ಗುಂಡನ ಮೇಲೆ ಅಂಗಡಿ ಯಜಮಾನ ರೇಗಿದರು. “ಸೇಲ್ಸ್‍ಮನ್ ಆಗಿರಲು ನೀನು ನಾಲಾಯಕ್. ನಿನ್ನಿಂದ ವ್ಯಾಪಾರವೆಲ್ಲಾ ತಲೆಕೆಳಗಾಗುತ್ತಿತ್ತು- ಆ ಮಹಿಳೆಯ ಜೊತೆ ಹಾಗೆನಾ ವರ್ತಿಸೋದು? ಅವಳು ಕೇಳಿದ ಡಿಸೈನ್, ಬಣ್ಣದ ಸೀರೆ ನಮ್ಮಲ್ಲಿದ್ದರೂ ಇಲ್ಲ ಎಂದು ಅವಳನ್ನು ವ್ಯಾಪಾರ ಮಾಡದಂತೆ ವಾಪಸ್ ಕಳುಹಿಸಿ ಬಿಟ್ಟೆಯಲ್ಲಾ, ನಿನಗೆ ತಲೆ ಇದೆಯೇನಯ್ಯಾ?” ರೇಗಿದ.
ಗುಂಡ ಯಜಮಾನನಿಗೆ ಕೈಮುಗಿಯುತ್ತಾ “ಕೋಪಮಾಡಿಕೊಳ್ಳಬೇಡಿ. ನಾನು ಮಾಡಿದ್ದು ನನ್ನ ಒಳ್ಳೆಯದಕ್ಕೆ. ಅವಳು ಕೇಳಿದ ಡಿಸೈನ್ ಹಾಗೂ ಬಣ್ಣವುಳ್ಳ ಸೀರೆ ಇತ್ತು. ನಿಮಗೆ ಲಾಭವೂ ಆಗುತ್ತಿತ್ತು. ಆದರೆ ನನ್ನ ಜೇಬುಮಾತ್ರ ಖಾಲಿಯಾಗಿ ಬಿಡುತ್ತಿತ್ತು.
“ಏನೋ ಹಾಗೆಂದರೆ?” ರೇಗಿದ ಯಜಮಾನ.
“ಅವಳು ನನ್ನ ಧರ್ಮಪತ್ನಿ!” ಎಂದ ಗುಂಡ.
***