ಅವಳು ಮದುವೆಯಾದ ಹೊಸದರಲ್ಲಿ ಪತಿಯನ್ನು ಒಲಿಸಿಕೊಂಡು ಪ್ರೀತಿಯ ಹೆಂಡತಿಯಾದಳು. ಮಕ್ಕಳುಮರಿ ಹೊತ್ತು ಪ್ರೀತಿಯ ತಾಯಿಯಾದಳು. ಮಧ್ಯ ವಯಸ್ಸು ಧಾಟಲು ಶಕ್ತಿಗುಂದಿ ಮುಖದ ಕಳೆ ಹೋಗಿ ಬಡಕಲು ದೇಹವಾಗಿತ್ತು. ಗಂಡನಿಗೆ ಈಗ ಮುಖ್ಯವಾದದ್ದು ವ್ಯಾಪಾರ ವ್ಯವಹಾರ, ಮಕ್ಕಳಿಗೆ ಮುಖ್ಯವಾದದ್ದು ಓದುಬರಹ, ಸ್ನೇಹಿತರು. ಅತ್ತೆ ಮಾವಗೆ ಪ್ರಿಯವಾದದ್ದು ಪುರಾಣ ಪುಣ್ಯ ಕತೆ. ತನ್ನ ತನವನ್ನು ಮರೆತು ಬತ್ತದ ನದಿಯಂತೆ ನಿರಂತರ ಹರಿದು ಸಾಗರವಾಗುವ ಅಗಾಧ ಪ್ರೀತಿ ಅವಳ ಹೃದಯವನ್ನು ತುಂಬಿತ್ತು.
*****