ಜೀವನದಲ್ಲಿ ಅದೆಷ್ಟು ಲೆಕ್ಕಾಚಾರ. ಅವಳು ಪ್ರೀತಿಸುವ ಹುಡುಗನ ಶರತ್ತಿನ ಲೆಕ್ಕಾಚಾರ ಪಕ್ಕಾ ಆಗಿ ಮದುವೆ ನಿಶ್ಚಲವಾಗಲು, ಎರಡೂ ಕಡೆಯ ಬೀಗರ ಲೆಕ್ಕಾಚಾರ ಸರಿ ಹೋದಮೇಲೆ ಮದುವೆ ನಡೆದಿತ್ತು. ಇನ್ನು ತಾಯಿ ಯಾಗುವ ಹಂಬಲಕ್ಕೆ ಮತ್ತೆ ಲೆಕ್ಕಾಚಾರ ಶುರುವಾಯಿತು. ಇಷ್ಟು ಬೇಗ ಏಕೆ? ನಮಿಬ್ಬರ ಕೆಲಸ ಭದ್ರವಾಗಲಿ. ನಿಮ್ಮ ತಾಯಿ ಬಾಣಂತನಕ್ಕೆ ತಯಾರಿದ್ದರಾ? ಇಲ್ಲದಿದ್ದರೆ ಕಷ್ಟ ಅಲ್ಲವೇ? ನನ್ನ ಲೆಕ್ಕಚಾರ ಸರಿ ಅಲ್ಲವೇ? ಎಂದ ಪತಿ, ತಾಯ್ತನವನ್ನು ಹಂಬಲಿಸಿದ ಅವಳು ಗರ್ಭದಲ್ಲಿ ಶೂನ್ಯವನ್ನು ತುಂಬಿಕೊಂಡು, ಹುಟ್ಟು ಸಾವಿನ ಲೆಕ್ಕಾಚಾರಕ್ಕೆ ದೈವವೇ ಗತಿ ಎಂದುಕೊಂಡಳು.
*****