Home / Hannerdmath

Browsing Tag: Hannerdmath

ರಾಮ ಸುಂದರ ರಹಿಮ ಬಂಧುರ ತೀರ್ಪು ಸರಿಸಮ ಗಮಗಮ ಅವರು ಬಾಳಲಿ ಇವರು ಉಳಿಯಲಿ ಬೆಳಕು ಬೆಳಕಿಗೆ ಸರಿಗಮ ಭೂಮಿ ಸೀಮಿ ಬಯಲು ಬಾನು ಎಲ್ಲ ದೇವನ ಮಂದಿರ ಹೂವು ಹಸಿರಿಗೆ ಪಕ್ಷಿ ವೃಕ್ಷಕೆ ಬೇಡ ಬೇಡ ಕಂದರ ವಿಶ್ವ ಪ್ರೇಮದ ಗೋಪುರಽಽಽ *****...

ದುಡಿವ ರಟ್ಟೆಗೆ ಶರಣು ಕೊಡುವ ಹೊಟ್ಟೆಗೆ ಶರಣು ಪರರ ಎಂಜಲು ತಿಂಬ ದಾಹಬೇಡ ಗುರುಬರಲಿ ಹರಬರಲಿ ಶಿವಬರಲಿ ಯಾರಿರಲಿ ಬೆವರಿಲ್ಲದಾ ಅನ್ನ ಅರುಹು ಬೇಡ ಶ್ರಮವಿಲ್ಲದಾ ದೇವ ಧರ್ಮಬೇಡಽಽಽಽ ಗುರುವಿರಲಿ ದೊರೆಯಿರಲಿ ಅರಮನೆಯ ಅರಸಿರಲಿ ಭೂಮಿತಾಯಿಗೆ ಶರಣು ಶರ...

ಎಲೆಯ ಮೇಲೆ ಎಲೆಯು ಉರುಳಿವೆ ಬಿಸಿಲ ಕಾಲವು ಬಂದಿತೆ ಹಕ್ಕಿ ಗೂಡು ಒಣಗಿ ಹೋಗಿದೆ ಮುಗಿಲು ಕೆಂಡವ ಕಾರಿತೆ ಎಲ್ಲಿ ಹೋಯಿತು ಹಸಿರು ಹೂಬನ ಎಲ್ಲಿ ಅಡಗಿತು ಕೂಜನ ಎಲ್ಲಿ ಮುಳುಗಿತು ಮಳೆಯ ಠಂಠಣ ತಂಪು ಹನಿಗಳ ಸಿಂಚನ ನೆಲಕೆ ಹೊಲಕೆ ಜಲಕೆ ಸುರಿದಿವೆ ಬರಿಯ...

ನೋಡು ಮೌನ ಶಾಂತಿ ಸುಮನ ಆಳ ಆಳ ಇಳಿದಿದೆ ಕೇಳು ಎದೆಯ ಪ್ರೇಮ ಕವನ ಮೇಲೆ ಮೇಲೆ ಏರಿದೆ ಅಗೋ ಅಲ್ಲಿ ಗಗನದಲ್ಲಿ ಮೌನ ಮಹಡಿ ಕರೆದಿದೆ ಇಗೋ ಇಲ್ಲಿ ಮೊರಡಿಯಲ್ಲಿ ಶಬ್ದ ಕರಡಿ ಮಡಿದಿದೆ ಬಂತು ಬಂತು ಭಾವ ಗಾನ ನಿತ್ಯ ಸತ್ಯ ಶಾಶ್ವತಾ ಆತ್ಮ ವಸ್ತು ಜ್ಯೋತಿ ...

ಆತ್ಮಯೋಗದ ಭೋಗ ನೋಡೈ ಓಡಿ ಬಂದಳು ಮುಗಿಲಿಮೆ ಶೂನ್ಯ ರಮೆಯೊ ಜೊನ್ನ ಉಮೆಯೊ ಹಾಡಿ ಬಂದಳು ನೀಲಿಮೆ ನಿನ್ನ ಸುಂದರ ಚಲುವ ಕೆನ್ನೆಗೆ ಮುತ್ತ ನಿಟ್ಟವ ಸುಂದರ ಒಮ್ಮೆ ನಿನ್ನಯ ಕಣ್ಣ ಕುಡಿಯಲಿ ಮುಳುಗಿ ಎದ್ದವ ಚಂದಿರ ಮಿನುಗು ಹಲ್ಲಿಗೆ ನಗೆಯ ಮಲ್ಲಿಗೆ ತುಟ...

ಕಟಗ ರೊಟ್ಟಿಗೆ ಗುಟುಗು ನೀರಿಗೆ ಕೋತಿ ಕಾಳಗ ನಡೆದಿದೆ ಹುಳಿತ ಹಿಂಡಿಗೆ ಕೊಳೆತ ಸಾರಿಗೆ ಹಾವು ಮುಂಗಲಿಯಾಗಿದೆ ಜಾರಿಬಿದ್ದಾ ಆತ್ಮ ರತುನಾ ಜಂಗು ರಾಡಿಯ ಅಡರಿತೊ ದೀಪವಾರಿತೊ ದೀಪ್ತಿ ತೀರಿತೊ ಬೆಳಗು ಇದ್ದಲಿಯಾಯಿತೊ ರಕ್ತ ರಾಗಾ ರುಂಡ ಮುಂಡಾ ಮದ್ದು ...

ಬಾರೆ ನೀರೆ ತಾರೆ ತಂಗಿ ಚಂಚಂದುಂಡಿ ಕಟ್ಟೋಣ ಚಂದಾ ಮಾಮಾ ಪಂಚ್ಮೀ ಮಾಮಾ ಆತ್ಮಾರಾಮಾರಾಗೋಣ || ತುರುಬಾ ತುಂಬಾ ತುಂಬೀ ಹೂವಾ ತೌರಿಗೆ ತುಂಬಿ ಬಾರವ್ವಾ ಪಂಚ್ಮೀ ಹಬ್ಬಾ ಬಂತೌ ತಂಗಿ ಬ್ಯಾಸರ ಸಾಕೌ ಬಾರವ್ವಾ || ನಾಗರಹಾವು ನಾಗರ ನಾವು ಸಕ್ಕರೆ ಪಾಕಾ ಆ...

ಮೂಡಣ ಪಡುವಣ ಕಡಲಿನ ವಡಬನೆ ನಡು ಬಾನಿನ ವರ ಭಾಸ್ಕರನೆ ವೀಚೀ ರಂಗಾ ಭುವನ ತರಂಗಾ ಕೊಂಕಣ ತೆಂಕಣ ಶಾಮಲನೆ ಗಗನಾಂಗಣ ರವಿ ಎದೆಯಾಂಗಣ ಕವಿ ಭಾರತಿಯಾತ್ಮದ ಚಿನ್ಮಯನೆ ಸತ್ಯಾರಾಧನ ಶಾಂತಾಹ್ಲಾದನ ಹುಯ್ಲಿನ ಕೊಯ್ಲಿನ ವಿಪ್ಲವನೆ ಓವೋ ಗುರುಹರ ಆತ್ಮಾಂಗಣ ಚಿ...

ಓ ವಿಶ್ವ ಮಾನವತೆ ಓ ಸತ್ಯ ಶಾಶ್ವತತೆ ಓ ಪ್ರೇಮ ಕಾಶ್ಮೀರ ಸುರಿದು ಬರಲಿ ಮುಗಿಲು ಮಲ್ಲಿಗೆ ಅರಳಿ ನೆಲತಾಯಿ ಚುಂಬಿಸಲಿ ಗುಡುಗು ಎಲುಬಿನ ಗಡಿಗಿ ಒಡೆದು ಬರಲಿ ನಾವು ಆತ್ಮರ ಬಳಗ ನಾವು ದೇವರ ಬಳಗ ಈ ಬದುಕು ಅಮೃತದ ಪ್ರೇಮ ಕೊಳಗ ಜಾತಿ ಬೇಲಿಯ ಕೋತಿ ಅಲ್...

ಚುಂಚುಂ ಚುಂಚುಂ ಚಂದದ ಚುಕ್ಕಿ ಚಿಂಚಿಂ ಚಿಂಚಿಂ ಹಾರಿಬರುವೆ ಬೆಳಕಿನ ಪಕ್ಯಾ ಬೆಳ್ಳಿಯ ಪುಚ್ಚಾ ಮುಗಿಲಿಗೆ ಬೀಸಿ ಈಸಿ ಬರುವೆ ಭೂತಾ ಭುಂಭುಂ ದೆವ್ವಾ ಢುಂಢುಂ ದಡ್ಡರ ಬಂಡಿ ದೂಡಿ ಆಡೋಣ ಬೆಳ್ಳಂ ಬೆಳಕು ಎಲ್ಲೀ ಕೊಳಕು ಚಕ್ಕಂ ಬಕ್ಕಂ ಮಿಂಚು ಹೊಚ್ಚೋಣ ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....