ತಿಂಡಿ ಲೆಕ್ಕ

ಬೆಳ್ಳಂಬೆಳಗ್ಗೆ ಬಿಸಿ ಬಿಸಿ ಇಡ್ಳಿ
ಯಾರಿಗೆ ಬೇಕು ಇಡ್ಳಿ?
ಅಣ್ಣನಿಗೆ ಹತ್ತು ನಂಗೊಂದಿಪ್ಪತ್ತು
ಒಟ್ಟಾರೆಷ್ಟು ಇಡ್ಳಿ?
ಒಟ್ಟಾರೆ ಮೂವತ್ತು ಇಡ್ಳಿ

ಕಣ್ ಕಣ್ ಬಿಟ್ಟು ಉದ್ದಿನ ಹಿಟ್ಟು
ಯಾರಿಗೆ ಬೇಕು ದೋಸೆ?
ಅಣ್ಣನಿಗಿಪ್ಪತ್ತು ನಂಗೊಂದು ಮೂವತ್ತು
ಒಟ್ಟಾರೆಷ್ಟು ದೋಸೆ?
ಒಟ್ಟಾರೆ ಐವತ್ತು ದೋಸೆ

ಊತದ್ದಾಯ್ತು ಬಾತದ್ದಾಯ್ತು
ಯಾರಿಗೆ ಬೇಕು ಊತಪ್ಪ?
ಅಣ್ಣನಿಗೆ ಮೂವತ್ತು ನಂಗೊಂದು ನಲುವತ್ತು
ಒಟ್ಟಾರೆಷ್ಟು ಊತಪ್ಪ?
ಒಟ್ಟಾರೆ ಎಪ್ಪತ್ತು ಊತಪ್ಪ

ರೌಂಡ್ ರೌಂಡ್ ಉಬ್ಬಿ ಬಂತೈ ಉರುಳಿ
ಯಾರಿಗೆ ಬೇಕು ಪೂರಿ?
ಅಣ್ಣನಿಗೆ ನಲುವತ್ತು ನಂಗೊಂದೈವತ್ತು
ಒಟ್ಟಾರೆಷ್ಟು ಪೂರಿ?
ಒಟ್ಟಾರೆ ತೊಂಬತ್ತು ಪೂರಿ

ಗುಡುಗುಡು ಗುಮ್ಮಟ ದೇವರ ಲಡ್ಡು
ಯಾರಿಗೆ ಬೇಕು ಲಡ್ಡು?
ಅಣ್ಣನಿಗೈವತ್ತು ನಂಗೊಂದರುವತ್ತು
ಒಟ್ಟಾರೆಷ್ಟು ಲಡ್ಡು?
ಒಟ್ಟಾರೆ ನೂರತ್ತು ಲಡ್ಡು
ಇಲ್ಲಿಗೆ ಮುಗಿಯಿತು ಸೆಡ್ಡು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮೂರ ಹೋಳಿ ಹಾಡು – ೧
Next post ಆವಸ್ತೆ

ಸಣ್ಣ ಕತೆ

 • ಕರಿ ನಾಗರಗಳು…

  -

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… ಮುಂದೆ ಓದಿ.. 

 • ಗಂಗೆ ಅಳೆದ ಗಂಗಮ್ಮ…

  -

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… ಮುಂದೆ ಓದಿ.. 

 • ರಣಹದ್ದುಗಳು

  -

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… ಮುಂದೆ ಓದಿ.. 

 • ಮೇಷ್ಟ್ರು ರಂಗಪ್ಪ…

  -

  ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… ಮುಂದೆ ಓದಿ.. 

 • ಸಂಶೋಧನೆ

  -

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… ಮುಂದೆ ಓದಿ..