ಅಹಿಂದ ಕೊಹಿಂದ ವಿಹಿಂದ ಆಮೇಲೆ ಗೋ‌ಇಂದ

ಗೋಡ್ರು ಪ್ರೀತಿಗಿಂತ ದ್ವೇಷದ ವೆಯಿಟೇಜೇ ಜಾಸ್ತಿ. ತಮ್ಗೆ ಪ್ರೀತಿಯಾತೋ ಒಂದು ಕಾಲ್ದಾಗೆ ಆಪೋಸಿಟ್ ಆಗಿ ಯಲಕ್ಷನ್ಗೆ ನಿತ್ಕಂಡ ಸಿಂಧ್ಯನ್ನ ಸಡನ್ನಾಗಿ ಮಂತ್ರಿ ಮಾಡಿದರು.  ಎಲ್ಡೆಲ್ಡು ಖಾತೆ ಕೊಟ್ಟರು. ಮೂಲ್ಯಾಗಿದ್ದ ಪ್ರಕಾಸುನ್ನ ಕರ್ಕಂಬಂದು ಮಂತ್ರಿ ಮಾಡಿ, ಸಿದ್ದು ಗಾಂಚಲಿ ಮಾಡುತ್ಲು ಉಪಮುಖ್ಯಮಂತ್ರಿ ಪಟ್ಟಕ್ಕೇ ಕುಂಡ್ರಿಸಿದರು. ಡಿಡಿಟಿ ಜಯಕುಮಾರ ಸಿದ್ರಾಮು ದೋಸ್ತಿನೇ ಮುರಿದರು. ಸಿದ್ರಾಮುನ್ನ ಎಗ್ಗಿಲ್ಲದಂಗೆ ಉಕ್ಕಂಡು ಪ್ರವಾಸೋದ್ಯಮ ಮಾಡು ಅಂತ ಹುಕುಂ ಕೊಟ್ಟರು. ಸನ್ಯಾಸ ಸ್ವೀಕಾರ ಮಾಡಿದ್ದ ಸೀನಿವಾಸ್ ಪ್ರಸಾದು, ಗುಡ್ ಓಲ್ಡ್ ಮ್ಯಾನ್ ರಾಜಸೇಕರ ಮೂತ್ರಿನಾ ಪಕ್ಷಕ್ಕೆ ತರಾಕ್ಕೆ ಸ್ಕೆಚ್ ಹಾಕಿದರು. ಅವರು ಚೌಕಾಸಿ
ಶುರು ಹಚ್ಕಂಡ್ರು. ಡೀಲು ಕುದುರೋದು ಲೇಟಾತು ಅಂತ ಗುಮಾನಿ ಹೊಡಿತ್ಲು ಹುಬ್ಳಿ ಕಡೆ ಹುಬ್ಬೇಗರ್ಸಿದ್ರು ನೋಡ್ರಿ; ಸಂಕೇಸ್ವರನ್ನ ಕನ್ನಡಪಾಲ್ಟಿ ಮುರ್ಕಂಡು ಗ್ಯಾರೇಜ್ನಾಗೆ ಬಿತ್ತು. ರಿಪೇರಿ ಮಾಡಿ ಪಕ್ಷಕ್ಕೆ ಎಳಕಂಡ್ರೆ ಪಸಂದಾಗಿ ಮೈಲೇಜ್ ಕೊಟ್ಟೀತು ಅಂತ ಥಿಂಕ್ ಮಾಡಿದ್ದೇ ತಡವಿಲ್ದಂಗೆ ಕುಮಾರ ಕಂಠೀರವನ್ನ ಹುಬ್ಳಿಗೆ ಗದುಮಿದರು. ಸಣ್ದದಾಗೆ ಸಮಾವೇಸ ಮಡಗಿ ಸಂಕೇಸ್ವರನ್ನ ಪಾಲ್ಟಿಗೆ ಎಳ್ಕಂಡೇ ಬಿಟ್ಟರು.

ಬಿಜೆಪಿ ಪರ ಮೂರುಸಲ ಗೆದ್ದರೂ ಮೂರು ಕಾಸಿನ ವಾಲ್ಯೂನೂ ಇಲ್ದೆ ಉದಾಸ್ ಆಗಿದ್ದ ಸಂಕೇಸ್ವರ ಕನ್ನಡನಾಡು ಪಾಲ್ಪಿ ಕಟ್ಟಿ ೨೨೪ ಕಡೆಯಾಗೆ ತನ್ನ ಮಂದಿನಾ ಇಲ್ಸಿ ಆದ್ರಾಗೆ ಒಬ್ನೇ ಒಬ್ಬ ಗೆದ್ದಾಗ ಡಿಪ್ರೆಸ್ ಆಗಿ ಡಿಮ್ ಹೊಡ್ದು ಮುರುಕ್ಲ ಚಾಪಿ ಹೋದ ಲಾರಿ ಹಂಗಾಗಿದ್ದ ಅಪಜಯ ಸಂಕೇಸಿಗೆ ಛಾತಿ ಕೊಟ್ಟು, ಪಕ್ಷಕ್ಕೆ ಹಾಕ್ಕಂಡು ರನ್ನಿಂಗ್ ನಾಗಿಟ್ಟ ಗೋಡ್ರ ತಲಿನೇ ತಲಿ! ಸಂಕೇಸಿಗೆ ಉತ್ತರ ಕರ್ನಾಟಕದಾಗ್ಳ ಲಿಂಗವಂತರು ಇಜ್ಜತ್ತು ಕೊಡ್ತಾರೆ ಅಂದಮ್ಯಾಗೆ ಅಲ್ಲಿನ ಶಿವಶರಣ ಶರಣೆರ ಓಟ್ನೆಲ್ಲಾ ಗುಡಿಸಿಗುಡ್ಡೆ ಹಾಕ್ಕಂಬೋದು ಅಂಬೋದು ಗೋಡ್ರ ಮ್ಯಾಥ್‌ಮ್ಯಾಟ್ರಿಕ್ಸು.

ಇದನ್ನು ನೀವು ಓದಾದ್ರಾಗೆ ಹಿರೇ ಮನುಷ್ಯ ರಾಜಸೇಕರಮೂತ್ರಿಯೂ ಗೋಡ್ರ ಪಾದರವಿಂದ ಸೇರೋದ್ರಾಗೆ ಡವಟೇನಿಲ್ ಬಿಡ್ರಿ. ಆಗ್ಲೆ ಬಿಜೆಪಿಗೆ ಡೈವೋರ್ಸ್ ಕೊಟ್ಟಾತು.

ಗೋಡ್ರ ಪ್ರೀತಿದಾರಿ ಹಿಂಗಾದ್ರೆ ದ್ವೇಸದ ಮಾರಿನೇ ಬ್ಯಾರೆ. ಈ ಜನ್ಮದಾಗೆ ಅಜನ್ಮ ವೈರಿಗಳಾಗೋದ ಸಿದ್ರಾಮು ಅಂಡ್ ಇಬ್ರಾಹಿಮ್ಮರ್ನ ಕಡಿಗೂ ಪಕ್ಷದಿಂದ ಜಾಡಿಸಿ ಒದ್ದೇಬಿಟ್ಟರು. ರಾಷ್ಟ್ರೀಯ ಕಾರ್ಯಕಾರಿಣಿ ಸಮ್ಮತಿ ಬೇಕಿತ್ತು. ಡೆಲ್ಲಿಗೋಡಿದರು, ಕಲ್ಪಾತೆ, ದಂಡವತೆ, ಸುರೇಂದ್ರ ಮೋಹನಂದು ಮುದ್ರೆನೂ ಒತ್ತಿಸ್ಕೊಂಡ್ರು. ಅದ್ರೂ ದ್ವೇಸದ ರೇಂಜ್ ಇಳಿವಲ್ದು. ಅಕಸ್ಮಾತ್ ಇವರಿಬ್ರೂ ಸ್ಟ್ರೇಟ್ ಆಗಿ ಸೋನಿಯಾ ಮೇಡಂ ಕಾಲಿಗೆ ಡೈ ಹೊಡ್ದು ಕಾಂಗ್ರೆಸ್ ಜಂಪ್ ಹೊಡೆದ್ರೆ ಜಂತಾದಳ ಮತ್ತೋಟು ಈಕ್ ಹಾಕ್ಯತೆ ಅಂಬೋದ್ನೂ ಧಿಂಕ್ ಮಾಡಿ, ಅದ್ಕೆ ಇಬ್ಬರನ್ನೂ ಅತಂತ್ರ ಸ್ಥಿತಿನಾಗಿಟ್ಟ ಗೋಡ್ರ ಮುತ್ಸದ್ದಿತನ ಕಂಡು ಗೋಡ್ರ ಸನ್ಸ್‌ಗಳೂ ದಂಗಾಗೋದ್ರು. ಈಟಾದ್ರೂ ಸಿದ್ರಾಮು ಮೀಟ್ ಮಾಡವಲ್ಲ. ಪುರುಸೊತ್ತಿಲ್ದಂಗೆ ಅಹಿಂದ ನಾಟ್ಕದ ಟೆಂಟ್ನ ಊರಿಂದೂರಿಗೆ ಚೇಂಜ್ ಮಾಡ್ತಾ ನಾಲ್ಗೆ ಮಸೀತಾ ವಾಚಾಮಗೋಚರವಾಗಿ ಗೋಡ್ರಿಗೆ ಪುಷ್ಪಾರ್ಚನೆ ಮಾಡೋದಾಟೆ ಸಿದ್ರಾಮನ ಡೈಲಿ ಡ್ಯೂಟಿ ಆಗೇತೀಗ. ಗೋಡ್ರು ಯಾವಾಗ್ಲೂ ಒಂದು ಸ್ಟೋನ್ಗೆ ಎಲ್ಡು ಬರ್ಡ್ ಹೊಡೆಯೋ ಶಾರ್ಪ ಶೂಟರ್ ಟೈಪು, ಕಾಂಗ್ರೆಸ್ನ ಕಕ್ವಗಳು ಅಹಿಂದ ಸಮಾವೇಸ್ದಾಗೆ ಹಿಂದು ಮುಂದು ನೋಡ್ಡಂಗೆ ಮಿಂಗಲ್ ಆಗೋದು ತಮ್ಮ ಮಕ್ಕೆ ಹೆಂಗಂದ್ರ೦ಗೆ ಉಗಿಯೋ ಡೆಲ್ಲಿ ರಾಣಿ ತಾವೆ ವರದಿ ಮಾಡಿ ಅವನ ಪಕ್ಷದಿಂದ ಅಮಾನತ್ತಿನಾಗೆ ಇಕ್ಕಿಸಬೇಕೆಂಬ ರೋಸಾವೇಸದಿಂದ ಆಕಿ ಮನೀಗೆ ಹೊಂಟರು. ಒಳಗೇ ಲಾಂಗ್ವೇಜ್ ಪ್ರಾಬ್ಲಂ ಅವ್ರಯ್ಯ ಅಂಬೋ ಗಾಬ್ರಿ ಬ್ಯಾರೆ. ಆದ್ರೂ ಛಲಬಿಡದ ತ್ರಿವಿಕ್ರಮನಂಗೆ ಹೋಗಿ ಕುಂತೇ ಬಿಟ್ಟರು. ಮೊದ್ಲು ವಸಿ ಕಣ್ಣೀರು ಹಾಕಿ ಪಂಚೆ ಚುಂಗಿನಿಂದ ಕಣ್ಣೊರೆಸ್ಕೋತಾ ಆಯಮ್ಮನ್ನ ಅಟ್ರಾಕ್ಟ್ ಮಾಡಿದರು. ಅಹಿಂದ ಅಂಬೋ ಪರಸೆನಾ ಎಲ್ಲಂದರಲ್ಲಿ ಮಾಡ್ತಾ ತಮ್ಮ ಗೊಂಬಿ ಬಾಯಿಗೆ ಬಂದಂಗೆ ಬೈಯೋದನ್ನ ತಾವು ಕಲಿತ ಇಂಗ್ಲೀಸ್ ಹಿಂದಿ ಎಲ್ಡು ಭಾಸೇನೊ ಮಿಕ್ಸ್ ಮಾಡಿ ಅಲವತ್ತುಕೊಂಡ್ರು. ಮೇಡಮ್ದೂ ಸೇಮ್ ಪ್ರಾಬ್ಲಮ್ಮು. ಸೆಕೆಟ್ರಿ ಅಹ್ಮದ್ ಪಟೇಲನ ಕಡೆ ವಾರೆನೋಟ ಬೀರಿ, ಗೋಡ್ರ ಅಹವಾಲ್ನಾಗೆ ಜೊಳ್ಳು ಏಟು ಗಟ್ಟಿ ಏಟು ಅಂತ ಮೌನ್ದಾಗೆ ಮಾತಾಡಿದರು. ಅಹ್ಮದ್ ಪಟೇಲ್ನೂ ಐನಾತಿ ಕುಳವೇ ಗೋಡ್ರಿಗೇ ಡೈನಾಮೆಂಟ್ ಇಡಬೇಕೆ!

“ಪೆಹಲೆ ಜಾತ್ರೆ, ಪರಸೆ ಅಂತ ಸುರು ಹಚ್ಕುಂಡಿದ್ದು ತಾವೇ ಗೋಡ್ರೆ. ಅದೇನೋ ದರಿದ್ರದ್ದು ನಾರಾಯಣ ಮಾಡಿದ್ರಿ. ಆಮೇಲೆ ನಿಮ್ಮ ಸಿಸ್ಯರು ಬ್ಯಾರೆ ಬ್ಯಾರೆ ಹೆಸರ್ನಾಗೆ ಅದ್ನೆ ಕಂಟಿನ್ಯೂ ಮಾಡವ್ರೆ ಆಮ್ ಐ ಕರೆಕ್ಟ್?” ಗೋಡ್ರೆಗೇ ಫಿಟಿಂಗ್ ಇಟ್ಟ ಸೋನಿಯಾಗೆ ತಳಬುಡ ಅರ್ಥವಾಗ್ದು.

“ಏ! ದರಿದ್ರ ಕ್ಯಾಹೈರೆ?” ಪಿಳಿಪಿಳಿಸಿದರು.
“ಗರೀಬು ಕಾ ದುಸ್ರಾ ನಾಮ್” ಪಟೇಲ ಅಂದ.
ಡೆಲ್ಲಿ ರಾಣಿ ಚಿಂತೆಗೆ ಬಿದ್ದು ಒದ್ದಾಡಿತು.
“ಅರೆ, ನಮ್ದು ಅತ್ತೆ ಹೇಳಿತ್ತು ಗರೀಬೋಂ ಕೊ ಹಟಾವ್ ಅಂತ ವಹಿ ಹೈನಾ?”
“ಗರೀಬೋಂಕೊ ನಹಿ ಮೇಡಂ ಗರೀಬಿ ಕೋ ಹಟಾವ್” ತಿದ್ದಿದ ಪಟೇಲ ತಿಣುಕಾಡಿದ.
“ಓಕೆ….. ಏ ನಾರಾಹೆಣ ಕ್ಯಾ ಹೈ?”
“ಹಮಾರಾ ಹಿಂದುವೋಂಕಾ ಭಗವಾನ್”
ಗೋಡ್ರು ಬೋಳು ತಲೆ ಸವರಿಕೊಂಡರು.
“ಅಚ್ಚಿ ಬಾತ್ ಹೈ. ನಮ್ಮ ಪಕ್ಷದ್ದು ಸತ್ಯನಾರಾಹೆಣ ಯಾಲಿ ವೋ ಕ್ಯಾ ಹೈರೇ!”
“ನಾರಾಯಣ್ನಾ ಬಾಪ್ ಹೈ ವೋ ಮೇಡಂ.”
“ಅದು ಬಿಡಿ ಮೇಡಂ. ನಿಮ್ಮೋರು ಅಹಿಂದ ಸಭೆಗೆ ಹೋಗಿ ನನ್ನ ಬೈಕೋತಾ ಅವ್ರೆ ಇದು ಸರಿನಾ?” ಗೋಡ್ರು ಕಣ್ಣೊರೆಸಿಕೊಂಡರು ಸೆಂಟಿಮೆಂಟ್ ಪ್ಲೇ ಮಾಡಿದರು.
“ಏ ಅಹಿಂದ ಕ್ಯಾ ಹೈರೆ ಅಹ್ಮದ್?” ಪಟೇಲ್ಗೂ ಎಕ್ಸ್‌ಪ್ಲೇನ್ ಮಾಡಲು ತಕಲೀಫಾತು.
“ಇಟ್ ಈಸ್ ಎ ಮಿಕ್ಸ್‌ಚರ್ ಯಾಲಿ ಆಫ್ ಮುಸ್ಸಿಮ್ಸ್ ಬ್ಯಾಕ್ವರ್ಡ್ಸ್ ಅಂಡ್ ಹರಿಜನ್ಸ್”
“ಏ ಹರಿಜನಾ ಕ್ಯಾ ಹೈ?”
“ಅಂಬೇಡ್ಕರ್ ಕಾ ಜನರೇಶನ್ನು ಮೇಡಂ”
“ಟೀಕ್ ಹೈ. ಐಸಾ ತೋ ಇಟ್ ಈಸ್ ಎ ವೆರಿಗುಡ್ ಪ್ರೋಗ್ರಾಂ”
ಗೋಡ್ರು ಒಳಗೇ ತಿಕ ಉರಿಸಿಕೊಂಡರು.
“ಏ ಟೀಕ್ ನಹಿಂ ಹೈ” ಪೃಥ್ವಿರಾಜ್ ಕಪೂರ್ ತರಾ ಒದರಿದರು.
“ಮೇಡಂ, ಪ್ರೋಗ್ರಾಂ ಮಾಡ್ತಾ ಇರೋ ಸಿದ್ರಾಮು, ಗೋಡಾ ಕಾ ದುಶ್ಮನ್. ಸಮಾವೇಶಕ್ಕೆ ಕಾಂಗ್ರೆಸ್ ಲೋಗ್ ಭಿ ಬೋತ್ ಶಾಮಿಲಾಗವ್ರೆ – ಇಸ್‌ಲಿಯೆ ಗೋಡ್ರಿಗೆ ಬೋತ್ ಗುಸ್ಸಾ
ಆಗಯ ಹೈ” ಪಟೇಲ ಅರ್ಥೈಸಿದ.
“ಅಚ್ಚಿಬಾತ್ ಹೈ” ಸೋನಿಯು ನಕ್ಕರು.
“ನೋ ಬುರಿಬಾತ್ ಹೈ” ಗೋಡ್ರು ಗುಡುಗಿದರು.
“ಹಮ್ಕೋ ಬೋತ್ ಗಾಲಿಯಾಂ ದೇತಾ ಹೈ ಇಸ್ಮೆ. ನಿಮ್ಮವರಿಗೆ ಯಾಲಿನಾಗೆ ಎಂಟ್ರಿ ಕೊಡಬ್ಯಾಡಿ ಅಂತ ಆರ್ಡರ್ ಪಾಸ್ ಮಾಡಿ. ಎಂಟ್ರಿ ಕೊಡ್ತೀರೋ ಡಿಕಶಿ ತೇಜಶ್ರೀ ರೇವಣ್ಣ
ಇಸ್ವನಾತನ್ನ ಇಮಿಡಿಯೇಟ್ ಆಗಿ ಸಸ್ಪೆಂಡ್ ಮಾಡಿ” ಸ್ವಾಟೆ ವಾರೆ ಮಾಡಿ ಬಿಗುವಾದರು ಗೋಡ್ರು.
“ಏ ತೋ ಸೋಚ್ನೆ ಕಿ ಬಾತ್ ಹೈ” ಗೊಣಗಿದರು ಮೇಡಂ.
“ದೋಸ್ತಿ ಸರ್ಕಾರ್ ಖತಂ ಕರ್ನೆ ಕೆ ಲಿಯೆ ಹಂಭೀ ಯೋಚ್ನೆ ಮಾಡಬೇಕಾಯ್ತದೆ’
“ಬಿ ಕೂಲ್ ಗೋಡಾಜೀ. ಏ ಬಿಜೆಪಿ ಲೋಗ್ ಕಾ ಕೊಹಿಂದ ಕ್ಯಾ ಹೈ ಗೋಡಾಜೀ”
“ಯು ಸೀ, ಕೊಹಿಂದ ಮೆ, ನೊ ಮುಸ್ಸಿಂ ಓನ್ಲಿ ಸ್ಲಂ ಜನಕ್ಕೆ ಫಸ್ಟ್ ಪ್ರಿಫರೆನ್ಸ್ ಮೇಡಂ”
“ಐಸೀ. ಏ ವಿಹಿಂದ ಕ್ಯಾ ಹೈ ಗೋಡಾಜೀ?”
“ಐ ಮೀನ್ ವಿಪರೀತ ಹಿಂದುಳಿದೋರು ಅಗ್ದಿ ಪೂರ್ ಫೆಲೋಸ್ ಅಂತ ಮೇಡಂ” ಗೋಷ್ಟು ಹನಿಗಣ್ಣಾದರು.
“ಸಮಝಗಯಾ ನಾವು ಮೀಟಿಂಗ್ ಮಾಡಿ ಆಗೆ ಕರ್ನಾ ಕ್ಯಾ ಹೈ ಅಂತ ಯೋಚ್ನೆ ಮಾಡ್ತೀವಿ.  ಅಬ್ ಅನದರ್ ಮೀಟಿಂಗ್ ಹೈ ಗೋಡಜಿ…  ವಿಷ್ ಯು ಹ್ಯಾಪಿ ಜರ್ನಿ” ಎಂದು ಹೇಳಿ ಎದ್ದೇಬಿಟ್ಟರು ಮೇಡಂ.

“ಅರೆ! ತಾವು ಅಹಿಂದ ಸಮಾವೇಶದ ಬಗ್ಗೆ ಎಂತದು ಹೇಳ್ಳೇ ಇಲ್ವಲ್ಲ ಮೇಡಂ” ಗೋಡ್ರು ತಪತಹಿಸಿದರು.

“ಅಹಿಂದ ಕೊಹಿಂದ ವಿಹಿಂದ ಅಟ್ ದಿ ಲಾಸ್ಫ ಗೋ‌ಇಂದ… ಸೀಯು” ಕುಲುಕುಲು ನಗುತ್ತಾ ಸೋನಿಯಾ ಹೊಂಟೇಹೋದರು. ಗೋಡ್ರು, ಅಹ್ಮದ್ ಪಟೇಲು ಮಾತ್ರ ಒಬ್ಬರ
ಮಾರಿ ಒಬ್ಬರು ನೋಡ್ಕಂತಾ ನಿಂತೇ ಇದ್ದರು.

ಇಮಾನ ಹತ್ಕಂಡು ರಾಜಧಾನಿಗೆ ಬಂದ ಗೋಡ್ರು ಅವಾಜ್ ಹಾಕಿದರು.  ಇನ್ನು ಮುಂದೆ ಸಮಾವೇಶ್ದಾಗೆ ಸಿದ್ರಾಮು ಪಕ್ಕ ಕಾಂಗ್ರೆಸ್‌ನೋವ್ರು ಕುಂತ್ರೆ ಮೇಡಂ ಕುಂಡೆ ಕುಯ್ತಾರೆ. ಅರ್ಥಾತ್ ಸಸ್ಪೆಂಡ್ ಮಾಡ್ತಾರೆ…. ಟೇಕ್ ಕೇರ್”

ಗೋಡ್ರ ಅವಾಜ್ಗೆ ಅವರೇ ಹೆದರಿಕ್ಕಂಡ್ರು. “ಡೋಂಟ್ ಕೇರ್” ಅಂದ ಕಾಂಗ್ರೆನ್ನೋರ ಆವಾಜ್ನ ಕೇಳಿದ್ರೂ ಕೇಳಿಸ್ಕಣದಂಗೆ ದೇವರಾದ್ರೂ ದ್ಯಾವೆಗೋಡ್ರು ಅಂದ್ರೆ ನಂಬ್ತೀರಾ?
ಮನಸಿನಾಗೇನು ಮಸಲತ್ತು ನಡೆಸೋರೋ ಮಾದೇಸನೇ ಬಲ್ಲ.
*****
(ದಿ. ೧೭-೧೧-೨೦೦೫)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಶಮಾಡಿ ಪಾಶಕ ಬಿದ್ದಿತೋ ಚಿಗರಿ
Next post ವಿಪರ್ಯಾಸ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys