ಭಾಷೆ ಹಲವು ಭಾವ ಹಲವು
ಭಾವಕೆಲ್ಲಿ ಅಡೆ-ತಡೆ!
ನದ-ನದಿ ತೊರೆ ಸಂಗಮದ ಸಂಭ್ರಮ
ಅಂಬುಧಿಯಾಳಕೆ ಎಲ್ಲಿದೆ ತಡೆ?

ದಿಕ್ಕು-ದಿಕ್ಕಲಿ ಬೀಸೋಗಾಳಿಗೆ
ಯಾವ ಗಡಿಯ ಕಡೆಯಿದೆ
ಭಾಷೆಯಾನದಿ ಜಗವ ತಿಳಿಯಲು
ಹಮ್ಮು ಬಿಮ್ಮು ತೊರೆದಿಡಬೇಕಿದೆ

ನುಡಿಗಳೆಂಬವು ಕರುಳ ಕುಡಿಗಳ
ಮನೆ-ಮನಕೆ ಬಲವನು ನೀಡಲಿ
ಮಾತೃ ಭಾಷೆಯ ನುಡಿಯಗುಡಿಯಲಿ
ನಂದಾ ದೀವಿಗೆ ಬೆಳಗಲಿ……

*****

 

ಗಿರಿಜಾಪತಿ ಎಂ ಎನ್
Latest posts by ಗಿರಿಜಾಪತಿ ಎಂ ಎನ್ (see all)