Home / ಲೇಖನ / ಕೃಷಿ / ಹುಬ್ಬಳ್ಳಿಯ ಶಿವಾನಂದ ಮೂರ್ತಿ ಅವರಿಂದ ಹೊಸ ಮಾದರಿಯ ಸ್ಪ್ರೇಯರ್

ಹುಬ್ಬಳ್ಳಿಯ ಶಿವಾನಂದ ಮೂರ್ತಿ ಅವರಿಂದ ಹೊಸ ಮಾದರಿಯ ಸ್ಪ್ರೇಯರ್

ದಿನನಿತ್ಯ ವೈಜ್ಞಾನಿಕವಾಗಿ ಏನಾದರೊಂದು ಆವಿಷ್ಕಾರಗಳಾಗುತ್ತಲೇ ಇರುತ್ತವೆ. ಜೈವಿಕವಾಗಿ ಆರೋಗ್ಯದಲ್ಲಿ ಕೃಷಿರಂಗದಲ್ಲಿ ಹೀಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಕಂಡು ಹಿಡಿಯಲಾಗುತ್ತದೆ. ಈ ಬಾರಿ ಹುಬ್ಬಳ್ಳಿಯ ಯುವ ಉತ್ಸಾಹಿ ಶಿವಾನಂದ ಮೂರ್ತಿ ಅವರು ಕೃಷಿ ಕ್ಷೇತ್ರಕ್ಕಾಗಿ ಹೊಸ ಮಾದರಿಯ ಸ್ಪ್ರೇಯರೊಂದನ್ನು ಸ್ವತಃ ತಯಾರಿಸಿದ್ದಾರೆ. ಈಗಿರುವ ಸ್ಪ್ರೇಯರ್‍ಗಳು ವಿಭಿನ್ನವಾಗಿ, ವೈಶಿಷ್ಟ್ಯವಾಗಿ ಮಾರುಕಟ್ಟೆಗೆ ಬಂದಿವೆ. ಈ ಸ್ಪ್ರೇಯರ್‌ನಿಂದ ಕಾರನ್ನು ಕಡಿಮೆ ನೀರಿನಿಂದ ತೊಳೆಯಲುಬಹುದು ಔಷಧಿಗಳನ್ನು ಸಿಂಪಡಿಸಬಹುದು. ನೆಲವನ್ನು ಸ್ವಚ್ಚಗೊಳಿಸಬಹುದು. ಹೀಗೆ ಬಹು ಉಪಯೋಗಿ ಯಂತ್ರ ಇದು. ಈ ಸ್ಪ್ರೇಯರ್‌ಗೆ ಒಮ್ಮೆಗಾಳಿ ತುಂಬಿಸಿ ಹೆಗಲಿಗೇರಿಸಿ ಸಿಂಪಡಿಸ ಹೊರಟರೆ ತುಂಬಿಸಿದ ದ್ರಾವಣ ಮುಗಿಯುವ ತನಕ ಗಾಳಿ ಹಾಕಬೇಕಿಲ್ಲ ಸ್ಪ್ರೇಯರ್ ಟ್ಯಾಂಕಿನಲ್ಲಿ ಗಾಳಿ ಒಳಹೋಗುವ ವಾಲ್ವ್ (ವಾಹನಗಳ ಟ್ಟೂಬ್ ವಾಲ್ವ ತರಹದ್ದು ಇದೆ. ಇದಕ್ಕೆ ಪೆಡಲ್‌ ಪಂಪ್‌ನಿಂದ ಗಾಳಿತುಂಬಿಬಿಡುವುದು ಗಾಳಿಯನ್ನು ೬೫.೭೦ ಗೇಜ್‌ನಷ್ಟು ತುಂಬಿದರೆ ಸಾಕು. ತುಂಬಿಸುವಾಗ ಹೆಚ್ಚಾದರೆ ಅದು ತನ್ನಿಂದ ತಾನೆ ಹೊರಹೋಗಲು ಆಟೋಮೆಟಿಕ್ ಸೆಫ್ಟಿ ವಾಲ್ವ ಇದೆ. ಇವೆರಡೂ ವ್ಯವಸ್ಥೆಗಳೂ ತೀರ ಸರಳವಾದವುಗಳು. ಮಾಮೂಲಿ ಟ್ರಾಕ್ಟರ್ ಟ್ಯೂಬ್‌ಗೆ ಏರ್‌ಇನ್ ಟೇಕ್‌ವಾಲ್ವನ್ನೆ ಬಳಸಲಾಗಿದೆ. ಎಲ್ಲ ಸುಲಭ ಸರಳ ವ್ಯವಸ್ಥೆಯಿಂದ ಕೂಡಿದ ಇದಕ್ಕೆ ಸ್ಪ್ರೇಮಾಡುವ ವಾಲ್ವ್‌ ಕೂಡಾ ಇದೇ ರೀತಿ ಇದೆ. ಸ್ಪ್ರೇಯಲ್ಲಿ ೩ ವಿಧದಲ್ಲಿ ಸಿಂಪರಣೆ ಮಾಡಲು ಅವಕಾಶವಿದೆ. ಮಿಸ್ಟ್ ಸ್ಪ್ರೇ ಸೇರಿದಂತೆ ಬೇರೆ ಬೇರೆ ಸಿಂಪರಣೆ ಸಾಧ್ಯವಿದೆ. ಸಣ್ಣಗಿಡಕ್ಕೆ ಸಣ್ಣ ತರದಲ್ಲೂ ದೊಡ್ಡ ಗಿಡಗಳಿಗೆ ದೊಡ್ಡದಾಗಿಯೂ ಬೇಕಾದಂತೆ ಸ್ಪ್ರೇ ಮಾಡುವ ವ್ಯವಸ್ಥೆಗಳಿದ್ದು ದ್ರಾವಣ ಅನವಶ್ಯಕವಾಗಿ ವ್ಯಯವಾಗುವುದಿಲ್ಲ. ಇದಕ್ಕಾಗಿ ಸ್ಪ್ರೇಯರ್ ಟ್ಯಾಂಕಿಯಲ್ಲಿ ಕಂಟ್ರೋಲ್ ವಾಲ್ವ್‌ ಇದೆ. ಸ್ಯಾಪ್‌ಸ್ಯಾಕ್ ಸ್ಪ್ರೇಯರ್ ಆಗಿಯೂ, ಗಟೋರ್ ಸ್ಪ್ರೇಯ‌ರಾಗಿಯೂ ಪವರ್ ಸ್ಪ್ರೇಯರ್ ಆಗಿಯೂ ಬ್ಯಾಟರಿ ಸ್ಪ್ರೇಯರ್ ಆಗಿಯೂ ಇದು ರೈತರಿಗೆ ಇದು ಅತ್ಯಂತ ಅನುಕೂಲಕರವಾಗಿದೆ.

ಸ್ಪ್ರೇಯರ್ ಟ್ಯಾಂಕಿಯನ್ನು ಅನುಕೂಲಕ್ಕಾಗಿ ಎರಡು ಬಗೆಯಲ್ಲಿ ತಯಾರಿಸಲಾಗಿದೆ. ೧೬ ಗೇಜಿದ ಗ್ಯಾಲ್ವ್‌ನೈಸ್ಡ್ ಕಬ್ಬಿಣದಲ್ಲಿ ಮಾಡಿದ ಟ್ಯಾಂಕಿ ಒಂದಾದರೆ ಇನ್ನೊಂದು ಸ್ಟೀಲಿನದು. ದ್ರಾವಣ ಯಾವುದೇ ರೀತಿಯ ರಾಸಾಯನಿಕ ಕ್ರಿಯೆಗೆ ಹಾಳಾಗದಿರುವಂತೆ ರಬ್ಬರ್‌ಕೋಟ್ ಗಾಲ್ವಾ ಮತ್ತು ಪ್ಲಾಸ್ಟಿಕ್‌ಗಳಿಂದ ಕೋಟ್ ಮಾಡಲಾಗಿದ್ದು ಯಾವುದೇ ರಾಸಾಯನಿಕ ಪರಿಣಾಮಕ್ಕೆ ಒಳಪಡಲಾರದು. ಶಿವಾ ಆಗ್ರಿ ಸ್ಪ್ರೇಯರ್ ಎಂಬ ಬ್ರ್ಯಾಂಡಿನಲ್ಲಿ ಇದನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...