ಆಕೈ ಇಕೈ ತಾತಾ ಕೈಕೈ
ಗಿಮಿಗಿಮಿ ತಿರುಗೋಣ
ನಾಸೈ ನೀಸೈ ಸೈಸೈ ಹೈಹೈ
ಗರ್ರನೆ ತಿರುಗೋಣ
ನಾನೂ ನೀನೂ ಬಿಸಿಬಿಸಿ ಪಾನಂ
ಜನುಮದ ಜೇಂಗಾನಂ
ನೀನೂ ನಾನೂ ಖುಶಿ ಖುಶಿ ಮಿಲನಂ
ಒಲವಿನ ಓಂ ಗಾನಂ
ಈ ಗಿಳಿ ಆ ಗಿಳಿ ಅರಗಿಳಿ ಸುರಗಿಳಿ
ಪ್ರೀತಿಯ ಕಳಬಳ್ಳಿ
ಕೊಳಲಿನ ಕಲಿಲುಲು ವೀಣೆಯ ಉಲಿಲುಲು
ಢಪ್ಪಿನ ಝೇಂಗಾಳಿ
ಹಾಲಿನ ಬೆಲ್ಲದ ಕಂಪಿನ ತಂಪಿನ
ತಂಗಾಳಿಯ ಬೇಟಾ
ಆಟದ ನೋಟದ ಮುದ್ದಿನ ಊಟದ
ತುಂಟಾಟದ ಕೂಟಾ
ಸುರಂ ಗಿರ್ರಂ ಬಗರಿಯ ಭಿರ್ರಂ
ಪ್ರೀತಿಲಿ ತಿರುಗೋಣ
ಸಾವು ಇಲ್ಲಂ ಸೋಲು ಇಲ್ಲಂ
ಘಿರ್ರನೆ ತಿರುಗೋಣ
*****
Latest posts by ಹನ್ನೆರಡುಮಠ ಜಿ ಹೆಚ್ (see all)
- ಬಸುರಾದೆನ ತಾಯಿ ಬಸುರಾದೆನ - January 19, 2021
- ನಿನ್ನ ಮಿಲನ ಅದೇ ಕವನ - January 12, 2021
- ಸೂಳೆವ್ವ ನಾನೂ ಹುಚಬೋಳೆ - January 5, 2021