ನಮ್ಮ ಚಂದ್ರಾಮ
ಬೆಳುದಿಂಗಳಲಿ ಮಿಂದಾಂವ
ತಂಪಿನ ಬೆಳಕನು ಚೆಲ್ಲಾಂವ

ನಾಚುವ ಮಲ್ಲಿಗೆ ಮೊಗ್ಗೆಗೆ ಊದಿ
ಮೆಲ್ಲಗೆ ಬಿಡಿಸಾಂವ
ನಮ್ಮ ಚಂದ್ರಾಮ

ಕಾಡಿಗೆ ಇಬ್ಬನಿ ಸುರಿಸಾಂವ
ನಾಡಿಗೆ ಮಂಜು ಕಳಿಸಾಂವ
ಬೀಸುವ ಗಾಳಿಯ ಮೋಡವನೇರಿ
ಸವಾರಿ ಹೊರಟಾಂವ
ನಮ್ಮ ಚಂದ್ರಾಮ

ಒಂದರೆ ತಿಂಗಳು ಕುಗ್ಗಾಂವ _
ಇನ್ನರೆ ತಿಂಗಳು ಹಿಗ್ಗಾಂವ
ತಾರೆಗಳೊಂದಿಗೆ ಕತ್ತಲು ಬೆಳಕಿನ
ಕಣ್ಣಮುಚ್ಚಾಲೆ ಆಡಾಂವ
ನಮ್ಮ ಚಂದ್ರಾಮ

ಕಿಟಕಿಯ ಬಳಿಯಲಿ ನಿತುಕೊಂಡಾಂವ
ಕಿಟಕಿಯ ಒಳಕೂ ಕಾಲಿಟ್ಟಾಂವ
ಬಳಲಿದ ಮಕ್ಕಳ ಕಣ್ಣಿಗೆ ಕನಸಿನ
ಮುಲಾಮ ಹಚ್ಚಾಂವ
ನಮ್ಮ ಚಂದ್ರಾಮ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)