ಕಂಡ ಕನಸಿನ ರೂಪ
ನನ್ನೆದೆಯ ಕಂಡಾಗ ಮಾತಿಗೆಲ್ಲಿಯ ಸವಿಯು
ಹೇಳೆ ಗೆಳತಿ…..
ಭೃಂಗದೆದೆ ರಂಗದಲಿ
ಸುಮಗಳೊ ಓಲಾಡಿದುದ ಪದವಿಟ್ಟು
ಹೇಳುವೆನು ಕೇಳೆ ಗೆಳತಿ…..

ಹೊಂಜೊನ್ನ ಜಾವಿನಲಿ
ಉಷೆ ಇಳೆಗಿಳಿಯೋ ಹಾದಿಯಲಿ
ಉಷೆಯೊಳಗಿನುಷೆಯಾಗಿ
ಪೀಯುಷ ಹಿಡಿದಿಳಿದವಳು ಆ ನನ್ನ ಗೆಳತಿ

ಮಂದ ಸಮೀರನ ಕರೆಗೆ
ಹಕ್ಕಿಗೊರಳು ಹಾಡುತಲಿರಲು
ಸರ-ಸ್ವರದ ಶೃತಿಯಾಗಿ
ಶೃತಿ ವೀಣೆ ನುಡಿದವಳು ಆ ನನ್ನ ಗೆಳತಿ

ತರು-ಲತೆಗಳ ಸಾಲಿನಲಿ
ಮೊಗ್ಗುಗಳ ಹಿಗ್ಗಿಸುತ
ಅರಳರಳ ಸೆಲೆಯಾಗಿ
ಅರಳಿಸಿ ನಿಂದವಳು ಆ ನನ್ನ ಗೆಳತಿ

ಎಲ್ಲಿ ನಾ ನೋಡಿದರೂ…..
ಹೇಗೆ ನಾ ಸುಳಿದಾಡಿದರೂ…..
ನನ್ನೊಳಗೆ ತಾನಾಗಿ ತೋರುವಳು….. ಆ ನನ್ನ ಗೆಳತಿ
*****

 

ಗಿರಿಜಾಪತಿ ಎಂ ಎನ್
Latest posts by ಗಿರಿಜಾಪತಿ ಎಂ ಎನ್ (see all)