ಆ ಮುದುಕ ಐವತ್ತು ವರ್‍ಷ ಸ್ಮಶಾನದಲ್ಲಿ ಹೆಣಗಳನ್ನು ಹೂಳಿಡುತ್ತಿದ್ದ. ತನ್ನ ಮಗ ಓದಿ ಆಫೀಸರ್ ಆಗಲಿ ಎಂದು ಕನಸು ಕಂಡ. ನಿರುದ್ಯೋಗಿ ಮಗನಿತ್ತ ಅರ್ಜಿಗಳಿಗೆ ಯಾರೂ ಕೆಲಸ ಕೊಡಲಿಲ್ಲ. ಮತ್ತೆ ಹೆಣಗಳೇ ಅವನಿಗೆ ಅಪಾಯಿಂಟ್ಮೆಂಟ್ ಆರ್ಡರ್ ಕಳಿಸಿದ್ದವು. ಮಗ ಮತ್ತೆ ಅದೇ ಕೆಲಸಕ್ಕೆ ಹಿಂತಿರುಗಿ ಬಂದಿದ್ದ.
*****

ಕನ್ನಡ ನಲ್ಬರಹ ತಾಣ

ಕೀಲಿಕರಣ: ಎಂ ಎನ್ ಎಸ್ ರಾವ್