ಹೋಳಿಯ ಹಬ್ಬ ವಿಶಾಲದ
ಪದಗಳ ಕೇಳಿರಿ ಜನರೆಲ್ಲಽ|
ಬಾಲಕರೆಲ್ಲರೂ ಕೋಲಾಟವ
ಪಿಡಿದೇಳುವ ಶೃತಿ ಸೊಲ್ಲಽ||ಪ||

ದಕ್ಷವತೀಶನು ದಕ್ಷಬ್ರಹ್ಮ ತಾ
ತನ್ನ ಪ್ರೀತಿ ಸುತೆಯುಽ
ಸಾಕ್ಷಾತ್ ವರ ವಿರೂಪಾಕ್ಷನಿಗಿತ್ತ
ನುಪೇಕ್ಷದಿ ಸಲಿಸುವೆಯಽ||೧||

ಮನದೊಳರಿದು ದಕ್ಷನು
ಶಿವ ತನ್ನಯ ಮನೆಯಳಿಯನೆಂದು
ಘನಗರ್ವದಿ ಶಿವನನು
ಕರೆಯ ಪೋದನು ಕೈಲಾಸಕಂದು||೨||

ಭೂತೇಶನು ತಿಳಿದಾತನ ಗರ್ವವ
ಮಾತಾಡಿಸಲಿಲ್ಲಽ ಖ್ಯಾತಿಲಿ
ದಕ್ಷನು ತಾ ತಿಳಿಯದೆ
ಕೋಪಾತುರದೊಳು ಸೊಲ್ಲಽ||೩||

ಸಿಟ್ಟೀಲಿ ಕರೆಸಿದ ಶ್ರೇಷ್ಠರನೆಲ್ಲ
ವಶಿಷ್ಠ ಗುರುಗಳಂದು
ಇಟ್ಟನು ಹೋಮವ ಸಿಟ್ಟಿಲಿ
ಶಿವನ ತಾ ಸುಟ್ಟು ಬಿಡುವೆನೆಂದು||೪||

ಆ ಸತಿ ದೇವಿಯಳೀ ಸುದ್ದಿಯ
ಕೇಳ್ಯಾಳಾಶಿವನಪ್ಪಣೆಯ
ತಾ ಸಾರಿದಳತಿ ಬ್ಯಾಸರದಿಂದ
ದಕ್ಷೇಶ್ವರನರಮನೆಯ||೫||

ಆ ಸತಿ ದೇವಿಯವಳೀ
ಸುದ್ದಿಯ ಕೇಳಿದಳಾ ಶಿವನಪ್ಪಣೆಯ
ತಾ ಸಾರಿದಳು ಅಭ್ಯಾಸದಿಂದ
ದಕ್ಷೇಶ್ವರನರಮನೆಯ||೫||
*****