ಪರಿಧಿ ವಿಸ್ತರಿಸಿದಂತೆಲ್ಲಾ
ಹಸಿವೆಗೆ ಇಷ್ಟವಿಲ್ಲದಿದ್ದರೂ
ಅದರ ಕರಾಳ ಮುಖಗಳು
ರೊಟ್ಟಿಗೆ ತನ್ನಂತೆ ತಾನೇ
ತೆರೆದುಕೊಳ್ಳುತ್ತಾ ಹೋಗುತ್ತದೆ.
ನಾಚಬೇಕಿದ್ದ ಹಸಿವು
ಆರ್ಭಟಿಸುತ್ತದೆ.
ದನಿ ಕಳೆದುಕೊಂಡ
ಅಸಹಾಯಕ ರೊಟ್ಟಿ
ಬಾಯಿ ಮುಚ್ಚುತ್ತದೆ.

*****