ಬೆಳಗದಿರುವುದೇ

ಪ್ರಿಯ ಸಖಿ,
ನನ್ನಿಂದೇನು ಸಾಧ್ಯ ? “ನಾನು ಅತ್ಯಂತ ನಿಕೃಷ್ಟ ಜೀವಿ” ‘ನನ್ನಿಂದ ಯಾರಿಗೂ ಏನೂ ಪ್ರಯೋಜನವಿಲ್ಲ’ ಎಂದು ಹಲುಬುವ ನಿರಾಶಾವಾದಿಗಳನ್ನು ನಮ್ಮ ಸುತ್ತಮುತ್ತ ಕಾಣುತ್ತಲೇ ಇರುತ್ತೇವೆ. ಇಂತಹವರನ್ನು ಕಂಡೇ ಇರಬೇಕು ಕವಿ ಎಸ್. ವಿ. ಪರಮೇಶ್ವರಭಟ್ಟರು ತಮ್ಮ ಕವನವೊಂದರಲ್ಲಿ ಹೀಗೆ ಹೇಳಿದ್ದಾರೆ.
ವಿಶ್ವವ್ಯಾಪಿ ತಮದ
ಮುಂದೆ ತನ್ನ ದೀಪವೆ?
ತನ್ನ ದಿಟ್ಪವೊಂದರಿಂದೆ
ಕತ್ತಲಳಿವದೇ?
ಎನುವ ಶಂಕೆ ಚುಕ್ಕಿಗೇಕೆ?
ಏಕೆ ಹೆದರಿಕೆ?
ಬೆಳಗಲೆಂದು ಹುಟ್ಟಿದಂದು
ಬೆಳಗದಿರುವುದೇ?
ಎಷ್ಟೊಂದು ಸ್ಫೂರ್ತಿದಾಯಕ ಕವನದ ಸಾಲುಗಳಲ್ಲವೇ ಸಖಿ? ದೊಡ್ಡ ಆಕಾಶದಲ್ಲಿ ಪುಟ್ಟ ತಾರೆಯೊಂದು ಇಷ್ಟೊಂದು ಕತ್ತಲಿನಲ್ಲಿ ತನ್ನ ಬೆಳಕು ಯಾವ ಮೂಲೆಗೆ? ತನ್ನ ದೀಪವೊಂದರಿಂದಲೇ ಕತ್ತಲು ಅಳಿಯುವುದೇ? ಎಂದು ಹೆದರುತ್ತದೆ. ಆದರೆ ಕತ್ತಲು ಎಷ್ಟೇ ಇರಲಿ ಬೆಳಗಲೆಂದೇ ಅದು ಹುಟ್ಟಿರುವದು.

ಹಾಗೇ ಮನುಷ್ಯನೂ ಕೂಡ ಪ್ರತಿಯೊಬ್ಬನಿಗೂ ಅವನವನದೇ ಆದ ವಿಶಿಷ್ಟತೆ, ಬೆಳಕು ಇದ್ದೇ ಇರುತ್ತದೆ. ಅದನ್ನವನು ಕಂಡುಕೊಂಡು ಬಾಳಬೇಕು. ಬೆಳಕು ನೀಡಬೇಕು. ಪ್ರತಿಯೊಬ್ಬ ಜೀವಿಯೂ ಇಲ್ಲಿ ಜನ್ಮ ತಳೆದು ಬಂದ ಮೇಲೆ ಅವನವನ ಕರ್ತವ್ಯವನ್ನು ಅವನು ನಿಭಾಯಿಸಲೇಬೇಕು. ಕಷ್ಟವೆಂದು ಸುಮ್ಮನೆ ಕೂರುವಂತಿಲ್ಲ. ‘ತನ್ನಿಂದ ಏನೂ ಸಾಧ್ಯವಿಲ್ಲ’ ಎಂಬ ನಿರಭಿಮಾನವೂ ಬೇಡ. ಹಾಗೇ ‘ತನ್ನಿಂದಲೇ ಪ್ರಪಂಚವೆಲ್ಲಾ ಎಂಬ ದುರಭಿಮಾನವೂ ಬೇಡ. ತನ್ನಿಂದ ಏನಾದರೂ ಸಾಧಿಸಲು ಸಾಧ್ಯ ಎಂದು ವ್ಯಕ್ತಿ ಮನಸ್ಸು ಮಾಡಿದನೆಂದರೆ ಅರ್ಧ ಕೆಲಸ ಆದಂತೆಯೇ ಎನ್ನುತ್ತಾರೆ ಹಿರಿಯರು. ಅದಕ್ಕೆಂದೇ
ಕವಿ ಶೇಕ್ಸ್‍ಪಿಯರ್ ಹೀಗೆ ಹೇಳುತ್ತಾನೆ. ‘Where there is will there is a way’ ಎಲ್ಲಿ ಗುರಿ ಇದೆಯೋ ಅಲ್ಲಿ ದಾರಿಯೂ ಇದ್ದೇ ಇದೆ ಎಂದು.

ಪ್ರಿಯ ಸಖಿ, ಸೂರ್ಯನಂತೆ ಜಗವನ್ನೇ ಬೆಳಗಬಲ್ಲೆನೆಂಬ ಹುಂಬತನವಿಲ್ಲದಿದ್ದರೂ ಚುಕ್ಕಿಯಾಗಿಯೇ ಬೆಳಗಿ ನನ್ನ ಸುತ್ತಮುತ್ತಲಾದರೂ ಸರಿ ಬೆಳಕು ನೀಡುವೆನೆಂಬ ಆತ್ಮವಿಶ್ವಾಸ, ಆಶಾವಾದ, ನಂಬಿಕೆ ನಮ್ಮದಾದರೆ ಅಷ್ಟೇ ಸಾಕು. ದಾರಿ ಹೇಗೋ ತಾನೇ ತೆರೆದುಕೊಳ್ಳುತ್ತಾ ಸಾಗುತ್ತದೆ ! ನೀನೇನೆನ್ನುತ್ತೀ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಜ್ಜಿ ನಂಗೆ ಇಷ್ಟ
Next post ಸೌಂದರ್ಯಕ್ಕೆ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…