ನಿಮ್ಮ ಎದೆ ಕಮಲದಲಿ
ಅದೆಂತಹ ಪ್ರೇಮ
ಕಟ್ಟಿ ಹಾಕಿತು ಭಕ್ತರಿಗೆಲ್ಲ
ಅದು ಚೈತನ್ಯ ಧಾಮ
ನಿಮ್ಮ ನೋಟದಲಿ ಚೈತನ್ಯ
ನಿಮ್ಮೊಡನಾಟ ಭಕ್ತಿ
ನಿಮ್ಮ ಸ್ಪರ್‍ಶದಲಿ ಆನಂದ
ಅದುವೆ ಮುಕ್ತಿ
ಎತ್ತತ್ತ ನೋಡಲಿ ನಾನು
ಕಾಡುವುದು ನೆನಪು
ನೆನೆದುಕೊಂಡರಾಯು ಮನದಲಿ
ತುಂಬುವುದು ತನಿಗಂಪು
ಸಾಗರದ ಆಚೆಗಿನಲಿ ನೀವು
ಆಕಾಶದ ಅಂಚಿನಲಿ
ಮತ್ತೆ ಸಕಲರಲ್ಲಿ ನೀವು
ಗಗನದ ಮಿಂಚಿನಲಿ
ನಾ ನೋಡಲಾರೆನೆ ನಿಮ್ಮ
ಓ ಪರಮಹಂಸರೆ
ನಿಮ್ಮಲ್ಲಿ ನಾ ಕರಗಲಿ
ಮಾಣಿಕ್ಯ ವಿಠಲರಸರೆ
*****