ಸಂಗೀತ ಸಾಹಿತ್ಯ ನೃತ್ಯ ಚಿತ್ರ ಚಲಚಿತ್ರ
ವಿಂತೆಲ್ಲ ಕಲಾ ತರಂಗಗಳು ಪ್ರಕೃತಿಯಂತ
ರಂಗದೊಳಗಿಂದ ಅನುರಣಿಸಿದೊಡದನು ಸುಂದರ
ವೆಂದೆನಬೇಕಲ್ಲದಿದೇನನುಗಾಲ ಪೇಟೆಯೊಳು ಕರಿದೆಣ್ಣೆ
ಬೋಂಡ ತಿನುತಿರಲು ಸಿಡಿದೆಣ್ಣೆ ಕಲೆಯನೈಸಿರಿ ಎನ್ನುವುದೋ? – ವಿಜ್ಞಾನೇಶ್ವರಾ
*****