ರತಿ ದೇವಿ ಕಾಂತನ ನೆನಸಿ
ಅಳುತ ಬಿಡುವಳು ಬಾಯ |
ನೀ ಬಿಡುವುದೇ ಕೈಯಾ ||ಪ||

ಸುರರೆಲ್ಲರು ಕಲೆತು ನಿನಗೆ
ಮಾಡಿದರಲ್ಲೋ ಅಪಜಯ
ಎನ್ನ ಮೋಹದ ರಾಯ ||೧||

ತಾರಕರ ಬಾಧೆಗೆ ತಾಳದೆ
ಮಾಡಿದರುಪಾಯ?
ದೇವತಾ ಗುರುರಾಯ ||೨||

ನನಗೆ ನಿನಗೆ ಕಂಕಣ ಕಟ್ಟಿ
ಮಾಡಿ ಮದುವೆಯಾ
ಎರೆದಾರೋ ಧಾರೆಯಾ? ||೩||

ಮರೆ-ಮೋಸ ಮಾಡಿ
ನಿನ್ನ ಪ್ರಾಣ ಕಳೆದರೋ ಪ್ರಿಯಾ?
ಹೇ ಚೆನ್ನಿಗರಾಯ ||೪||

ಹರಿದಿತ್ತು ಕನಸಿನೊಳಗೆ
ಕರಿಮಣಿಯು ತಾಳಿಯಾ!
ಮುರಿದಿತ್ತು ಮೂಗುತಿಯಾ ||೫||

ನಾ ಕನಸ ಕಂಡೆ ನಿದ್ರೆಯೊಳಗೆ
ನಿನ್ನಯ ತಲೆಯಾ!
ಯಮದೂತರ ಕೈಯಾ ||೬||

ತಲೆ ಇದ್ದಿಲ್ಲ? ನಾ ಕಂಡೆ!!
ಬರೀ ಡಿಂಬದ ಬಾಯಾ!
ಇದೆಂಥ ಆಶ್ಚರ್ಯ ||೭||

ಮೆರೆಸಿದ್ದರು ನಿನ್ನಾನೆಯ ಮೇಲೆ
ಬೀದಿಯಲಾ ಕೊರಳಿಗೆ
ಹೂವಿನ ಮಾಲೆಯಾ ||೮||

ಸಿರಿ ಸೆಟ್ಟಿ ಮಾಡಿದಂಥ
ಪದದ ಗಗರಿಯಾ
ಜಂಭಕಿಕ್ಕಿದ್ದು ಸರಿಯಾ? ||೯||

ಶಾಸನವನೆ ಬರೆದು ಬಿಟ್ಟನು
ಅವ ಕೊಂಡು ಉಕ್ಕಿನ ಮಳೆಯಾ ?
ಹೋ ಮನ್ಮಥರಾಯ ||೧೦||
*****