ಬರೆದವರು: Thomas Hardy / Tess of the d’Urbervilles

ತಿಲಕರ ಜಯಂತಿಯದಿನ ಹುಡುಗರು ತಿಲಕರ ಪಟ ಮೆರ ವಣಿಗೆ ಮಾಡಬೇಕೆಂದಿದ್ದಾರೆ. ಅದಕ್ಕೆ ಎಲ್ಲಾ ಸಿದ್ಧತೆಗಳೂ ನಡೆದಿದೆ.

“ತಿಲಕರ ಪಟವೊಂದೇ ಸಾಕೇನೋ ? ” ಒಬ್ಬ ಕೇಳಿದ.

“ಉಂಟೇ? ಇಲ್ಲಿಂದ ಹತ್ತು ಹೆಜ್ಜೆ ಹೋಗುವುದರೊಳಗಾಗಿ ಪೋಲೀಸಿನವರು ಬಂದು ನಮ್ಮನ್ನು ರಾಜದ್ರೋಹಿಗಳು ಎಂದು ಹಿಡಿದುಹಾಕಿಬಿಡುತ್ತಾರೆ.”

“ಓ ಬಿಟ್ಟೆ! “ಹಾಗೇನಾದರೂ ಆದರೆ ನಮಗೆ ಎರಡು ಮದ್ದಾ ನೆಗಳಿವೆ ಹೋರಾಡುವುದಕ್ಕೆ.”

“ಯಾರಪ್ಪಾ ! ಕಾಂಗ್ರೆಸ್ ಅನ್ನುವುದಕ್ಕೆ ಮೈಸೂರಿನಲ್ಲಿ ಇನ್ನು ಕಾಂಗ್ರೆಸ್ ಬಂದಿಲ್ಲ. ಬೆಂಗಳೂರಿನಲ್ಲಿ ಹುಟ್ಟಿದ ಕಾಂಗ್ರೆಸ್ ಕೆಂಪಾಂ ಬುಧಿಯಲ್ಲಿ ಹತ್ತು ಸಾವಿರ ಜನದ ಕೈಲಿ ತಿಲಕರಿಗೆ “ಧರ್ಮೋದಕ ಕೊಡಿಸಿತು. ತಾನೂ ಧರ್ಮೋದಕ ತೆಗೆದುಕೊಂಡಿತು. ಇನ್ನು ಯಾವುದು ?”

“ಅಲ್ಲಯ್ಯಾ, ನಮ್ಮಲ್ಲಿ ಹೆತ್ತು ಜನಕ್ಕಾಗಿ ಹೋರಾಡುವ ಸಂಘ ಗಳು ಯಾವವೂ ಇಲ್ಲ. ಆದಕ್ಕೆ. ಅದೃಷ್ಟ ಇಬ್ಬರು ಗಂಡುಗಳು ಇದ್ದಾರೆ.”

“ಒಂದು ತಾತಯ್ಯ ಇನ್ನೊಂದು ರಾವ್‌ಬಹದ್ದೂರ್ರೋ ?”

“ಮತ್ತೆಯಾರು? ಹೌದು. ಇನ್ನೊಂದು ಗೊತ್ತೇನು ? ಮಿಲ್ಲರ್ ಕಮಿಟಿ ರಿಪೋರ್ಟ್ ಬಂತಲ್ಲಾ! ಆಗಲೂ ಆತ ಇದು ಬೇಡ ಅಂದನಂತೆ. ಚಾಕರಿ ಅಂದರೆ ಕೂಲಿ. ಕೂಲಿ ಮಾಡೋಕೆ ಜಾತಿ ಏನು ಎಂದನಂತೆ. ಆದರೆ ಆತನಮಾತು ನಡೆಯಲಿಲ್ಲವಂತೆ. ಆಗಿ ನಿಂದ ಆತ ಹಿಂದೆ ಹಿಂದೆ ಇದ್ದಾನೆ ಅಂತಾರೆ”

“ಡಯಾರ್ಕಿ ಬಂತು ಸಜ್ಜನರೆಲ್ಲ ಹಿಂದೆ ಬಿದ್ದರು. ನೋಡು. ಕಾಂಗ್ರೆಸ್ಸಿನವರಂತೂ ಸರಕಾರಕ್ಕೆ ವಿರುದ್ಧ. ಲಿಬರಲ್ಸ್‌ನಾದರೂ ಮಾಡರೇಟ್ಸನಾದರೂ ಮಂತ್ರಿಗಳನ್ನು ಮಾಡಬಾರದಾಗಿತ್ತೇ ? ಎಲ್ಲಾ ಬಿಟ್ಟು, ಔಟ್ ಅಂಡ್ ಔಟ್ ಕಮ್ಯೂನಲಿಸ್ಟನೇ ಮಂತ್ರಿ ಗಳನ್ನು ಮಾಡಬೇಕಾಗಿತ್ತೇ ?”

“ಬಿಡೋ ಹುಚ್ಚ. ಇವೆಲ್ಲ ಡಿವೈಡ್ ಎಂಡ್ ರೂಲ್ ಪಾಲಿ ಸಿಯ ಪ್ರಭಾವ.”

“ಅದೆಲ್ಲ ಇರಲಿ. ಸಧ್ಯದ ಕೆಲಸ ಹೇಳಯ್ಯ ! ?

“ನಾವು ಬರಿಯ ತಿಲಕರ ಫೋಟೋ ತೆಗೆದುಕೊಂಡು ಹೋದರೆ ಆಗುವುದಿಲ್ಲ… ಮಹಾರಾಜರ ಫೋಟೋನೂ ತೆಗೆದುಕೊಂಡು ಹೋಗ ಬೇಕು.?

“ಅಷ್ಟೇ ಅಲ್ಲ ಸಾರ್. ಬೆಂಗಳೂರು ಹುಡುಗರು ಗಾಂಧಿಯವರ ಫೋಟೋನೂ ತೆಗೆದುಕೊಂಡು ಹೋಗುವರಂತೆ. ನಾವೂ ಹಾಗೇ ಮಾಡೋಣ.”

“ಸರಿ ಸರಿ. ಒಂದು ಸತ್ತವರಿಗೆ ಭಕ್ತಿ. ಇನ್ನೊಂದು ಮೈಸೂರಿನ ರಾಜಭಕ್ತ : ಮತ್ತೊಂದು ಮುಂದಿನ ಇಂಡಿಯದ ಭಕ್ತಿ.”

“ಆಯಿತು ಒಂದು ಫೋಟೋಗೆ ನಮ್ಮಲ್ಲಿ ದುಡ್ಡಿಲ್ಲ. ಇನ್ನು ಮೂರು ಫೋಟೋ ಎಲ್ಲಿಂದ ತರುವುದು? ”

“ಒಂದು ಜಾಗಾ ಇದೆ. ಚ

“ನಾಯಕರ ಚಿಕ್ಕ ಹೆಂಡತಿ ಮ್ಲಮ್ಮಣ್ಣಿ ಇದ್ದಾರಲ್ಲ. ಅವರು ಈಚೆಗೆ ಸಾರ್ವಜನಿಕ ಚಳುವಳಿಯೆಂದು ಯಾರು ಹೋದರೂ ಇಲ್ಲ ವೆನ್ನುವುದಿಲ್ಲ. ಅದರಲ್ಲೂ ತಾತಯ್ಯನವರು ಹೇಳಿದರೆ ಎಂದರೆ ಕೈ ತುಂಬಾ ಕೊಡುತ್ತಾರೆ.”

“ತಾತಯ್ಯ ಊರಲ್ಲಿಯೇ ಇಲ್ಲವಲ್ಲ?”

“ಅದಕ್ಕೇನು? ತಾತಯ್ಯನವರು ಬರುತ್ತಾರೆಂದು ಇದುವರೆಗೂ ಕಾದೆವು. ಅವರು ಬರಲಿಲ್ಲ. ನಾವೇ ಬಂದಿದ್ದೇವೆ. ಅನ್ನೋಣ. ಅದೃಷ್ಟವಿದ್ದಂತೆ ಆಗಲಿ.”

“ಅದೀಗ ಸೈ”
*****
ಮುಂದುವರೆಯುವುದು