ಭಾವನದೀ ದಂಡೆಯ ಮೇಲೆ ತೂಗಿತಿದೆ ಉಯ್ಯಾಲೆ ಮಾತು ಸೋಲಿಸಿದೆ ತಾ..... ಮೌನ ಮಾಲೆ..... ಅನುದಿನ ಅನುಕ್ಷಣಕು ಕನಸುಗಳ ವಿನ್ಯಾಸ..... ಪರವಶವಾದ ಚಿತ್ತಕೆ ಇಲ್ಲಿ..... ಇಲ್ಲಿ ಚೈತ್ರದಾಯಾಸ..... ಎಷ್ಟು ಸೊಗಸಿನ ಲೋಕ ಇಣುಕುತಿರೆ ನೋಟದಲಿ ಅಂಕು-ಡೊಂಕಿನ...
ಪ್ರಕೃತಿ ನೀನು ಬರೆದ ಕಾವ್ಯ ಹಾಡುತಿಹುದು ಕೂಜನ (ಕೋಗಿಲೆ) ಅರ್ಥಸುಳಿಗಳ ಸೆಳವಿನಾಚೆ `ಕೇಳುವಂತೆ, ಜನಮನ ಕಣ್ಣ ತೀಡೋ ಹಸಿರಸಿರ ಸಾಲ ಸಾಲಿನಕ್ಕರೆಯಕ್ಕರ ಭಾವವರಳಿ ನಲಿದು ನಲಿವ ರಾಗಮಾಲಿಕೆ ನೂಪುರ ವಿಶ್ವ ಸಿಂಧುವು ವಿಶ್ವ ಬಿಂದುವು...
ಭಾಷೆ ಹಲವು ಭಾವ ಹಲವು ಭಾವಕೆಲ್ಲಿ ಅಡೆ-ತಡೆ! ನದ-ನದಿ ತೊರೆ ಸಂಗಮದ ಸಂಭ್ರಮ ಅಂಬುಧಿಯಾಳಕೆ ಎಲ್ಲಿದೆ ತಡೆ? ದಿಕ್ಕು-ದಿಕ್ಕಲಿ ಬೀಸೋಗಾಳಿಗೆ ಯಾವ ಗಡಿಯ ಕಡೆಯಿದೆ ಭಾಷೆಯಾನದಿ ಜಗವ ತಿಳಿಯಲು ಹಮ್ಮು ಬಿಮ್ಮು ತೊರೆದಿಡಬೇಕಿದೆ ನುಡಿಗಳೆಂಬವು...
ಜನನಿ ಜನ್ಮಭೂಮಿ ನಿಮ್ಮಯ ಕರುಣೆಗೆ ನಾ ಚಿರ ಋಣಿ ನಿನ್ನ ಮಡಿಲ ಕಂದನೆಂಬ ಭಾಗ್ಯ ಬೆಳಕಿನ ಕಣ್ಮಣಿ ಜನುಮ ಜನುಮ ಬಂದರೂನು ತಾಯಿ ನಿನ್ನ ರಕ್ಷ ಎನಗಿದೆ ಕಾಮಧೇನು ಕಲ್ಪತರುವಾಗಿ ಬಲ ನೀಡೋ ನಿನ್ನ...