ದುಡ್ಡಿದ್ದರೆ ಉಂಗುರ ತಗೋ
ಇಲ್ಲದಿದ್ದರೆ ತುಟಿಯ ತುದಿಯ ಮುತ್ತುಕೊಡು.
ಏನೂ ತೋಚದಿದ್ದರೆ ನನ್ನೊಡನೆ ಬಾ.
ಆಮೇಲೆ ಯಾಕೆಬಂದೆನೋ ಅನ್ನಬಾರದು, ಅಷ್ಟೆ.
ಬೆಳಗಿನಲ್ಲಿ ಸೌದೆ ಆರಿಸುತ್ತೀ.
ನಿನ್ನ ಕೈಯಲ್ಲಿ ಅವು ಹೂಗಳಾಗುತ್ತವೆ.
ದಳ ಎತ್ತಿಕೊಳ್ಳುತ್ತಿದ್ದಂತೆ ನಿನ್ನಕೈ ಹಿಡಿಯುವೆ.
ಒಪ್ಪಿದರೆ ನಿನ್ನ ಪರಿಮಳ ನನ್ನದಾಗುತ್ತದೆ.
ಹೇಳಿಬಿಟ್ಟಿದ್ದೇನೆ.
ಹೋಗಬೇಕೆನಿಸಿದರೆ, ಅದೋ ಅದೇ ದಾರಿ.
ನನ್ನಹೆಸರೆ ಅದರ ಹೆಸರು.
ಹಾಗೇ ಹೋದರೆ ನಿನಗೆ ಸಿಗುವುದು ಕಣ್ಣೀರು.
*****
ಮೂಲ: ಏಂಜೆಲ್ ಗೊನ್ಸಾಲೆಝ್