ಚಾಲಕ ಗ್ರೇಟ್

ಚಾಲಕ ಗ್ರೇಟ್

ನಾನು ಸಾರಿಗೆ ಸಂಸ್ಥೆಯಲ್ಲಿ ೩೦ ವರ್‍ಷಗಳಷ್ಟು ಸೇವೆ ಮಾಡಿದೆ. ನನ್ನ ಅನುಭವದಲ್ಲಿ ನಮ್ಮ ಚಾಲಕ ನಿರ್‍ವಾಹಕರು ಭಲೇ ಗ್ರೇಟ್. ಹಗಲು ಇರುಳು ಅವರು ಶ್ರಮಿಸಿ ಪ್ರಯಾಣಿಕರಿಗೆ, ಸಂಸ್ಥೆಗೆ ಕೀರ್‍ತಿ ತರುವರು. ಅವರ ದುಡಿಮೆ ಸ್ವರ್‍ಗ ಸಮಾನ.

ದಿನಾಂಕ ೦೩-೦೮-೨೦೧೫ ರಂದು ಸೋಮವಾರ ದಿನದಂದು ಬೆಳಗಿನ ಜಾವ ೪ ಗಂಟೆಯಲ್ಲಿ ಜರುಗಿದ ಹೃದಯ ವಿದ್ರಾವಕ ಘಟನೆಯು ೩೫ ಜನ ಪ್ರಯಾಣಿಕರನ್ನು ಸುಹಾಸ್ ಸುಖಾಸೀನ ಬಸ್‌ನ್ನು ಸುರಕ್ಷಿತವಾಗಿ ಎಡಗಡೆಗೆ ನಿಲ್ಲಿಸುವಲ್ಲಿ ಬಸ್ ಚಾಲಕ ಅಬ್ದುಲ್ ಕೆ. ಕೊಟ್ನಾಳ್ ವಯಸ್ಸು ೩೯ ಇವರ ಸಮಯ ಪ್ರಜ್ಞೆಯನ್ನು ಎಂಥಾದರೂ ಮೆಚ್ಚಲೇಬೇಕು!

ಹೌದು! ಸಾರಿಗೆ ಸಂಸ್ಥೆಯ ಬಸ್ ಚಾಲಕ ತಾನು ಸಾವಿನ ದವಡೆಯಲ್ಲಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಮೇಲೆ ಮೃತಪಟ್ಟ ಕರುಣಾ ಜನಕವಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಮ್ಯಾದನೇರಿ ಕ್ರಾಸ್ ಕುಷ್ಟಗಿ ಕೊಪ್ಪಳ ಜಿಲ್ಲೆಯಲ್ಲಿ ಜರುಗಿದೆ.

ವಿಜಯಪುರ ಜಿಲ್ಲೆ ಇಂಡಿ ಡಿಪೋದ ವಾಹನವು ಬೆಂಗಳೂರಿನಿಂದ ಇಂಡಿಗೆ ಹೋಗುತ್ತಿತ್ತು. ಚಾಲಕ ಹೃದಯಾಘಾತಕ್ಕೆ ಒಳಗಾದ ನಂತರವೂ ಬಸ್ ಚಲಿಸುತ್ತಿತ್ತು! ವೇಗದೂತ ಬಸ್ ವೇಗವಾಗಿ ಚಲಿಸುತ್ತಿತ್ತು ಇದ್ದಕ್ಕಿದ್ದಂತೆ ಅಡ್ಡಾದಿಡ್ಡಿಯಾಗಿ ಚಲಿಸತೊಡಗಿತು. ಬಸ್ಸಿನಲ್ಲಿದ್ದವರು ಗಾಬರಿಬಿದ್ದು ಎದ್ದು ಕುಳಿತರು. ಚಾಲಕನ ಕ್ಯಾಬಿನ್ ಚಿಲಕವಾಕಿತ್ತು! ಏನೆಂದು ನೋಡುವಷ್ಟರಲ್ಲಿ ಬಸ್ ಜಮೀನಿನಲ್ಲಿ ಹೋಗಿ ನಿಂತಿತು! ಚಾಲಕನ ಉಸಿರು ನಿಂತು ಹೋಗಿತ್ತು!

ಇದನ್ನೆಲ್ಲ ಪ್ರಥಮ ವರ್‍ತಮಾನವಾಗಿ ಕುಷ್ಟಗಿ ಡಿಪೋ ಮ್ಯಾನೇಜರ್‌ ಮಂಜುನಾಥ್ ಸಾರಿಗೆ ನಿಯಂತ್ರಕ ಕಾಸೀಂಸಾಬ್‌ ಕಾಯಿಗಡ್ಡೆ ವರದಿ ಮಾಡಿರುವರಲ್ಲದೆ, ಪ್ರಯಾಣಿಕರನ್ನು ಮುಂದಿನ ಊರುಗಳಿಗೆ ಕಳಿಸುವ ವ್ಯವಸ್ಥೆ ಮಾಡಿದ್ದಲ್ಲದೆ, ಹೆದ್ದಾರಿಯ ಟೋಲ್‌ಗೇಟ್ ಅಂಬುಲೆನ್ಸ್ ಮೂಲಕ ಚಾಲಕನ ಮೃತ ದೇಹವನ್ನು ಕುಷ್ಟಗಿ ಸರ್‍ಕಾರಿ ಆಸ್ಪತ್ರೆಗೆ ಕಳಿಸಿರುವರು.

ಇದನ್ನೆಲ್ಲ ನೋಡಿದಾಗ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಗ್ರೇಟ್ ಅಲ್ಲವೇ? ನಾವು ನೀವು ಚಾಲಕರಿಗೆ ಆಲ್ ದಿ ಬೆಸ್ಟ್ ಹೇಳೋಣವಲ್ಲವೇ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲೆ ನಿನ್ನಯ ತಮ್ಮನೆಲ್ಲಿ?
Next post ಕಿವುಡರ ಹಾಡು

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…