ನಿನ್ನ ಮಾತೆತ್ತಿದೆನೊ ಹುರುಪಳಿಸಿ ಕುಸಿಯುವೆನು,
ನನಗು ಗಟ್ಟಿಗನೊಬ್ಬ ನಿನ್ನ ಹೆಸರನು ಬಳಸಿ
ಸಮೆಸಿರುವ ಅದಕೆಂದೆ ತನ್ನೆಲ್ಲ ಸತ್ವವನು,
ಕಟ್ಟಿಹೋಗಿದೆ ನನ್ನ ನಾಲಿಗೆಯೆ ನುಡಿಯಳಿಸಿ.
ನಿನ್ನ ಗುಣಶೀಲ ಸಾಗರದಲ್ಲಿ ತೇಲುವುದು
ಹಿರಿಜಹಜು ಕಿರುದೋಣಿ ಭೇದ ಏನಿಲ್ಲದೆ.
ಅವನದಂತಲ್ಲ, ಇದು ಬಡದೋಣಿ ಸಣ್ಣದು,
ನಿನ್ನ ಕಡಲಲ್ಲಿ ಹೊರಟರೆ ಯಾವ ಎಗ್ಗಿರದೆ.
ನೀನೀವ ಸಣ್ಣ ನೆರವೂ ನನ್ನ ನಡೆಸುವುದು,
ಅವನೊ ಸಾಗುವ ನಿನ್ನ ಮೌನದಾಳದ ಮೇಲೆ.
ಬೆಲೆಯಿರದ ದೋಣಿ ಇದು ಅಪಘಾತಗೊಂಡರೂ,
ಅವನೊ ಎತ್ತರ, ಕಟ್ಟುಮಸ್ತು, ಹೆಮ್ಮೆಯ ತಾಳೆ.
ಅವನೆ ಯಶಗಳಿಸಿ ನಾ ಉಸುಬಿನಲಿ ಕುಸಿದರೆ,
ಬಲು ಘೋರ: ನನಗೆ ನನ್ನೊಲವೆ ಸಾವಾದರೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 80
O, how i faint when i of you do write
Related Post
ಸಣ್ಣ ಕತೆ
-
ಮರೀಚಿಕೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
-
ಮೃಗಜಲ
"People are trying to work towards a good quality of life for tomorrow instead of living for today, for many… Read more…
-
ದೊಡ್ಡವರು
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…
-
ಶಾಕಿಂಗ್ ಪ್ರೇಮ ಪ್ರಕರಣ
ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…
-
ಜಂಬದ ಕೋಳಿ
ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…