ಬರೆದವರು: Thomas Hardy / Tess of the d’Urbervilles
ಮಾದೇಗೌಡ ಮನೆಗೆ ಬಂದು ಊಟದ ಶಾಸ್ತ್ರ ಮಾಡಿ ಮುಗಿ ಸಿದ. ರಾಣಿ ಸುಂದೆರಮ್ಮಣ್ಣಿಯೂ ಹಾಗೆ ಮೊಕ ಸಿಂಡರಿಸಿಕೊಂಡು ಕೋಪದಿಂದ ಉರಿಯುತ್ತಿದ್ದುದು ಕಂಡಿದ್ದರೂ ಅವನಿಗೆ ಅದು ಅಸಹ ಜವೆನ್ನಿಸಲಿಲ್ಲ. ಆಕೆ ರಾಣಿ. ಮನೆಗೆ ಯಜಮಾನಿ: ಆಕೆ ಅಪರಾಧ ವಾದರೆ ರೇಗುವುದು ಸಹಜ ನಾಯಕ ತಮ್ಮ ಕುಲದಲ್ಲೆಲ್ಲಾ ಎಲ್ಲಾದರಲ್ಲೂ ನಾಯಕ. ಅವನು ರೇಗುವುದೂ ಅವನಿಗೆ ಸರಿ ಎನ್ನಿ ಸಿತು. ಆದರೆ, ತಂದಾನಪದದ ಮಲ್ಲನ ಮಗಳು ಮಲ್ಲಿ ಇನ್ನೂ ಸರಿ ಯಾಗಿ ಹೇಳಬೇಕೆಂದರೆ, ಹಾದರದ ಹುಯ್ಲಿನಲ್ಲಿ ಹುಟ್ಟಿ, ಯಾರ ಮನೇಲೋ ಬೆಳೆದು, ಬಂದಿಹಾಕಿಸಿಕೊಂಡ ಸೂಳೆಯಾಗಿ ಅರಮನೆ ಸೇರಿದವಳು, ನಾಯಕನ ಹತ್ತಿರದ ನಂಟನಾದ ತನ್ನ ಮೇಲೆ ರೇಗು ವುದು? ಇನಳು ಯಾವ ದೇವರ ಬಂಟಳು ? ಎಂದು ಅವನಿಗೆ ಬಹಳ ಸಹಿಸುವುದಕ್ಕಾಗದ ಕೋಪಬಂದಿತು, ಕೆಣಕಿದ ನಾಗರಹಾವು ರೇಗಿ ದ್ದರೂ ಯತ್ನವಿಲ್ಲದೆ ಹುತ್ತಸೇರಿ, ಮೊರೆಯುವಂತೆ, ಆ ಕೋಪ ಹೃದ ಯದಲ್ಲಿ ನಿಂತು ಕುಣಿಯುತ್ತಿತ್ತು.
ಸಾರೋಟು ಬಂತು: ಅದರಲ್ಲಿ ನರಸಿಂಹಯ್ಯ, ಇನ್ನೇನು ಹೊರ ಡುಬೇಕೆನ್ನುವಾಗ ನಂಜಪ್ಪ ನಾಲ್ಕುನೂರು ಸವರನ್ಗಳನ್ನು ತಂದು ಪಟೇಲರ ಕೈಯಲ್ಲಿ ಕೊಟ್ಟು, ‘ಇದನ್ನು ನಾಳೆಯಿದ್ದು ನರಸಿಂಹಯ್ಯ ನೋರ ಹೆಸರಿನಲ್ಲಿ ಖಜಾನೇಲಿ ಇಟ್ಟು ರಸೀತಿ ತರಬೇಕು ಅಂತ ಅಪ್ಪಣೆ ಯಾಗಿದೆ’ ಎಂದನು. ಹಾಗೆಯೇ ಐದು ನೂರು ರೂಪಾಯಿನ ಒಂದು ಥೈಲಿ ಕೊಟ್ಟು ‘ ಇದು ತಮ್ಮ ಖರ್ಚಿಗಂತೆ’ ಎಂದನು.
ಮಾದೇಗೌಡನಿಗೆ ನಾಯಕನ ಬೈಗಳು ತಿಂದು ಆಗಿದ್ದ ಗಾಯ ಕೂಡಲೇ ಮಾಯ್ತು ‘ಎಷ್ಟೇ ಆಗಲಿ ಹಿರಿಯ. ನನ್ನ ಕಷ್ಟ ಬಲ್ಲ.” ಎನ್ನಿಸಿ ಹಿತವಾಯಿತು. ಏಕೋ ನರಸಿಂಹಯ್ಯನ ಮೇಲೆ ಕ್ರೋಧ ಬಂತು. ಮಲ್ಲೀಮೇಲೆ ಎಲ್ಲೂಇಲ್ಲದ ಆಕ್ರೋಶಬಂತು. ಸಾಧ್ಯ ವಾಗಿದ್ದರೆ ಅವನು ಆ ಕೂಡಲೇ ಹೋಗಿ ಅವಳನ್ನು ಏನೇನೋಮಾಡಿ ‘ಜಾತಿ ಕೆಡಿಸಿ ಬಿಡ್ತಿದ್ದ’ ಆದರೆ ಯತ್ನವಿಲ್ಲ. ಸುಮ್ಮನಿದ್ದ.
ದಾರಿಯಲ್ಲಿ ಸಾರೋಟು ಹೋಗುವಾಗಲೂ ಒಬ್ಬರ ಮೈ ಒಬ್ಬ ರಿಗೆ ತಗಲದಂತೆ ಇಬ್ಬರೂ ಎರಡು ಮೂಲೆ ಹಿಡಿದು ಕೂತಿದ್ದಾರೆ. ಜೋಡಿ ಕುದುರೆಗಳು ಒಂದೇ ಶ್ರುತಿಯಲ್ಲಿ ಒಂದು ತಾಳದ ಗತಿ ಹಿಡಿದು ನುಡಿಯುತ್ತಿರುವ ಮೃದಂಗದಂತೆ ಏಕಗತಿಯಲ್ಲಿ ನಡೆಯುತ್ತಿವೆ. ನರಸಿಂ ಹಯ್ಯನಿಗೆ ರಥದ ಅಂದೋಲನದಿಂದ ಕೊಂಚ ತೂಕಡಿಕೆ ಬಂದು ಹಾಗೆಯೇ ಒರಗಿಕೊಂಡಿದ್ದಾನೆ.
ಮಾದೇಗೌಡ ಯೋಚಿಸುತ್ತಾ ಕುಳಿತಿದ್ದಾನೆ; “ಏನು ಮಾಡಿದರೆ ಮಲ್ಲಿ ಮೇಲೆ ತಾನು ಸೇಡು ತೀರಿಸಿಕೊಳ್ಳಬಹುದು ?” ಎಂದು ಅವನಿಗೆ ಒಂದೇ ಯೋಚನೆ… ಅವನೂ ಕಣ್ಣು ಮುಚ್ಚಿದ್ದಾನೆ. ರೇಗಿ ಅಂಗಾರ ವಾಗಿರುವ ಎರಡು ಪದ್ಮ ಲೋಚನಗಳು ಅವನನ್ನು ದುರುಗುಟ್ಟಿಕೊಂಡು ನೋಡುತ್ತಿವೆ. ಗಾಬರಿಯಾಗಿ ಕಿಟಾರನೆ ಕಿರಚಿಕೊಳ್ಳಬೇಕು. ಅಷ್ಟು ಕ್ರೂರವಾಗಿವೆ. “ಪಾಪಿ! ಆ ಬಡಹುಡುಗಿಯನ್ನು ಹಿಡಿದುಕೊಳ್ಳುವು ದಕ್ಕೆ ಹೋದ ಹಾಗೆ ನನ್ನನ್ನು ಏನಾದರೂ ಕೆಣಕಬೇಕಾಗಿತ್ತು. ನಿನ್ನ ಆಯಸ್ಸನ್ನು ಹೀಗೆ ತೊಡೆದು ಬಿಡುತ್ತಿದ್ದೆ: ನಿನ್ನನ್ನು ತಗಣೆಯನ್ನು ಹಿಸುಕಿಹಾಕುವಹಾಗೆ ಮಾಡಿಬಿಡುತಿದ್ದೆ.” ಎಂದು ಗದರಿಸುವ ಹಾಗೆ ಆ ಅವನು ಒದರಿಕೊಂಡು ಆ ಕನಸನ್ನು ಬಿಟ್ಟು ಏಳುತ್ತಾನೆ ಆ ಕನಸಿನ ಭ್ರಾಂತಿಯಿನ್ನೂ ಬಿಡದೆ ಅಂಜಿಸುತ್ತದೆ : ಅಂಜಿಸುತ್ತಿದೆ.
ನರಸಿಂಹಯ್ಯನಿಗೂ ಒಂದು ಸಣ್ಣ ಕನಸು; ಅದರಲ್ಲಿಯೂ ಮಲ್ಲಿ. ಮಲ್ಲಿಯು ದೇವಕನ್ಯೆಯಂತೆ ಎದುರು ನಿಂತಿದ್ದಾಳೆ : ‘ಬೇಕೆಂ ದರೆ ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ’ ಎನ್ನುತ್ತಾಳೆ. ಅವನು ‘ ತಾಯೆ, ನೀನು ಜಗನ್ಮಾತೆ, ನನ್ನನ್ನೇಕೆ ಇಂತು ಚಂಡಿಸುವೆ? ನಿನ್ನಲ್ಲಿ ಮಾತೃಭಾವವನ್ನು ಕಂಡು ಕೃತಾರ್ಥನಾಗುವಾತೆ ಅನುಗ್ರಹಿಸು ಎನ್ನುತ್ತಾನೆ.’ ಹಾಗಾದರೆ ಹೋಗಲ್ಲಿ ತೆಗೆದುಕೊ’ ಎಂದು ಕೈನೀಡು ತ್ತಾಳೆ, ಸುವರ್ಣವೃಷ್ಟಿ ಯಾಗುತ್ತದೆ. ಅವನು ” ತಾಯೆ, ಹಿಂದೆ ವಿದ್ಯಾರಣ್ಯರಿಗೆ ಸುವರ್ಣವೃಷ್ಟಿಯ ಅನುಗ್ರಹ ಮಾಡಿದೆಯಂತೆ : ಅವರು ಅದನ್ನು ಪ್ರಜೆಗಳಿಗೆ ಹಂಚಿ ವಿಜಯನಗರರಾಜ್ಯವನ್ನು ಕಟ್ಟದ ರಂತೆ. ನಾನೂ ಹಾಗೆಯೇ ಈ ಸುವರ್ಣ ವೃಷ್ಟಿ ಯನ್ನು ನೀನು ಇನ್ನೂ ಹತ್ತು ಸಲ ಕರೆ: ಅದಷ್ಟನ್ನೂ ಈ ರಾಜ್ಯದಲ್ಲಿರುವವರಿಗೆಲ್ಲ ಹಂಚಿ ನಾನು ಸ್ವರಾಜ್ಯವನ್ನು ಕಟ್ಟುತ್ತೇನೆ ಎನ್ನುತ್ತಾನೆ. ಆಕೆಯು ನಗುತ್ತಾ ” ಸ್ವರಾಜ್ಯವನ್ನು ಕಟ್ಟುವುದಕ್ಕೆ ನೀನು ಅರ್ಧಯೋಗ್ಯನಾಗಿದ್ದೀಯೆ’ ಎನ್ನುತ್ತಾಳೆ. “ನಾನು ಪೂರ್ಣಯೋಗ್ಯನಾಗುವದು ಯಾವಾಗ? ‘ ಎಂದವನು ಕೇಳುತ್ತಾನೆ. ” ಅಗೋ ನೋಡು, ನಿನ್ನ ದೇಶಬಾಂಧವರನ್ನು ಬ್ರಿಟಿಷರು ಬಂಧಿಸಿರುವರು ಎಂದು ನೀನು ತಿಳಿದುಕೊಂಡಿದ್ದೀಯೆ. ನಿಮಗೆ ನೀನೇ ತೊಡಿಸಿಕೊಂಡಿರುವ ಈ ನಿಗಳಗಳನ್ನು ಕಳಚು. ಆಮೇಲೆ ಅವರು ತೊಡಿಸಿರುವ ಸಂಕಲೆಯು ಬಿಡುವುದು ‘ ಎನ್ನುತ್ತಾಳೆ. ಹಾಗಾದರೆ ಯಾವಾಗ? ಎಂದು ಮತ್ತೆ ಪ್ರಶ್ನೆ; ‘ ನಾನೂ ನಿನ್ನ ಜೊತೆಯಲ್ಲಿ ಮನೆಬಿಟ್ಟು ಬಂದಾಗ ಅದು ಆಗುವುದು ‘ ಎಂದು ಉತ್ತರ. ‘ ಹಾಗಾದರೆ, ನೀನು ಮನೆ ಯನ್ನು ಬಿಟ್ಟು ಬರುವೆಯಾ? ‘ ಎಂದು ಮತ್ತೆ ಪ್ರಶ್ನೆ. ‘ ನೋಡು ತ್ತಿರು’ ಎಂದುತ್ತರ.
ಕನಸು ಮುಗಿಯಿತು. ಎಚ್ಚರವಾಯಿತು. ಆದರಿನ್ನೂ ಭ್ರಾಂತಿ. ಮಲ್ಲಿಯ ಮಡುಲಲ್ಲಿ ತಾನು ಮಗುವಾಗಿ ಮಲಗಿರುವ ಹಾಗೆ ! ಅವಳು ತನ್ನನ್ನು ತಟ್ಟುತ್ತಿರುವ ಹಾಗೆ ತೋರುತ್ತಿದೆ.
ಗೌಡನು ಕಣ್ಣುಜ್ಜಿಕೊಂಡು ಎದ್ದನು. ಯಾರೋ ತನ್ನನ್ನು ಕಾಡುತ್ತಿದ್ದವರು ಕೆಳಕ್ಕಿಳಿದು ಹೋದಹಾಗಾಯಿತು. ನರಸಿಂಹಯ್ಯನು ಕಣ್ಣುಜ್ಜಿಕೊಂಡು ಎದ್ದನು. ಯಾರೋ ದೇವತೆಯು ಒಳಕ್ಕೆ ಹತ್ತಿ ಬಂದಂತಾಯಿತು. ಇಬ್ಬರೂ ಒಬ್ಬರನ್ನೊಬ್ಬರು ಕೇಳಿದರು. ಅದೂ ಏಕಕಾಲದಲ್ಲಿ.
“ಈಗ ಇಳಿದು ಹೋದವರು ಯಾರು? ?
“ಈಗ ಹತ್ತಿಬಂದವರು ಯಾರು? ”
ಮತ್ತೆ ಇಬ್ಬರೂ “ಹಾಗೆಂದರೇನು? ”
ಗಾಡಿಯಲ್ಲಿ ಯಾರೂ ಇಲ್ಲ: ಇರುವನರು ತಾವಿಬ್ಬರೇ ಎಂದು ತಿಳಿದು ಒಬ್ಬನು ತನ್ನ ಪ್ರಶ್ನೆಯನ್ನು ಬಿಟ್ಟನು ಇನ್ನೊಬ್ಬನು ಗಾಡಿ ಯಿಂದ ಬಗ್ಗಿ ರಸ್ತೆಯೆಲ್ಲಾ ನೋಡಿದನು: ಯಾರೂ ಇರಲಿಲ್ಲವಾಗಿ ಅವನೂ ಸುಮ್ಮನಾದನು.
ಪಟೇಲನಿಗೆ ನರಸಿಂಹಯ್ಯನ ಹತ್ತಿರ ಏನೋ ಮಾತನಾಡ ಬೇಕು ಎನ್ನಿಸುತ್ತಿದೆ. ಆದರೆ ಏನೋ ಸಂಕೋಚ : ಏನೋ ದಿಗಿಲು. ಗಾಡಿಯು ಮುಂದೆ ಮುಂದೆ ಓಡುತ್ತಿದೆ. ಇನ್ನು ಒಂದೆರಡು ಮೈಲಿ ಮಾತ್ರ. ಮೈಸೂರು ಸಿಕ್ಕಿಹೋಗುತ್ತದೆ.
ಕೊನೆಗೆ ತಡೆಯಲಾರದೆ ಬಂತು: “ಸ್ವಾಮಿ, ಮೇಷ್ಟೈ, ಒಂದುಪಕಾರ ಮಾಡಿ. ಹಾದಿರಂಪು ಬೀದಿರಂಪು ಮಾಡಬೇಡಿ. ನನ್ನ ಮಾನ ಕಾಪಾಡಿ” ಎಂದು ಕೆಹಿಡಿದುಕೊಂಡನು. ನರಸಿಂಹಯ್ಯ ನಿಗೆ ಇವನು ನಾಯಕನೊಡನೆ ಆಡಿದ್ದ ಮಾತೆಲ್ಲ ನೆನೆಪಾಯಿತು. “ಅಲ್ಲಯ್ಯ, ನೀವು ನಿಮ್ಮ ಕೋಮಿನ ಉದ್ದಾರಕ್ಕೆ ಬದ್ಧ ಕಂಕಣರು ; ಅದಕ್ಕಾಗಿ ಮತ್ತೊಂದು ಕೋಮನ್ನು ತುಳಿಯಲೂ ಸಿದ್ಧರು: ಇಂತಹ ಧೀರರಿಗೆ ಯಃಕಶ್ಚಿತನಾದ ನನ್ನಿಂದ ಉಪಕಾರವೇನು ? ಅಪಕಾರ ವೇನು?” ಎಂದು ಕೇಳಿದನು.
ಗೌಡನು ಕೈಹಿಡಿದುಕೊಂಡು “ಇಲ್ಲ ತಪ್ಪಾಯಿತು. ಇನ್ನು ಮುಂದೆ ನಾನು ಅನಾಥರ ಮೇಲೆ ಕೈಮಾಡುವುದಿಲ್ಲ ” ಎಂದು ಅಂಗ ಲಾಚಿಕೊಂಡನು.
ನರಸಿಂಹಯ್ಯನಿಗೆ ಅದನ್ನು ಕಂಡು ಅಸಹ್ಯವಾಯಿತು : “ಅಯ್ಯೋ ಬಡಾಯಿಗಾರ ! ಕೊನೆಗೂ ಇಷ್ಟೇನೆ? ನೀನೊಬ್ಬ ಖರ್ಜಿಕಾಯಿ ! ಅಂಜಿದರೆ ಅಂಜಿಸುವುದು : ಅಂಜದಿದ್ದರೆ ಅಂಜುವುದು. ನೀನೂ ಆ ಧೀರನ ಕುಲದಲ್ಲಿ ಹುಟ್ಟಿದವನೇ ಏನು?” ಎಂದು ಏನೋ ಯೋಚಿಸಿಕೊಂಡು ” ಬನ್ನಿ. ಆ ಪುಣ್ಯಾತ್ಮನಿಗಾಗಿ ಎಲ್ಲವನ್ನೂ ಸಾರಿಸೋಣ? ಎಂದು ತಾತಯ್ಯನವರ ಬಳಿಗೆ ಕರೆದುಕೊಂಡು ಹೋದನು.
*****