ಕಾಗೆಮರಿ ಒಮ್ಮೆ ಅಮ್ಮನ ಕೇಳಿತು-

“ಪಾರಿವಾಳ, ನವಿಲು, ಗಿಣಿ ಮತ್ತೆ ಎಲ್ಲಾ ಪಕ್ಷಿಗಳಿಗೂ ಬಣ್ಣಗಳಿವೆ. ಏಕಮ್ಮ ನಾನು, ನೀನು ಕಪ್ಪು?”

ಅಮ್ಮ ಕಾಗೆ ಹೇಳಿತು-

“ಕಾಗೆ ಮರಿ! ನೋಡು ನಾವು ಬಾಳುವ ಬದುಕು ಮುಖ್ಯ. ನಾವು ಬದುಕಿಗೆ ಬಣ್ಣ ಕೊಡಬೇಕು, ಬಣ್ಣಕ್ಕೆ ಬದುಕಲ್ಲ” ಎಂದಿತು. ಕಾಗೆ ಮರಿಗೆ, ಅಮ್ಮನ ಮಾತಿನಿಂದ ಸಂತಸವಾಯಿತು.
*****