Day: September 17, 2020

#ಕವಿತೆ

ಎಲ್ಲ ದೇವನ ಮಂದಿರನ!

0

ರಾಮ ಸುಂದರ ರಹಿಮ ಬಂಧುರ ತೀರ್ಪು ಸರಿಸಮ ಗಮಗಮ ಅವರು ಬಾಳಲಿ ಇವರು ಉಳಿಯಲಿ ಬೆಳಕು ಬೆಳಕಿಗೆ ಸರಿಗಮ ಭೂಮಿ ಸೀಮಿ ಬಯಲು ಬಾನು ಎಲ್ಲ ದೇವನ ಮಂದಿರ ಹೂವು ಹಸಿರಿಗೆ ಪಕ್ಷಿ ವೃಕ್ಷಕೆ ಬೇಡ ಬೇಡ ಕಂದರ ವಿಶ್ವ ಪ್ರೇಮದ ಗೋಪುರಽಽಽ *****

#ಕವಿತೆ

ಕೊರಗು

0

ಸತ್ತ ಕನಸನ್ನೆತ್ತಿ ಮತ್ತೆ ನೀರೆರೆದು ಚಿಗುರಿಸಿದ ನೀರೆ ನೀನು ಯಾರೆ ? ಮುಗಿಲಲ್ಲಿ ಅಲೆಸಿರುವ ಕೀಲುಕುದುರೆ, ನನ್ನ ಅಮಲಿನಾಳದಲದ್ದಿದಂಥ ಮದಿರೆ. ಉರಿವ ಬಿಸಿಲಿಗೆ ತಂಪುಗಾಳಿ ಸುಳಿಸಿ ಮಣ್ಣಲ್ಲಿ ಮೋಡಗಳ ಬಣ್ಣ ಕಲೆಸಿ ಮಾತ ಮರ್ಜಿಗೆ ಸಿಗದ ಉರಿಯ ಚಿಗುರುಗಳನ್ನ ಕಣ್ಣಲ್ಲಿ ನಿಲಿಸಿ ಬೊಗಸೆ ಮುಖದಲಿ ಮನಸ ಮೊಗೆದು ಸುರಿವ ನೀನು ಯಾರೆ ಚೆಲುವೆ, ನೀನು ಯಾರೆ? […]