ಗುರು ಕರುಣಿಸೊ ಹರ ಹರಿಸೊ
ಎನ್ನ ಭವಸಾಗರದಿ
ನಿನ್ನ ಹೊರೆತು ಇನ್ನೊಂದು ಬೇಡ
ವಿಷಯ ಸುಖ ಆದಿ
ಕಂಗಳು ತುಂಬಿವೆ ಮನನೆಂದಿದೆ
ನಿನ್ನ ನಾಮ ವಿಶೇಷದಿ
ಎನ್ನ ತನುವಿನ ಮೂಲೆ ಮೂಲೆಯಲಿ
ಬೆಳಗಿಸೊ ಪುಣ್ಯ ವಿಶೇಷದಿ
ಅಣು ಜೀವಿ ಕೋಟಿಯಲ್ಲವೂ
ನಿನ್ನ ಧ್ಯಾನಿಸುತ್ತಿರಲು
ಮೌನದಿ ಆಸೀನ ನಾದೇಕೆ!
ನಿನ್ನ ಭಜಿಸುತ್ತಿರಲು
ನಿನ್ನ ದಿವ್ಯ ಸಾನಿಧ್ಯ ಹೊರತು
ಇನ್ನೇನು ನಾ ಬೇಡಲಿ
ಎನ್ನ ಅಂತರಂಗ ಭಾವದಲಿ
ಮಾಣಿಕ್ಯ ವಿಠಲ ಕಾಡಲಿ
*****