Home / ಕವನ / ಕೋಲಾಟ / ದಂಡ ಬಂತವ್ವಾ ದಂಡ

ದಂಡ ಬಂತವ್ವಾ ದಂಡ

ದಂಡ ಬಂತವ್ವ ದಂಡ ಸೊಲ್ಲಾಪುರದ ದಂಡ|
ದಂಡ ನೋಡಿ ಬರತ ಹಡದವ್ವಾ| ಕೋಲೆನ್ನ ಕೋಲ||

ಹುಟ್ಟಿದ ಮಗಳವ್ವ ಕಟ್ಟಿ ಕಲ್ಲ ಇಳದಿಲ್ಲ|
ಭ್ಯಾಡ ನನ ಮಗಳ ಹೊರಿಯಾಕ| ಕೋ||

ಭ್ಯಾಡ ಭ್ಯಾಡಂದರ ಭಿರಿಭಿರಿ ಹೋಗ್ಯಾಳ|
ಹೋಗಿ ಅಗಸ್ಯಾಗ ನಿಂತಾಳ| ಕೋ||

ಢೇರ್ಯಾದ ಮ್ಯಾಲಕಿಽಯ ಬೆಳಕ| ಕೋ||

ಮುಗಲಿಲ್ಲ ಮಾಡಿಲ್ಲ ಮಿಂಚ ಗದ್ದರಣಿಲ್ಲ|
ಇದು ಯಾತದ ಬೆಳಕ ಕರಣೀಕ| ಕೋ||

ಒಬ್ಬರ ಹೋಗಂದ್ರ ಇಬ್ಬರ ಹೋಗಿದಾರ|
ಓಡ್ಹೋಗಿ ಅಕಿನ ಹಿಡದಾರ| ಕೋ||

ಇಪ್ಪತ್ತು ವರುಷದ ತುಪ್ಪುಂಡ ಕೂದಲ|
ನಾರಿ ನಿನಗಾಗಿ ಕಾಯ್ದಿದಾಳೇನ| ಕೋ||

ಹನ್ನೆರಡು ವರುಷದ ಎಣ್ಣುಂಡ ಕೂದಲ|
ಮಿತ್ರಿ ನಿನಗಾಗಿ ಕಾಯ್ದಿದಾಳೇನ| ಕೋ||

ನಾರಿ ನಿನಗಾಗಿ ಕಾಯ್ದಿದಾಳೇನ ಸೊಲ್ಲಪುರದ|
ದಂಡೀಗಿ ಧಾರಿ ಎರೆದೀದನೇನ| ಕೋ||

ಆಂಗಳದಾಗಿನ ತನುವ ಶಾವಂತಿಗ್ಹೂವ|
ಹೂ ಬಾಡಿದಾಗೊಮ್ಮ ನೆನೆಯವ್ವ| ಕೋ||

ಕುಂಬಿಽಯ ಮ್ಯಾಲಿಽನ ದುಂಡ ಶಾವಂತಿಗ್ಹೂವ|
ಹೂ ಬಾಡಿದಾಗೊಮ್ಮ ನೆನೆಯವ್ವ| ಕೋ||
*****

ಪಟ್ಟಣದ ದಾರಿಯ ಮೇಲಿರುವ ಒಂದು ಊರ ಬಳಿಯಲ್ಲಿ ದಂಡು ಬಂದಿಳದಾಗ ಒಬ್ಬ ಹೆಣ್ಣುಮಗಳು ನೋಡಲಿಕ್ಕೆಂದು ಹೋಗಿ ಡೇರೇದ ಹತ್ತಿರ ನಿಂತಿದ್ದಳು. ಒಳಗೆ ಕುಳಿತ ಅಧಿಕಾರಿಯು ಅವಳ ರೂಪಕ್ಕೆ ಮರುಳಾಗಿ ಅವಳನ್ನು ಹಿಡಿದು ತರುವುದಕ್ಕೆ ಜವಾನರನ್ನು ಕಳಿಸುತ್ತಾನೆ(೧-೫). ಈ ಸುದ್ದಿಯನ್ನು ಕೇಳಿ ಅವಳ ತಾಯಿಯು ಓಡಿಬಂದು ದುಃಖಮಾಡುತ್ತಾಳೆ (೬-೮). ಆಗ ಮಗಳು ತಾಯಿಗೆ ತನ್ನ ಸುಖದುಃಖದ ಬಗ್ಗೆ ಕುರುಹುಗಳನ್ನು ಹೇಳುತ್ತಾಳೆ (೯-೧೦).

ಹೀಗೆ ಕುರುಹು ಹೇಳುವ ಪದ್ಧತಿಯು ಬಹುಪ್ರಾಚೀನ ಕಾಲದ್ದು. ಘಟೋತ್ಕಚನು ತಾನು ಸತ್ತರೆ ಮನೆಯ ಮುಂದಿನ ಸಪ್ತತಾಳ ವೃಕ್ಷಗಳು ನೆಲಕ್ಕುರುಳುವವೆಂದು ತನ್ನ ತಾಯಿಗೆ ಕುರುಹನ್ನು ಹೇಳಿ ಯುದ್ಧಕ್ಕೆ ಹೋದ ಸಂಗತಿ ಸುಪ್ರಸಿದ್ಧವಿದೆಯಲ್ಲವೇ?

ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.

ಶಬ್ಧಪ್ರಯೋಗಗಳು:- ಢೇರೆ=ತಂಬೂ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...