ಭಾವನದೀ ದಂಡೆಯ ಮೇಲೆ
ತೂಗಿತಿದೆ ಉಯ್ಯಾಲೆ
ಮಾತು ಸೋಲಿಸಿದೆ ತಾ…..
ಮೌನ ಮಾಲೆ…..

ಅನುದಿನ ಅನುಕ್ಷಣಕು
ಕನಸುಗಳ ವಿನ್ಯಾಸ…..
ಪರವಶವಾದ ಚಿತ್ತಕೆ ಇಲ್ಲಿ…..
ಇಲ್ಲಿ ಚೈತ್ರದಾಯಾಸ…..

ಎಷ್ಟು ಸೊಗಸಿನ ಲೋಕ
ಇಣುಕುತಿರೆ ನೋಟದಲಿ
ಅಂಕು-ಡೊಂಕಿನ ಭೀತಿಗೆ ಇಲ್ಲಿ
ಇಲ್ಲ ಯಾವ ನೆಲೆಯು

ಬರುವುದೆಲ್ಲವು ಬರಲಿ…..
ಒಳಿತು ಕೆಡಕೆನಿತಿರಲಿ…..
ಭಾವಗಂಗೆಯಲಿ ಮಿಂದೇಳುತಿರೆ
ಇಲ್ಲಿ ನಿತ್ಯ ಸತ್ಯಂಸೊಗಸು
*****

 

ಗಿರಿಜಾಪತಿ ಎಂ ಎನ್
Latest posts by ಗಿರಿಜಾಪತಿ ಎಂ ಎನ್ (see all)