ಮಾರ ವೀರ ತನ್ನ ಮನದಿ
ಧೈರ್ಯ ಮಾಡಿ
ಹರನ ತಪವ ಸೂರೆಗೊಂಬುದಕೆ
ತನ್ನ ಸೈನ್ಯವೆಲ್ಲ ಕೂಡಿಸಿ ||ಪ||
ಅಳಿಯು ಗಿಳಿಯು ಕೋಗಿಲೆಗಳ
ಬಳಗವೆಲ್ಲಾ ಮುಂದೆ
ಹೈಮಾಚಲಕೆ ತೆರಳ ಹೇಳಿ
ಪುಷ್ಪದಲರು ಬಿಲ್ಲಿಗೇರಿಸಿ ||೧||
ಅಂಗಜನು ಪೋಗಿ ಮಾತಂಗ
ಪರ್ವತವನು ಏರಿ
ತುಂಗವಿಕ್ರಮನಾ ಶರವ
ಲಂಗಿಸಿಟ್ಟನಾಕ್ಷಣ ||೨||
ರಸದಾಳಿಯ ಚಾಪಕ್ಗಿನ್ನು
ಕುಸುಮ ಬಾಣವನ್ನು ಹೂಡಿ
ಎಸೆಯುವಾಗ ಮುನಿ ಸಮೂಹ
ದೆಶೆಯಗೆಟ್ಟರೆಲ್ಲರೋ ||೩||
ಇಟ್ಟ ಕುಸುಮ ಬಾಣಕಿನ್ನು
ಭ್ರಷ್ಟವಾಯ್ತು ಶಿವನ ತಪವು
ನೆಟ್ಟನುರಿಗಣ್ಣು ತೆರೆಯೆ
ಸುಟ್ಟ ಮದನ ಕಾಮನು ||೪||
*****