ ಹೆಣ್ಣು
ಕಬ್ಬಿಣವೆಂಬ ಗಂಡು
ತಾಮ್ರವೆಂಬ ಶ್ರೀಮಂತ
ಹಿತ್ತಾಳೆಯೆಂಬ ಬಡವಿ
ಬೇಧವಿಲ್ಲದೆ ಬೆರೆತು
ಒಂದಾಗುವುದು ಕರಗಿ
ಕುಲುಮೆಯ ಕುದಿವಂತ
ಮೂಸೆಯೊಳಗೆ
ದ್ರವವಲ್ಲದ ಖನಿಜವಲ್ಲದ
ಕೂಡಿ ಬಾಳಲೂ ತಿಳಿಯದ
ಪಾದರಸ
ಮಧ್ಯೆ ಬಂದರೆ ವಿರಸ
ವಿಚ್ಛೇದನವಾಗಿ
ಬೇರಾಗುವವು ಖನಿಜಗಳು
ಪ್ರಯೋಗ ಶಾಲೆಯೊಳಗೆ
*****