ಮುದ್ಕರ ಮುದ್ಕರ ಕೋಲೂ ಮುದ್ಕರ ಕೋಲಾಡೀ
ಮುದ್ಕರ್ ಕೋಲ್ ಯಾತಕೇ | ಕವಲಾ ಜಪ್ಪುಕೇ || ೧ ||
ಮುದ್ಕಿರ ಮುದ್ಕಿರ ಕೋಲೂ ಮುದ್ಕಿರ ಕೋಲಾಡಿ
ಮುದ್ಕಿರ್ ಯಾತಕ್ ಮೇಲೂ ಶಾಡೀ ಹೋಲೂಕೆ || ೨ ||
ಪುಂಡಿರ್ ಪುಂಡಿರ್ ಕೂಡೀ ಪುಂಡಿರ್ ಕೋಲಾಡಿ
ಪುಂಡಿರ್ ಯಾತಕ್ ಮೇಲೂ ಉಂಡೇ ತಿಂಬೂಕೇ || ೩ ||
ಪುಂಡಗಾರ್ ಪುಂಡಗಾರ್ ಕೂಡೀ ಪುಂಡ್ಗಾರ್ ಕೋಲಾಡೀ
ಪುಂಡಗಾರ್ ಯಾತಕ್ ಮೇಲೂ ಹಾಣೀ ಯೇಶೂಕೇ || ೪ ||
ಕೋಲು ಕೋಲಾಟಾ ಕೋಲೂ ಮೇಲಾಟಾ
ನಾರೀ ನಿನ್ನಾಟ ಕಬ್ಬಿನಗದ್ದೇಲೀ || ೫ ||
*****
ಹೇಳಿದವರು: ಕರಿಯಮ್ಮ ರಾಮಕೃಷ್ಣಗೌಡ, ಕಲ್ಕೋಡು, ಹೆಗಡೆ ಊರು
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.