ರಾಮ ಸುಂದರ ರಹಿಮ ಬಂಧುರ
ತೀರ್ಪು ಸರಿಸಮ ಗಮಗಮ
ಅವರು ಬಾಳಲಿ ಇವರು ಉಳಿಯಲಿ
ಬೆಳಕು ಬೆಳಕಿಗೆ ಸರಿಗಮ

ಭೂಮಿ ಸೀಮಿ ಬಯಲು ಬಾನು
ಎಲ್ಲ ದೇವನ ಮಂದಿರ
ಹೂವು ಹಸಿರಿಗೆ ಪಕ್ಷಿ ವೃಕ್ಷಕೆ
ಬೇಡ ಬೇಡ ಕಂದರ
ವಿಶ್ವ ಪ್ರೇಮದ ಗೋಪುರಽಽಽ
*****