ಆತ್ಮಯೋಗದ ಭೋಗ ನೋಡೈ
ಓಡಿ ಬಂದಳು ಮುಗಿಲಿಮೆ
ಶೂನ್ಯ ರಮೆಯೊ ಜೊನ್ನ ಉಮೆಯೊ
ಹಾಡಿ ಬಂದಳು ನೀಲಿಮೆ

ನಿನ್ನ ಸುಂದರ ಚಲುವ ಕೆನ್ನೆಗೆ
ಮುತ್ತ ನಿಟ್ಟವ ಸುಂದರ
ಒಮ್ಮೆ ನಿನ್ನಯ ಕಣ್ಣ ಕುಡಿಯಲಿ
ಮುಳುಗಿ ಎದ್ದವ ಚಂದಿರ

ಮಿನುಗು ಹಲ್ಲಿಗೆ ನಗೆಯ ಮಲ್ಲಿಗೆ
ತುಟಿಯ ಸಂಪಿಗೆ ಬಿದ್ದಿವೆ
ಎದೆಯ ಹೊಂಡದಿ ಜೇನಹೊಳೆಯಲಿ
ಚಂದ್ರ ತಾರೆಗಳೆದ್ದಿವೆ

ಭೋಗಕಿಂತಲು ಯೋಗ ಚಂದಾ
ಲಕ್ಷ ಕೋಟಿಯ ರಿಂಗಣಾ
ಹೊರಗೆ ನೋಡದೆ ಒಳಗೆ ಓಡಲು
ಪಕ್ಷಿ ವೃಕ್ಷದ ಪೈಜಣಾ
*****