ಬರೆದವರು: Thomas Hardy / Tess of the d’Urbervilles

ನಾಯಕನು ನಾಷ್ಕಾ ಮಾಡುತ್ತಿದ್ದ ಹಾಗೆಯೇ ಕಾರು ಬಂತು. ರಾಣಿಯು ಒಳಕ್ಕೆ ಸಡಗರದಿಂದ ಬಂದಳು. ಸುಮಾರು ನಲವತ್ತು ಆಗಿರಬಹುದು ಆಕೆಗೆ ವಯಸ್ಸು. ದೇಹದಲ್ಲಿ ಅವಲಕ್ಷಣದ ಬೊಜ್ಜಿಲ್ಲ: ಆದರೆ ಅಂಗಾಂಗಗಳು ಇರಬೇಕಾದ್ದಕ್ಕಿಂತಲೂ ಒಂದು: ಸುತ್ತು ಹೆಚ್ಚಾಗಿ ಸೊಂಪಾಗಿ ಬೆಳೆದ ಲತೆಯಂತೆ ದುಂಡು ದುಂಡಾಗಿ, ಮುದ್ದಾಗಿ. ಮುಖದಲ್ಲಿ ತಾನು ಒಡತಿಯೆಂಬ ದರ್ಪನು ತಾನೇ ತಾನಾಗಿದೆ. ಈಗ ನಾಯಕರು ಇಲ್ಲದಾಗ ಅರಮನೆಯ ವ್ಯವಹಾರನನ್ನೆಲ್ಲ ತಾನೇ ನೋಡುತ್ತಾಳೆ. ನಾಯಕನಷ್ಟೇ ವಿಚಕ್ಷಣೆಯಿಂದ ಎಲ್ಲವನ್ನೂ ನಿರ್ವಹಿಸುತ್ತಾಳೆ. ಒಮ್ಮೆ ಮಾದೇಗೌಡನು “ಹೆಂಗಸರು ಅಪ್ಪಣೆ ಮಾಡೋದು : ನಾವು ಮೀಸೆ ಹೊತ್ತ ಗಂಡಸರು ಕೇಳೋದು? ಎಂದು ಏನೋ ಜೋರುಮಾಡಿದ್ದನು. ಕೂಡಲೇ ಅರಮನೆಯಿಂದ ಬುಲಾವ್ ಬಂತು. ರಾಣಿಯು ತೆರೆಯೊಳಗೆ ನಿಂತು, ಮನೆವಾರ್ತೆ ನಂಜಪ್ಪನನ್ನು ಸಾಕ್ಷೀ ಕರಿಸಿಕೊಂಡು ಗದರಿದಳು: “ಅಪ್ಪಣೆ ಬರೋದು ಅರಮನೆಯಿಂದ. ಅಪ್ಪಣೆಮಾಡೋರು ಅಂಗರೇಕು ತೊಟ್ಟಿದ್ದರೇನು? ಸೀರೆ ಉಟ್ಟಿದ್ದರೇನು? ಇಷ್ಟ ಇದ್ದರೆ ಅಪ್ಪಣೆ ನಡೆಸಿಕೊಂಡು ಇರಬೇಕು: ಇಲ್ಲದಿದ್ದರೆ ಮೈಸೂರುಸೀಮೆ ದೊಡ್ಡದಾಗಿದೆ” ಎಂದು ಗುಡುಗಿದಳು. ಅರಮನಗೆ ಬರುವಾಗ “ಇವೊತ್ತು ಅಮ್ಮನೋರ ಗ್ರಹಚಾರ ಬಿಡಿಸಿ ತೀನಿ” ಎಂದು ಬಂದಿದ್ದವನು ಆ ಗುಡುಗಿಗೆ ಬೆದರಿ ಬಾಲ ಮುದುರಿ ಕೊಂಡು ಓಡುವ ನಾಯಿಮರಿಯಂತೆ ತಪ್ಪಿಸಿಕೊಂಡು ಓಡಿದ್ದನು.

ಮಾದೇಗೌಡನು ಮಜ್ಜಿಗೆ ಹಳ್ಳಿಯನ್ನ ಬಿಡಬೇಕು ಎಂದು ಗೊತ್ತುಮಾಡಿಕೊಂಡು ತನ್ನ ಆಸ್ತಿಯನ್ನೆಲ್ಲಾ ಮಾರಿ ಬೇರೆ ಊರಿಗೆ ಹೋಗಿ ಬಾಳಬೇಕೆಂದು ಮನಸ್ಸು ಮಾಡಿಕೊಂಡಿದ್ದನು. ಪ್ರಜಾ ಪ್ರತಿನಿಧಿ ಸಭೆಗೆ ಮೆಂಬರಾಗಬೇಕು. ಇವೊತ್ತು ದಿವಾನರು, ನಾಳೆ ಕೌನ್‌ಸಿಲ್ಲರು, ನಾಡಿದ್ದು ಡೆಪ್ಯುಟ ಕಮೀಷನ್ನರು, ಇನ್ನೊಂದು ದಿನ ರೆವಿನ್ಯೂ ಕಮಿ ಷನ್ನರು, ಹೀಗೆ ತಿರುಗಿಕೊಂಡು ಇರಬೇಕು. ಅದೇ ಗೌರವ ಎನ್ನುವ ಬುದ್ಧಿ ಅವನಿಗೆ ಬಂದಿತ್ತು. ಯಾರೂ ಅವನ ಆಸ್ತಿಯನ್ನು ಕೊಳ್ಳಲು ಮುಂದೆ ಬರಲಿಲ್ಲ. ಅದರಿಂದ ಅರಮನೆಗೇ ಮಾರಿಬಿಡಬೇಕೆಂದು ಹೇಳಿಕಳುಹಿಸಿದ್ದನು. ಆ ವಿಚಾರವನ್ನು ಗಂಡನಿಗೆ ತಿಳಿಸಿ ಇತ್ಯರ್ಥ ಮಾಡಿಕೊಂಡು ಹೋಗಲು ರಾಣಿಯು ತಾನೇ ಬಂದಿದ್ದಳು.

ನಾಯಕನು ನಾಷ್ಕಾ ಮಾಡಿ ಬಂದನು. ಸುದ್ದಿಯಿಲ್ಲದೆ ಬಂದಿರುವ ಹೆಂಡತಿಯನ್ನು ಕಂಡು “ಏನು ಎಲ್ಲಾ ಸರಿಯಾಗಿದೆತಾನೇ ?” ಎಂದು ಮೊದಲು ಗೃಹಕೃತ್ಯವನ್ನು ವಿಚಾರಿಸಿ ಎಲ್ಲವೂ ಭದ್ರವಾಗಿರುವುದನ್ನು ಅರಿತು, ಸಹಜವಾದ ಶೃಂಗಾರ ಚೇಷ್ಟೆಗಿಳಿದನು. “ಏನು ಬಿಟ್ಟರ ಲಾರದೆ ಬಂದುಬಿಟ್ಟರೇನೋ ಅಮ್ಮನವರು ?” ಎಂದು ಗಾಢಾಲಿಂಗನ ಮಾಡಿ ಚುಂಬಿಸಿದನು. ಇಬ್ಬರೂ ರತಿಮನ್ಮಥರಂತೆ, ತಮ್ಮ ಏಕಾಂತ ಗೃಹದತ್ತ ತೆರಳಿದರು.

ಅಷು ಹೊತ್ತು ಬಿಟ್ಟುಕೊಂಡು ಮಲ್ಲಿಯು ಬಂದು ಬಾಗಿಲಲ್ಲಿ ನಿಂತು ಕೆಕ್ಕರಿಸಿದಳು. ನಾಯಕನು ನಡಗೆಯ ಸದ್ದಿನಿಂದಲೇ ಅವ ಳೆಂಬುದನ್ನು ತಿಳಿದು, “ಇಷ್ಟವಿಲ್ಲದಿದ್ದವರು ಒಳಕ್ಕೆ ಬರಕೂಡದು ? ಎಂದನು. ರಾಣಿಯು, “ನೀನಾದರೂ ಬಂದು ಈ ಹುಲಿ ಕೈಯ್ಯಿಂದ ನನ್ನ ಬಿಡಿಸಿಕೋಬಾರದಾ ?” ಎಂದಳು.

ಮಲ್ಲಿಯು ನಗುನಗುತ್ತಾ “ಆ ಹುಲಿಬಾಯಿಗೆ ನನ್ನನ್ನು ದೂಡಿ ಬಿಟ್ಟಿರಲ್ಲಾ ನಾನು ಹೇಗೆ ನಿಮ್ಮನ್ನು ಬಿಡಿಸಿಕೊಳ್ಳಲಿ !” ಎಂದು ಒಳಗೆ ಬಂದಳು.

” ನೋಡವ್ವಾ, ಇವರ ರೀತಿ! ಇನ್ನೂ ನಾನು ಮನೆಒಳಕ್ಕೆ ಬರು ತ್ತಿರುವಾಗಲೇ ಇಷ್ಟು ಅವಸರವಾ? ನೀನಾದರೂ ಸಣ್ಣ ಹುಡುಗಿ. ನನಗೇನು ವಯಸ್ಸು ಕಮ್ಮಿಯಾಯಿತಾ ? ನನ್ನ ಹೀಗೆ ಇವರು ಗೋಳುಹುಯ್ದುಕೊಂಡರೆ ನಾನೇನು ಮಾಡಲಿ?” ಎಂದು ಏನೋ ನಿಜವಾಗಿ ದೂರು ಹೇಳಿಕೊಳ್ಳುವಳಂತೆ ರಾಣಿಯು ದೂರಿಕೊಂಡಳು.

“ನೋಡು, ಮಲ್ಲಿ ಇವಳು ಬೇಡ ಎನ್ನಲಿ, ಆಮೇಲೆ ನೋಡು, ಇವಳನ್ನು ಮುಟ್ಟಿದರೆ ನೀನಿಟ್ಟ ಆಣೆ. ಬೇಡ ಅನ್ನು ಮತ್ತೆ” ಅಂದನು.

ರಾಣಿಯು, “ಹೂಂ ಬೇಡ ಅನ್ನೋಕೆ ಏನೋ ಕೈಹಿಡಿದದ್ದು. ತಾಳೆ ಹೊವು ಆದರೂ ಗಂ ಅಂತದೆ. ಏನೋ ಒಂದು ಮುಳುಗೀರಿ ದಾಗ ಅಯ್ಯೋ ಅನ್ನಿಸಿದಂಗೆ, ಆಯ್ತದೆ. ನಿಜ, ಹಾಗಂತ ತಾಳೇ ಹೂವ್ವೇ ಬೇಡ ಅನ್ನಿ. ಈ ಮಾತು ಅಂದರೆ ನನಗೇನು ಅಂತದೆ ಗೊತ್ತಾ ? ತಾಳೇ ಹೂವು ಸಿಗಿದು ದೇವರಿಗೆ ಮುಡಿಸೋ ಹಾಗೆ ಈ ಹುಲಿ ಹಲ್ಲು ಉಗುರು ತೆಗೆದು ಆಟವಾಡಬೇಕು? ಎಂದು ಹಸಿಮುನಿಸಿ ನಿಂದ ನುಡಿದಳು.

ನಾಯಕನು ಅವಳನ್ನು ಬರಸೆಳೆದು ತಬ್ಬಿಕೊಂಡು ಇನ್ನೊಮ್ಮೆ ನೋಯುವಹಾಗೆ ತೋಳುಕಚ್ಚಿ “ಅಯ್ಯಯ್ಯೋ’ ಎನ್ನುತ್ತಿರಲು “ತಮಗೇನು ಅಂತದೆಯೋ ಚಿಕ್ಕಮ್ಮ ನವರಿಗೆ ೪” ಎಂದನು.

ಮಲ್ಲಿಯು ತುಂಟತನದ ನ ಧಿಯ ಸ ನಗುತ್ತಾ ಆ ಇಬ್ಬ ರ “ನಾಕದ ನಡುನೆ ತನ್ನ ಮೊಕವನ್ನಿಟ್ಟು “ಈ ಹುಲೀನ ದೂರದಿಂದ ಕಂಡಾಗ ಹೆದರಿಕೆಯೊಗ್ತದೆ. ನ ಬಂದಾಗ ಮೈಮರೀತದೆ. ನಾನೇನ ಹೇಳಲಿ ?” ಎಂದಳು.

ನಾಯಕನು ಅವಳನ್ನು ಅನಾಮತ್ತಾಗಿ ಮಂಚದ ಮೇಲಕ್ಕೆಳೆದು ಕೊಂಡು ನಿರ್ದಯವಾಗಿ ಹಿಸುಕಿ ಚುಂಬಿಸುತ್ತಾ, “ಈ ತುಂಟಬಡ್ಡಿ. ಇದಕೇ ನನ್ನ ತಲೇಮೇಲೆ ಹತ್ತಿಕೊಂಡಿರೋದು?” ಎಂದನು

ರಾಣಿಯು “ಪಾಪ, ನಂಜುಂಡೇಶ್ವರನಿಗೇ ತಪ್ಪಲಿಲ್ಲ. ಇನ್ನು ನಿಮಗೇನ ಹೇಳ್ಳೊ ?” ಎಂದು ಸೋಟೆ ತಿವಿದಳು.

ನಾಯಕನು ಹುಸಿಮುನಿಸಿಂದ “ಏನಂದೆ ?” ಎಂದು ಕಣ್ಣು ಬಿಟ್ಟನು.

ರಾಣಿಯು ಕೆನ್ನೆಗೆ ಕೆನ್ನೆ ಕೊಟ್ಟು, ಕುಂಕೀ ಆನೆಯು ಕಾಡಾನೆ ಯನ್ನು ಒತ್ತರಿಸುವಂತೆ ಒತ್ತರಿಸಿಕೊಂಡು “ಅದಾ! ನಂಜುಂಡೇಶ್ವರನ ಜೊತೇಲಿರೋ ಅಮ್ಮನೋರು ಮದುವೆಯಾದೋರು. ಅವರಿರೋದು ನೆಲದ ಮೇಲೆ, ನಂಜುಂಡೇಶ್ವರನ ಗುಡಿ ಮೂಲೇಲಿ. ಅವರೊಲಿದ ಚಾಮುಂಡಮ್ಮ ಇರೋದು ಬೆಟ್ಟದ ಮೇಲೆ” ಎಂದಳು.

“ನೋಡಿದೆಯಾ ಮಲ್ಲಿ ನಿನ್ನ ಸೂಳೆ ಮಾಡಿದಳು ನಮ್ಮ ರಾಣಿ.”

“ಬುದ್ದಿ, ನಮ್ಮವ್ವ ನನ್ನ ‘ಛೀ ನಿನ್ನ ಗಂಡನ ಸೂಳೆ ಅಂತಿದ್ದಳು.’ ನಮ್ಮವ್ವನ ಮಾತು ನಿಜವಾಯಿತು ಅಷ್ಟೇ ತಾನೇ?”

“ಛೀ ನೀವಿಬ್ಬರೂ ನಾಚಿಕೆ ಕೆಟ್ಟೊರು-ನಾನು ಇನ್ನು ಇರೋಲ್ಲ ಎದ್ದಾದರೂ ಹೋಗ್ತೀನಿ.”

“ಏನು ನಮ್ಮಿಬ್ಬರನ್ನೂ ಹೊತ್ತುಕೊಂಡು?”

“ಎಲ್ಲಿಗೆ ಹೋದರೂ ನೀವಿಬ್ಬರೂ ಇರುತೀರೋ ? ನಾನು ನರಕಕ್ಕೆ ಹೋದರೋ ?”

“ಅಲ್ಲಿ ಗಂಡ ಇದ್ದೆ ಮೇಲೆ ಅದು ನರಕ ಆಗೋದಾದರೂ ಹೆಂಗೆ ?”

“ಹೆಂಗಾದರೆ ಎಲ್ಲಿ ಹೋದರೂ ಬರುತೀರಿ ಅನ್ನಿ.”

” ತಪ್ಪದೆ ”

” ಹಂಗಾದರೆ ನಾನು ಇಲ್ಲೇ ಇದ್ದು ಬಿಡುತೀನಪ್ಪ.”

“ಅದೀಗ ಸರಿ.”

“ನೋಡು, ರಾಣಿ, ಈ ಕಲಕೇತಿ ಬಂದಳು : ನಾನು ಹೊಸದ, ಹುಡುಕೋದೇ ತಪ್ಪಿಹೋಯಿತು. ಎಂಥಾ ಕೆಟ್ಟ ಹೆಣ್ಣು ನೋಡು.”

” ಕಟ್ಟೇ ನೀರುಕಿತ್ತು ಕೊಂಡು ಓಡೀತು” ಅಂತಲೇ ಕಟ್ಟೆ ಗೊಂದು ಒತ್ತು ಕಟ್ಟೆ ಕಟ್ಟಿದೋರ ಮಾತೇ ಇಲ್ಲವೇನೋ ?”

” ಯಾಕೋ ನಾಫು ಇವೊತ್ತು. ಗೆಲ್ಲೋಹಂಗಿಲ್ಲ. ಬಿಡು. ಅದೇನು, ನೀನು ಇಷ್ಟು ತರಾತುರಿ ಬಂದುದು ?”

“ನಿಮ್ಮನ್ನ ನೋಡೋಕೆ?

“ಅದಾಯ್ತಲ್ಲ, ಮುಂದೆ ?”

ರಾಣಿಯು ಮಜ್ಜಿಗೆಹಳ್ಳಿಯಲ್ಲಿ ಮಾದೇಗೌಡನ ಹಾವಳಿ ಹೇಳಿ ಕೊನೆಗೆ ಅವನು ಆಸ್ತಿಮಾರಿ ಆ ಊರೇ ಬಿಟ್ಟು ಹೋಗುವುದಕ್ಕೆ ಸಿದ್ಧವಾಗಿರುವುದನ್ನು ಹೇಳಿದಳು. “ನೀವು ಹೂಂ ಅಂದರೆ ಆ ಆಸ್ತಿ ಮಾಡಿಕೊಳ್ಳೋದು.”

“ಶಾನುಭೋಗರು ಏನು ಹೇಳಿದರು ?”

“ಅವರೇ ಬಂದು ಹೇಳಿದೋರು. ಕಟ್ಟೆಯ ಕಲ್ಲು ಕಟ್ಟೆಗೆ ಬಂದಂತಾಯಿತು. ಬುದ್ದಿಯೋರು ಒಪ್ಪೋದೇ ಸರಿ. ಎಂದರು.”

” ಮಾಡಿಬಿಡಿ. ಆಮೇಲೆ ?”

“ಆಮೇಲೆ ಆ ಪಂಚಮರನ್ನು ಸ್ಕೂಲಿಗೆ ಸೇರಿಸಬೇಕು ಅಂತ ಮೇಲಿನಿಂದ ಅಪ್ಪಣೆ ಬಂದದೆಯಂತೆ. ಉತ್ತಮರೆಲ್ಲಾ ಇದೆಲ್ಲಾದರೂ ಉಂಟೆ ಅಂತಿದ್ದಾರೆ.”

“ಅದೆಲ್ಲ ನಡೆಯೋಲ್ಲ. ಸೋಸಲೇಲಿ ಮಠದೋರು ಸೋತು ಹೋದರು ಅಂದಮೇಲೆ ಮಿಕ್ಕವರೇನು ಮಾಡಿಯಾರು ?”

” ಪುರೋಹಿತರೂ ಜೋಯಿಸರೂ ಶಾನುಭೋಗರೂ ನಿಮ್ಮನ್ನು ನೋಡೋಕೆ ಬರುತಾರೆ.”

ಇಲ್ಲ ನಾನು ದಿವಾನರ ಹತ್ತಿರವೂ ಮಾತಾಡಿದೆ. ರೆಡ್ಡಿಯವರ ಮಾತು ಅವರಿಗೆ ಬಹಳ ಪಥ್ಯ. ನಿಮಗೆ ರೆಡ್ಡಿಯವರು ಗೊತ್ತಿಲ್ಲ ವೇನೋ? ರೆಡ್ಡಿಯವರು ನಮ್ಮ ನರಸಿಂಹಯ್ಯನ ಕಾಲೇಜ್ ಪ್ರಿನ್ಸಿಪಾಲ ರಾಗಿದ್ದರು. ಈಗ ವಿದ್ಯಾಭ್ಯಾಸದ ಇಲಾಖೆ ಮುಖಂಡರಾಗಿದ್ದಾರೆ. ಅವರು. ವಿದ್ಯಾವಂತರು. ಇಂಗ್ಲೆಂಡಿಗೆ ಹೋಗಿ ಬಂದವರು. ಅವರು ಹಿಂದಿನ ದಿನಾನರು ಹೇಳುತ್ತಿದ್ದಹಂಗೆ ದೇಶವೆಲ್ಲ ವಿದ್ಯಾವಂತರಾಗ ಬೇಕು ಅನ್ನೋರು. ಈ ದಿವಾನರು ರೆಡ್ಡಿಯವರ ಮಾತು ಒಪ್ಪಿದ್ದಾರೆ. ಮಹಾರಾಜರು ಆಗಬಹುದು ಎಂದಿದ್ದಾರೆ. ಅವರು ಒಪ್ಪಿದ ಮೇಲೆ ಅದು ಸರಿಯಾಗಿ ಇರಬೇಕು. ಅದರಿಂದ ಅದು ಆಗಲೇಬೇಕು. ಉತ್ತಮರು ಬೇಕು ಅಂದರೆ ಬೇರೆ ಒಂದು ಶಾಲೆ ಕಟ್ಟಿಕೊಳ್ಳಲಿ. ನಾವೂ ಬೇಕಾದರೆ ಒಂದೆರಡು ಸಾವಿರ ಕೊಡೋಣ. ಆಯಿತು, ಇಲ್ಲಿ ನಡೆದದ್ದು ಎಲ್ಲಾ ಗೊತ್ತೋ ?”

“ಹೇಳಿ.”

“ಒಂದು ಲಕ್ಷ ರೂಪಾಯಿ ಮಹಾರಾಜರಿಗೆ ಒಪ್ಪಿಸಿದ್ದಾಯಿತು, ಹಳ್ಳಿಯವರಿಗೆ ಸ್ಕಾಲರ್‌ಷಿಪ್ ಕೊಡಿ ಅಂತ. ನಿಮ್ಮಿಬ್ಬರ ಹೆಸರಲ್ಲಿ ಇರಲಿ ಅಂತ ನಾನಂದರೆ, ಈ ಪುಣ್ಯಾತ್ಮಗಿತ್ತಿ ‘ದೊಡ್ಡಮ್ಮನೋರ ನೆರಳು ನಾನು : ನನ್ನ ಹೆಸರೇ ಕೂಡದು’ ಅಂತಾಳೆ.”

“ಅವಳಿಗೆ ಹಣ ಕೊಟ್ಟು ಬಿಡಿ. ತನಗೆ ತೋರಿದ್ದು ಮಾಡಲಿ.”

” ಹಂಗೂ ಸೈ. ಲೇ ಕಳ್ಳ ಬಡ್ಡೀ ! ನಾಳೆ ಖಜಾನೆಗೆ ನಿನ್ನ ಹೆಸರಿಗೆ ಎರಡು ಲಕ್ಷ ಜಮಾ ಆಗ್ತದೆ, ಏನಾದರೂ ಮಾಡು.”

“ನಾನು ಈಗ ಏನೂ ಮಾಡುವುದಿಲ್ಲ.”

” ಏಕೆ? ”

” ಇನ್ನು ಹತ್ತುವರ್ಷ ನಾನು ಬದುಕಿದ್ದರೆ ಆಮೇಲೆ ದಾನ ಧರ್ಮ.”

” ಅದುವರೆಗೂ ?”

“ನಾನು ಯಾರದೋ ಪಾದ ಹಿಡಿದಿದ್ದೀನಿ ; ಅವರ ಪೂಜೆ ಯೊಂದೇ ನನ್ನ ಕೆಲಸ.?”

“ಅಮೇಲೆ ಏನುಮಾಡುತೀಯೆ ?”

“ಆಮೇಲೆ ಮನೆಬಾಗಿಲು ಬಿಟ್ಟು ಹೊರಟುಹೋಗುತ್ತೇನೆ.”

” ಯಾಕೆ ?”

“ನನಗೆ ಗೊತ್ತಿಲ್ಲ. ಯಾರೋ ಬಂದು “ಮಲ್ಲಿ ಬಂದುಬಿಡು” ಅಂದಹಾಗಾಗುತ್ತದೆ. ಆ ಮಾತು ಕಿವಿಗೆ ಬಿದ್ದಾಗ ನನಗೆ ಏನೇನು ಬೇಕು ಅಂತಿದ್ದೀನೋ ಅದರ ಮೇಲಿನ ಅಭಿಮಾನವೆಲ್ಲ ಕರಗಿ ಹೋಗುತ್ತದೆ. ಅದೊಂದೇ, ಆ ಬಾ ಬಾ ಅನ್ನುವ ಕರೆಯೊಂದೇ ನಿಲ್ಲುತ್ತದೆ. ನಾನು ಅದಕ್ಕೂ ಹೇಳಿದ್ದೀನಿ. ಬುದ್ಧಿಯವರಿಗೆ ಅರವತ್ತು ವರ್ಷದ ಶಾಂತಿಯಾಗುವವರೆಗೆ ಬರೋದಿಲ್ಲ ಅಂತ.?

ಅವಳು ಆ ಮಾತನಾಡಿದಾಗ ನಾಯಕನ ತೋಳತೆಕ್ಕೆಯಲ್ಲಿದ್ದಳು. ಇಬ್ಬರ ಮೈಗಳೂ ಒಂದಕ್ಕೊಂದು ಗೋಂದು ಹಾಕಿ ಹಚ್ಚಿದಂತೆ ಹೊಂದಿಕೊಂಡಿದ್ದುವು. ಅವಳ ಉಬ್ಬಿದ, ಕೊಬ್ಬಿದ ಸ್ತನಮುಂಡಲವು ನಾಯಕನ ಪಕ್ಕಯನ್ನು ತಿವಿಯುತ್ತಿತ್ತು. ಇತ್ತ ರಾಣಿಯು ನಾಯಕನ ಎದೆಯ ಮೇಲೆಮಲಗಿ ಕೆನ್ನೆಯ ಮೇಲೆ ಕೆನ್ನೆಯಿಟ್ಟು ಕೊಂಡು ಕೇಳುತ್ತಿದ್ದಳು. ಅಂತಹ ವಿಚಿತ್ರ ರಸಮಯ ಸಮಯದಲ್ಲೂ ಗಂಭೀರವಾಗಿ, ಆವೇಶವಿಲ್ಲದೆ, ಯಾವಾಗಲೋ ಕೇಳಿದ ಅ-ಶರೀರದ ವಾಕ್ಕುಗಳನ್ನು ಧ್ಯಾನಿಸುತ್ತ, ಸ್ತಿಮಿತನಾಗಿರುವ ತಾರೆಗಳು ನೋಡಿ ದವರ ಮನಸ್ಸಿನಲ್ಲಿಯೂ ಅವಳಲ್ಲಿದ್ದ ಅಲೌಕಿಕ ಭಾವಗಳನ್ನು ತುಂಬುತ್ತಿರಲು, ಅವರಿಬ್ಲರೂ ಗಾಬರಿಯಾದರು. ಮಲ್ಲಿಯೂ ಆಗಲೇ ಎಲ್ಲಿಯೋ ಹೊರಟೇ ಹೋದಹಾಗೆ ಕನಸುಕಾಣುತ್ತಿದ್ದರೆ ಹೇಗೋ ಹಾಗೆ ಆಯಿತು. ನಾಯಕನ ಮನಸ್ಸಿನಲ್ಲಿದ್ದ ಮೋಹವೆಲ್ಲ ಮಾಯ ವಾಗಿಹೋದಂತೆ ಆಯಿತು. ಅವನಿಗೆ ಪರ್ವತಾಗ್ರದ ಮೇಲಿನಿಂದ ಕೆಳಕ್ಕೆ ಎಸೆದಂತೆ ಆಯಿತು.

ರಾಣಿಯು ಬೆಂಕಿಯ ಮಗ್ಗಲಲ್ಲಿದ್ದಾಗ ಸೆಕೆಯನ್ನು ಅನುಭವಿಸು ವಂತೆ ನಾಯಕನ ಮನಸ್ಸಿನಲ್ಲಿ ಬಂದುದನ್ನೆಲ್ಲೂ ಅನುಭವಿಸಿದಳು. ರಾಣಿಯು ಸಾಮಾನ್ಯ ಸ್ತ್ರೀಯಲ್ಲ. ಉತ್ತಮವರ್ಗದ ನಾರೀಮಣಿ. ಸಾಹಿತ್ಯದಲ್ಲಿ ಅಂತಹ ನಾರೀಮಣಿಯನ್ನು ಎಲ್ಲೂ ಕಂಡಂತಿಲ್ಲ. ಹಿಂದೆ ಕಾಲಿದಾಸನ ಸ್ತ್ರೀ ಹೃದಯವಿಜ್ಞಾನವು ವಿಕ್ರಮೋರ್ವಶೀಯ ದಲ್ಲಿ ಜೌಶೀನರಿಯನ್ನು ಸೃಷ್ಟಿಸಿತು. . ಮಾಲವಿಕಾಗ್ನಿಮಿತ್ರದಲ್ಲಿ ರಜೋಗುಣದಲ್ಲಿ ನಿಂತು ಗಂಡನು ತನ್ನ ಆಸ್ತಿ: ಅದರ ಮೇಲೆ ಮತ್ತೊಬ್ಬರಿಗೆ ಹಕ್ಕಿಲ್ಲ ಎಂಬ ,ಚಂಡಿಯೂ, ಅವಳಿಗಿಂತ ಇನ್ನಷ್ಟು ಉತ್ತಮವಾಗಿ ಗಂಡನು ಮತ್ತೊಬ್ಬಳನ್ನು ಮದುವೆಯಾದರೆ ಹೋಗಲಿ ಏನು ಮಾಡುವುದು, ಎಂದೋ, ಅಥವಾ ತಾನು ಕೊಟ್ಟಿದ್ದ ವರವನ್ನು ಪಾಲಿಸಲೆಂದೋ, ಮಾಲವಿಕೆಯನ್ನು ರಾಜಮಹಿಷಿಯಾಗಿ ಒಪ್ಪಿಸಿ ಕೊಂಡ ಧಾರಿಣೀದೇವಿಯನ್ನು ಸೃಷ್ಟಿಸಿದ ಬುದ್ದಿ, ಶಾಕುಂತಲದಲ್ಲಿ ಬಹುವಲ್ಲಭನಾದ ರಾಜನನ್ನು ಒಪ್ಪಿದ ಶಕುಂತಲೆಯನ್ನು ಸೃಷ್ಟಿಸಿತು. ಅನನ್ಯಭಾಜನಾದ ಪತಿಯನ್ನು ಪಡೆದ ಪಾರ್ವತಿಯನ್ನೂ ಏಕಪತ್ನಿ ಯಾದ ಯಕ್ಷಿಣಿಯನ್ನು ಸೃಷ್ಟಿಸಿದರೂ ತೃಪ್ತಿಯಾಗದ ಪಕೃತಿಜ್ಞಾನವು ವಿಕ್ರಮೋರ್ವಶೀಯಲ್ಲಿ ಔಶೀನರಿಯನ್ನು ಸೃಷ್ಟಿಸಿತು. ಅಷ್ಟೇ ಅಲ್ಲ. ಅವಳ ಬಾಯಿಂದ ಹೇಳಿಸಿತು: ‘ ನನ್ನ ಗಂಡನು ಕಾಮಿಸಿದವಳೊಡ ನೆಯೂ, ನನ್ನ ಗಂಡನನ್ನು ಕಾಮಿಸಿದವಳೊಡನೆಯೂ ಸೋದರೀ ಭಾವದಿಂದ ವರ್ತಿಸುನೆನು’ ಎಂದು.

ನೀರು ಕದಡಿದಾಗ ಕೊಚ್ಚೆಯಾಗಿರುವಾಗ, ಅದನ್ನು ದೂರದಿಂದ ನೋಡಿದರೂ ಆ ಕೊಚ್ಚೆ ಮೈಗೆ ಹತ್ತಿದಂತಾಗುತ್ತದೆ. ಅದು ಕಾಲ ವಶದಿಂದ ತಿಳಿಯಾದರೆ, ಅದರಲ್ಲಿ ಆಕಾಶದ ಪ್ರತಿಬಿಂಬ ಕಾಣುತ್ತದೆ. ಆ ನೀರು ಆಳವಾಗಿ ಪ್ರಸನ್ನನಾಗಿದ್ದರೆ ಸೇವನೆಗೆ ಯೋಗ್ಯವಾಗುತ್ತದೆ. ಅದು ತಾನೇ ತಾನಾಗಿ ಅದರ ಶೈತ್ಯವು ಸುತ್ತಲೂ ಪ್ರಸರಿಸಿದರೆ, ಆ ನೀರು ಕಲ್ಲಾಗುತ್ತದೆ. ಅದರಲ್ಲಿಯೂ ಉತ್ತಮವಾಗಿ ದಿವ್ಯಭಾವವನ್ನು ಪಡೆದರೆ, ಅವರಲ್ಲಿ ಮಣಿಯಾಗುತ್ತದೆ. ನಾವು ನೀರು ಕಲ್ಲಾಗುವ ವರೆಗೂ ಬಲ್ಲೆವು. ಅಲ್ಲಿಂದಾಚೆಗೆ ಅದು ಮಣಿಯಾಗುವುದು ಎಂದು ಇತರರು ಹೇಳಿದರೂ ತಿಳಿಯಲಾರೆವು.

ಮನಸ್ಸಿನಿಂದ ಮಾನವನ ಯೋಗ್ಯತೆ. ಮನಸ್ಸು, ಚಿತ್ತ ಬುದ್ಧಿ ಗಳ ಅಧೀನ. ಬುದ್ಧಿಯಲ್ಲಿ ಸತ್ತ್ವ, ರಜಸ್ಸು, ತಮಸ್ಸುಗಳೆಂಬ ಪ್ರಕೃ ತಿಯು ನೇಯುವ ಚೌಕಟ್ಟು ಕವರು ಭೋಗದಲ್ಲಿ ಬಹಳಾ ಯಿದ್ದು ದೇಹವು ಶಿಥಿಲವಾಗಿ ಭೋಗಕ್ಕೆ ಆಯೋಗ್ಯವಾದಾಗ ಇನ್ನೊ ಬ್ಬರ ಭೋಗವನ್ನು ನೋಡಿ ತಮ್ಮ ಚಪಲನನ್ನು ತೃಪ್ತಿಪಡಿಸಿಕೊಳ್ಳುವ ಜೋಗಿಗಳು ಮನಶ್ಶಾಸ್ತ್ರಕ್ಕೆ ಗೊತ್ತು. ಆ ಭೋಗವು ತಮಗಿಲ್ಲದಿದ್ದರೂ ತಮಗೆ ಬೇಕಾದವರಿಗೆ ಇರಲಿ ಎಂದು ಬಿಟ್ಟುಕೊಡುವ. ತ್ಯಾಗಿ ಗಳೂ ಗೊತ್ತು. ಹಾಗೆಯೇ ಭೋಗದ ಬ್ಯಾಂಕುಗಳನ್ನು ಅನುಭವಿಸುವ ಭೋಗಿಗಳೂ ಮನಶ್ಶಾಸ್ತ್ರಕ್ಕೆ ಗೊತ್ತು. ಆದರೆ, ತನಗೆ ಬೇಕಾದ ಪ್ರಿಯತಮನಿಗೆ, ಉತ್ತಮವಾಡ ಮತ್ತೊಂದು ಹೆಣ್ಣು ತಂದು ಅದನ್ನು ತನಗೆ ಸಮಾನವಾಗಿ ಮಾಡಿಕೊಂಡು ಜೊತೆ ಜೊತೆ ಯಲ್ಲಿ ಸಮಸಮವಾಗಿ ಭೋಗಪಡುವ ಬುದ್ದಿಗೆ ಅಸೂಯೆಯಿಲ್ಲದ ಭಾವಬೇಕು. ಅದಕ್ಕೇ ಕಾಲಿದಾಸನು ಶಕುಂತಲೆಗೆ ಪ್ರಿಯಂವದೆ, ಅನಸೂಯೆಯರನ್ನು ಸಖಿಯರನ್ನಾಗಿ ಸೃಷ್ಟಿಸಿದುದು. ಭೋಗದ ಅಮೃತದಲ್ಲಿ ಅಪ್ರಿಯಂವಾದಿತೆಯು ಹುಳಿಯಬಿಂದು. ಅಸೂಯೆಯು ವಿಷದಬಿಂದು. ಔಶೀನರಿಯಲ್ಲಿ ಎರಡೂ ತೋರಿತು: ಅದನ್ನು ತುಳಿದು ಪ್ರಿಯಪ್ರಸಾದನವೆಂಬ ಪ್ರೇತ್ರವನ್ನುಮಾಡಿ ದೋಷಗಳನ್ನು ದೋಷಾಕರನೆದುರಿಗೆ ತೊಳೆದುಕೊಂಡು ದೋಷ ಮುಕ್ತಳಾಗಿ, ಗಂಡನಿಗೆ ಸ್ವಾತಂತ್ರ್ಯವನ್ನು ಕೊಟ್ಟಳು. ಕಾಲಿದಾಸನೇಕೆ ಔಶೀನರಿ ಊರ್ವಶಿ ಇಬ್ಬರಿಗೂ ಪುರೂರವನಹೃದಯದಲ್ಲಿ ಸ್ಥಾನವನ್ನು ಕಲ್ಪಿಸಲಿಲ್ಲ? ಬಹುಶಃ ಮೂರನೆಯ ನಾಲ್ಕನೆಯ ಅಂಕಗಳ ನಡುವೆ ಇನ್ನೊ೦ದು ಅಂಕವನ್ನು ಬರೆದಿದ್ದರೆ, ಹಾರದಲ್ಲಿ ನಾಯಕಮುಣಿಯ ಅತ್ತಿತ್ತ ಹಾಕುವ ಒತ್ತುಮಣಿ ಗಳಂತೆ, ಪುರೂರವನಿಗೆ ಅವರೀರ್ವರನ್ನೂ ಕಟ್ಟಿ ತೋರಿಸುತ್ತಿದ್ದನೋ ಏನೋ?

ರಾಣಿ ನಾಯಕ ಇಬ್ಬರೂ ಮಲ್ಲಿಯಲ್ಲಿ ಇಟ್ಟಿದ್ದ ಅಭಿಮಾನ ಸಾಗರವು ಮಲ್ಲಿಯ ಮಾತುಗಳಿಂದ ಪ್ರಕ್ಷುಬ್ಬವಾಗಿಹೋಯಿತು. ಮೂವರು ಆಗಿದ್ದಹಾಗೆಯೇ ಅದೇ ಸ್ಥಿತಿಯಲ್ಲಿಯೇ ಇನ್ನೂ ಅಷ್ಟು ಹೊತ್ತು ಇದ್ದರು. ಒಂದೇ ಗಳಿಗೆಯಲ್ಲಿಯೇ ರಾಣಿ ನಾಯಕರಿಬ್ಬರಿಗೂ ಇವಳಿಗೆ ಏನಾದರೂ ಗ್ರಹವು ಹಿಡಿದಿದೆಯೋ ಎನ್ನಿಸಿತು. ಬಹುವಾಗಿ ಆಯಾಸಪಟ್ಟುಕೊಂಡು ಬಂದವರು ವಿಶ್ರಾಂತಿಗೆಂದು ಹಾಸುಗೆಯ ಮೇಲೆ ಬಿದ್ದುಕೊಳ್ಳಬೇಕೆಂದು ಹೋದಾಗ ಅದರ ಮೇಲೆ ಮಂಡರ ಗಪ್ಪೆಯನ್ನು ಕಂಡಹಾಗೆ ಆಯಿತು. ಅವರ ಮನೋಭಾವಗಳು, ನೀರು ನೀರು ಎಂದು ನಖಶಿಖಾಂತವಾಗಿ ಮೈಯೆಲ್ಲವೂ ಬಾಯಿ ಬಾಯಿ ಬಿಡುತ್ತಿರುವಾಗ ಎದುರಿಗೆ ನದಿಯು ಸಿಕ್ಕಿ ಅದರಲ್ಲಿ ಧುಡುಮ್ಮನೆ ಧುಮುಕ ಬೇಕೆಂದು ಸಿದ್ಧವಾದಾಗ ದೊಡ್ಡ ಮೊಸಳೆಯು ಕಾಣಿಸಿದಂತಾಯಿತು.
*****